ಜನಸ್ಪಂದನ ನ್ಯೂಸ್, ಡೆಸ್ಕ್ : ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ಅಚ್ಚರಿ ಹುಟ್ಟಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ, ಒಂದೇ ಕುಟುಂಬದ ಇಬ್ಬರು ಸೊಸೆಯಂದಿರೊಂದಿಗೆ (sisters-in-law) ಸಂಬಂಧ ಬೆಳೆಸಿ, ಇಬ್ಬರನ್ನೂ ಒಂದೇ ಬಾರಿ ಮನೆ ಬಿಡಿಸಿ ಓಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ಘಟನೆ ಗ್ರಾಮದ ಜನರಲ್ಲೇ ಚರ್ಚೆಯ ವಿಷಯವಾಗಿದೆ.
ಹೇಗೆ ನಡೆದಿತು ಘಟನೆ?
ಮಂಗಳವಾರ ಬೆಳಿಗ್ಗೆ, ಮನೆಗೆ ಬಂದ ಕುಟುಂಬ ಸದಸ್ಯರು ಬೆಚ್ಚಿಬಿದ್ದರು. ಮನೆಯೊಳಗೆ ತಾಯಿ, ತಂದೆ ಮತ್ತು ಮಗಳುಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು. ಇಬ್ಬರು ಸೊಸೆಯಂದಿರು (sisters-in-law/ ಸಹೋದರಿಯರು) ಮನೆಯಲ್ಲಿರಲಿಲ್ಲ. ತಕ್ಷಣವೇ ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡ ನಂತರ, ಏನಾಯಿತು ಎಂಬುದರ ನಿಗೂಢತೆ ಬಯಲಾಗಿತು. ಮನೆಯವರ ಪ್ರಕಾರ, ಆರಿಫ್ ಎಂಬ ಗ್ರಾಮದ ಯುವಕ ಸೋಮವಾರ ಸಂಜೆ ಮನೆಗೆ ಬಂದು ಇಬ್ಬರು ಸೊಸೆಯಂದಿರೊಂದಿಗೆ (sisters-in-law) ಮಾತನಾಡಿ ಏನೋ ನೀಡಿ ಹೊರಟಿದ್ದ.
ನಂತರ ಇಬ್ಬರು ಸೊಸೆಯಂದಿರು (sisters-in-law) ಚಹಾ ಮಾಡಿದರು. ಕುಟುಂಬ ಸದಸ್ಯರು ಆ ಚಹಾ ಕುಡಿಯುತ್ತಿದ್ದಂತೆ ಅಸ್ವಸ್ಥರಾದರು. ಇದೇ ಸಮಯದಲ್ಲಿ ಇಬ್ಬರು ಮಹಿಳೆಯರು ಮನೆ ಬಿಟ್ಟು ಆರಿಫ್ ಜೊತೆ ಪರಾರಿಯಾದರು.
ಕುಟುಂಬದ ಆರೋಪ :
ಬಾಧಿತರಾದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಪ್ರಕಾರ, ಯಾಸೀನ್ ಮತ್ತು ಅನಿಸುರ್ ಎಂಬುವವರ ಹೆಂಡತಿಗಳಾದ ನಜ್ಮಾ ಮಂಡಲ್ ಮತ್ತು ಕುಲ್ಚನ್ ಮಲ್ಲಿಕ್ ಇಬ್ಬರೂ ಆರಿಫ್ ಜೊತೆ ಓಡಿ ಹೋಗಿದ್ದಾರೆ. ಇಬ್ಬರು ಸಹೋದರರು ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಇದೇ ಮೊದಲ ಬಾರಿಗೆ ಅಲ್ಲ, ಹಿಂದೆಯೂ ಆರಿಫ್ ಇಬ್ಬರನ್ನೂ (sisters-in-law) ಕರೆದುಕೊಂಡು ಹೋಗಿದ್ದನು. ಆದರೆ, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕುಟುಂಬವು ಒಮ್ಮೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಯಾಸೀನ್ ಹೇಳಿದ್ದಾರೆ.
ಆರಿಫ್ ಪತ್ನಿಯ ಆಕ್ರೋಶ :
ಆರಿಫ್ ಕೂಡ ವಿವಾಹಿತನಾಗಿದ್ದು, ಅವನ ಪತ್ನಿ ಸೋನಿಯಾ ಕೂಡ ಗಂಭೀರ ಆರೋಪ ಹೊರಿಸಿದ್ದಾರೆ. “ಆರಿಫ್ ನನ್ನ ಕುಟುಂಬವನ್ನಷ್ಟೇ ಅಲ್ಲ, ಯಾಸೀನ್ ಮತ್ತು ಅನಿಸುರ್ ಅವರ ಕುಟುಂಬವನ್ನೂ ಹಾಳುಮಾಡಲು ಯತ್ನಿಸುತ್ತಿದ್ದಾನೆ” ಎಂದು ಅವಳು ತಿಳಿಸಿದ್ದಾರೆ.
