Thursday, April 25, 2024
spot_img
spot_img
spot_img
spot_img
spot_img
spot_img

ವಿರುಷ್ಕಾ ದಂಪತಿ ಮಗುವಿಗೆ ಹೆಸರು ಇಟ್ಟಿದ್ಹೇಗೆ? Vicky and team ಹೇಳುತ್ತೆ ಈ ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ದಂಪತಿ 2ನೇ ಮಗುವಿನ ತಂದೆಯಾಗಿದ್ದಾರೆ. ಇದೇ ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ (baby boy) ಜನ್ಮ ನೀಡಿದ್ದಾರೆ.

ಈ ವೇಳೆ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ವಿರುಷ್ಕಾ ದಂಪತಿ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಟರ್ಕಿ (Turkey) ಮೂಲದ ಪದ ಹುಡುಕಿ ವಿರುಷ್ಕಾ ದಂಪತಿ 2ನೇ ಮಗುವಿಗೆ ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಕರಿಮಣಿ ಮಾಲೀಕ ಹಾಡಿಗೆ ಕುಣಿದ ಆ್ಯಂಕರ್ ಅನುಶ್ರೀ ; ನೆಟ್ಟಿಗರ ಕಮೆಂಟ್ಸ್ ಮಾತ್ರ ಸೂಪರೋ super.!

ಟರ್ಕಿ ಭಾಷೆಯಲ್ಲಿ ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ (moon) ಎಂದರ್ಥ. ಮಗ ಹೊಳೆಯುವ ಚಂದ್ರನಂತೆ ಅನ್ನೋ ಅರ್ಥದಲ್ಲಿ ಮುದ್ದಾದ ಹೆಸರನ್ನು ವಿರುಷ್ಕಾ ದಂಪತಿ ತಮ್ಮ ಮಗುವಿಗೆ ಇಟ್ಟಿದ್ದಾರೆ.

ಆದರೆ ಸೋಷಿಯಲ್​​ ಮೀಡಿಯಾದಲ್ಲಿ (social media) ಗುರುಗಳು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ವಿರುಷ್ಕಾ ದಂಪತಿ ಅಕಾಯ್​ ಎಂದು ಹೆಸರಿಟ್ಟರಾ ಎಂಬ ಚರ್ಚೆ ಹರಿದಾಡುತ್ತಿದೆ.

ಅಷ್ಟಕ್ಕೂ ಇಂಥದ್ದೊಂದು ಡೌಟ್ ಬಂದಿದ್ದು ನಾನು ನಂದಿನಿ ಖ್ಯಾತಿಯ ವಿಕ್ಕಿ ಆ್ಯಂಡ್​ ಟೀಮ್​! (Vicky and team ) ಇದಾಗಲೇ ಹಲವಾರು ರೀಲ್ಸ್​ಗಳನ್ನು ಮಾಡಿ ಜನರು ಹೊಟ್ಟೆ ಹುಣ್ಣಾಗುವಂರೆ ನಕ್ಕು ನಗಿಸುವ ಈ ತಂಡ ಇದೀಗ ಅಕಾಯ್​ ಹೆಸರಿನ ಅರ್ಥದ ಕುರಿತು ರೀಲ್ಸ್ ಮಾಡಿದ್ದು, ಅದನ್ನು ನೋಡಿದ ಫಾಲೋವರ್ಸ್ (followers) ಅಂತು ಬಿದ್ದು ಬಿದ್ದು ನಗುತ್ತಿದ್ದಾರೆ.

ಇದನ್ನು ಓದಿ : Video : ನೋಡುಗರಿಗೆ ನಡುಕ ಹುಟ್ಟಿಸಿದ ಆರ್. ಮಾಧವನ್ ‘ಶೈತಾನ್’ ಟ್ರೇಲರ್.!

ಇದರಲ್ಲಿ ವಿಕ್ಕಿ ಅನುಷ್ಕಾ ಆಗಿದ್ದಾರೆ. ಅವರು ಗಂಡ ವಿರಾಟ್ ಕೊಹ್ಲಿ ಪಾತ್ರಧಾರಿಯ ಜೊತೆ ಗುರುಗಳ ಬಳಿ ಹೋಗಿದ್ದಾರೆ. ಅಲ್ಲಿ ಒಂದಿಷ್ಟು ಮಾತುಕತೆ ನಡೆಯುತ್ತದೆ. ಅದು ಏನಂತಾ ಈ ವಿಡಿಯೋ ನೀವೆ ನೋಡಿ.

 

View this post on Instagram

 

A post shared by Vicky Pedia (@vickypedia_007)

spot_img
spot_img
spot_img
- Advertisment -spot_img