ಜನಸ್ಪಂದನ ನ್ಯೂಸ್ ಉಡುಪಿ : ಉಡುಪಿ (Udupi) ನಗರದಲ್ಲಿ ಲಾಡ್ಜ್ ಒಂದರಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಲಾಗಿದೆ. ಈ ಘಟನೆ ಭಾನುವಾರ (ಆಗಸ್ಟ್ 24) ನಡೆದಿದೆ.
ಮಾಹಿತಿಯ ಪ್ರಕಾರ, ಉಡುಪಿ (Udupi) ಯ ಮೂಡನಿಡಂಬೂರು ಗ್ರಾಮದಲ್ಲಿರುವ ಲಾಡ್ಜ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಬಡಿಗೇರ್ ಅವರ ನೇತೃತ್ವದ ತಂಡ ದಾಳಿ ನಡೆಸಿತು.
LPG : ಹೋಮ್ ಡೆಲಿವರಿ ಮಾಡುವ ಸಿಲಿಂಡರ್‌ಗೆ ಹೆಚ್ಚುವರಿ ಹಣ ಕೊಡಬೇಡಿ ; ಕೇಳಿದರೆ ದೂರು ಕೊಡಿ.!
ಈ ವೇಳೆ ಲಾಡ್ಜ್‌ನ ಎರಡನೇ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ, ಕೆಲಸ ಕೊಡಿಸುವ ನೆಪದಲ್ಲಿ ಶರತ್ ಅಲಿಯಾಸ್ ಮೊಹಮ್ಮದ್ ಫಯಾಜ್ ಎಂಬ ವ್ಯಕ್ತಿ ತಮಗೆ ಉಡುಪಿ (Udupi) ಗೆ ಕರೆದುಕೊಂಡು ಬಂದು, ಲಾಡ್ಜ್‌ನಲ್ಲಿ ಕೊಠಡಿ ಬುಕ್ ಮಾಡಿ ಅಕ್ರಮ ದಂಧೆ ನಡೆಸುತ್ತಿದ್ದರೆಂದು ಮಹಿಳೆ ಹೇಳಿಕೊಟ್ಟಿದ್ದಾರೆ.
Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?
ಸದ್ಯ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಆರೋಪಿಯ ವಿರುದ್ಧ ಉಡುಪಿ (Udupi) ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವನ್ನು ಕ್ರಮಾಂಕ 37/2025ರಲ್ಲಿ BNS ಕಲಂ 143, 3(5), ಕಲಂ 3, 4, 5, 6 ಅಡಿ ದಾಖಲಿಸಲಾಗಿದೆ.
ಹೃದಯಾಘಾತದಿಂದ ದೂರ ಇರಲು ತಪ್ಪದೇ ಸೇವಿಸಲೇಬೇಕಾದ Vitamin ಇದು.!
ಜನಸ್ಪಂದನ ನ್ಯೂಸ್, ಆರೋಗ್ಯ : ಹೃದ್ರೋಗ ತಡೆಯಲು ಸಹಾಯಕವಾಗುವ ವಿಟಮಿನ್ (Vitamin) ಬಗ್ಗೆ ನಿಮಗೆ ಗೊತ್ತೇ.? ಬನ್ನಿ ಇಂದು ನಾವೂ ಹೃದಯಕ್ಕೆ ರಕ್ಷಕವಾಗಿರುವ ಆ ವಿಟಮಿನ್ ಬಗ್ಗೆ ತಿಳಿಯೋಣ.!
ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ಕಿರಿಯ ವಯಸ್ಸಿನವರಿಗೂ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ತಜ್ಞರ ಪ್ರಕಾರ, ಇದಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಪರಿಸರದ ಪರಿಣಾಮ. ಇತ್ತೀಚಿನ ಜರ್ನಲ್ ಆಫ್ ಸರ್ಕ್ಯುಲೇಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ ಕೆ (Vitamin – K) ಹೆಚ್ಚಾಗಿ ಸೇವಿಸುವವರು ಹೃದ್ರೋಗದ ಅಪಾಯದಿಂದ ದೂರ ಇರುತ್ತಾರೆ.
Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?
ಹೃದಯಕ್ಕೆ ವಿಟಮಿನ್ ಕೆ (Vitamin – K) ನೀಡುವ ಲಾಭಗಳು :
- ರಕ್ತನಾಳಗಳ ಆರೋಗ್ಯ : ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಅಪಧಮನಿಗಳ ಗಟ್ಟಿಯಾಗುವುದನ್ನು ತಡೆಯುತ್ತದೆ.
- ರಕ್ತದೊತ್ತಡ ನಿಯಂತ್ರಣ : ರಕ್ತನಾಳಗಳಲ್ಲಿ ಖನಿಜ ಸಂಗ್ರಹ ತಡೆಯುವ ಮೂಲಕ ಹೈ ಬ್ಲಡ್ ಪ್ರೆಷರ್ ಅಪಾಯ ಕಡಿಮೆ ಮಾಡುತ್ತದೆ.
- ರಕ್ತ ಪರಿಚಲನೆ ಸುಧಾರಣೆ : ರಕ್ತ ಪ್ರವಾಹವನ್ನು ಸುಗಮಗೊಳಿಸಿ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
- ಹೃದಯಾಘಾತದ ಅಪಾಯ ತಗ್ಗು : ವಯಸ್ಸಾದಂತೆ ಹೆಚ್ಚಾಗುವ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಕೆ (Vitamin – K) ದೊರೆಯುವ ಪ್ರಮುಖ ಆಹಾರಗಳು:
- ಹಸಿರು ತರಕಾರಿಗಳು : ಪಾಲಕ್, ಗೊಂಗುರ, ಮೆಂತ್ಯ.
- ಹುದುಗಿಸಿದ ಆಹಾರಗಳು : ಮೊಸರು, ಉಪ್ಪಿನಕಾಯಿ.
- ಮಾಂಸ : ಮೀನು, ಮಾಂಸ, ಮೊಟ್ಟೆಗಳು.
- ಡೈರಿ ಉತ್ಪನ್ನಗಳು : ಹಾಲು, ಚೀಸ್.
Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ದಿನನಿತ್ಯದ ಅವಶ್ಯಕತೆ :
ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ವಯಸ್ಕರಿಗೆ ದಿನಕ್ಕೆ 70 ರಿಂದ 90 ಮೈಕ್ರೋಗ್ರಾಂ ವಿಟಮಿನ್ ಕೆ ಅಗತ್ಯವಿದೆ. ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲದೆ ಮೂಳೆಗಳನ್ನು ಬಲಪಡಿಸಲು ಸಹ ಸಹಾಯಕ.
ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಕೆ ಇರುವ ಪದಾರ್ಥಗಳನ್ನು ಸೇರಿಸುವುದು ಆರೋಗ್ಯಕ್ಕೆ ಲಾಭಕಾರಿ.
👉 ಈ ಲೇಖನ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಯಾವುದೇ ರೀತಿಯ ಆಹಾರ ಅಥವಾ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.