ಸೋನಿಯಾ ಕೂಡ ಪೊಲೀಸರು ಆರಿಫ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನಾಪತ್ತೆಯಾಗಿರುವ ಮೂವರ ಹುಡುಕಾಟ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.
Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ (Dowry) ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಿಂದ ಹಾರಿರುವ ಆಘಾತಕಾರಿ ಘಟನೆ ನಡೆದಿದೆ.
Hotel ನಲ್ಲಿ ಹೃದಯಾಘಾತದಿಂದ ಮೃತಪಟ್ಟ 66 ವರ್ಷದ ವ್ಯಕ್ತಿ ; ಕಾರಣ ಕೇಳಿದ್ರೆ ಶಾಕ್ ಆಗತ್ತೀರಾ.!
ಈ ವೇಳೆ ಗಾಯಗೊಂಡ ಮಹಿಳೆ ಮೇಲೆ ಆಕೆಯ ಅತ್ತೆ–ಮಾವ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಕ್ಷಿಣೆ (Dowry) ಕಿರುಕುಳದ ಘಟನೆಯು ಇಗ್ಲಾಸ್ ತಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ. ಅರ್ಚನಾ ಎಂದು ಗುರುತಿಸಲಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!
ವಿಡಿಯೋದಲ್ಲಿ ಮಹಿಳೆ ವರದಕ್ಷಿಣೆ (Dowry) ಕಿರುಕುಳಕ್ಕೆ ಎರಡು ಅಂತಸ್ತಿನ ಮನೆಯ ಛಾವಣಿಯ ಅಂಚಿನಲ್ಲಿ ನಿಂತಿರುವುದು, ಅತ್ತೆ–ಮಾವ ಅವಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಹಾರಿದ ತಕ್ಷಣ ನೆಲಕ್ಕೆ ಬಿದ್ದ ನಂತರ ಹೊಡೆಯುತ್ತಿರುವ ದೃಶ್ಯಗಳು ದಾಖಲಾಗಿವೆ.
ಈ ಸಮಯದಲ್ಲಿ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ “ಮರ್ ಜಾನೆ ದೋ” (ಅವಳು ಸಾಯಲಿ) ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಬಂದಿದೆ. ಇನ್ನು ಘಟನೆಯ ಸಂದೃಭದಲ್ಲಿ ಅಪ್ರಾಪ್ತ ಮಗು ಅಳುತ್ತಿರುವ ಅಮ್ಮಾ ಅಮ್ಮಾ ಎನ್ನುವ ಧ್ವನಿಯೂ ಸಹ ಕೇಳುತ್ತಿದೆ.
ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!
ಮಹಿಳೆ ಅರ್ಚನಾ ಸುಮಾರು ಆರು ವರ್ಷಗಳ ಹಿಂದೆ ಸೋನು ಎಂಬುವವರನ್ನು ವಿವಾಹವಾಗಿದ್ದರು. ಮದುವೆ ವೇಳೆ ಅವರ ಕುಟುಂಬವು ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ನಂತರವೂ ಅತ್ತೆ–ಮಾವಂದಿರು ಬುಲೆಟ್ ಮೋಟಾರ್ ಸೈಕಲ್ ಮತ್ತು 5 ಲಕ್ಷ ರೂಪಾಯಿ ನಗದು (Dowry) ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಹೊರಬಂದಿದೆ.
ಈ ಘಟನೆಯ ಸಂಬಂಧ Dowry ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ವರದಕ್ಷಿಣೆ (Dowry) ಕಿರುಕುಳಕ್ಕೆ ಮನೆಯ ಮೇಲಿಂದ ಹಾರುತ್ತಿರುವ ಮಹಿಳೆಯ ವಿಡಿಯೋ :
अलीगढ़, यूपी: ससुरालियो की प्रताड़ना से परेशान होकर विवाहिता ने छत से लगाई छलांग। वीडियो बना रही महिला ने भी उन्हें बचाने की कोशिश नहीं करी, बाद में रोने का दिखावा करने लगी। वीडियो में साफ तौर से सुना जा रहा है कि महिला को कूदने पर उकसाया गया। महिला के जमीन पर गिरते ही एक पुरुष… pic.twitter.com/6UihbQoUjN
— Krishna Chaudhary (@KrishnaTOI) September 3, 2025