ಜನಸ್ಪಂದನ ನ್ಯೂಸ್, ಡೆಸ್ಕ್ : ಲೈಸೆನ್ಸ್ (License) ಕೇಳಿದ ಟ್ರಾಫಿಕ್ ಪೊಲೀಸರ ಮೇಲೆ ಅಪ್ಪ-ಮಗ ಸೇರಿ ಹಾಡಹಗಲೇ ಹಲ್ಲೆ ಮಾಡಿದ್ದಾರೆಂದು ಹೇಳಲಾದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ಮಹಾರಾಷ್ಟ್ರದ ನಲ್ಲಸೋಪಾರಾದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದ ಘಟನೆ ಬಹುತೇಕ ಜನರ ಗಮನಕ್ಕೆ ಬಂದಿದೆ. ಟ್ರಾಫಿಕ್ ಪೊಲೀಸರು ನಗಿಂದಾಸ್ ಪದಾದ ಸಿತಾರಾ ಬೇಕರಿ ಬಳಿ ಡ್ರೈವಿಂಗ್ ಲೈಸನ್ಸ್ (License) ತಪಾಸಣೆಯ ವೇಳೆ ವಾಹನ ಒಂದನ್ನು ಇಬ್ಬರು ಪೊಲೀಸ್ ಸಿಬ್ಬಂದಿಗಳು ತಡೆದ್ದಿದ್ದಾರೆ.
ಈ ವೇಳೆ ಟ್ರಾಪಿಕ್ ಪೊಲೀಸ್ ಲೈಸೆನ್ಸ್ (License) ತೋರಿಸುವಂತೆ ಕೇಳಿದ್ದಾರೆ. ಸವಾರರು ಲೈಸನ್ಸ್ (License) ತೋರಿಸುವ ಬದಲಾಗಿ ಸ್ಥಳೀಯ ಅಪ್ಪ-ಮಗ ಸೇರಿ ಟ್ರಾಪಿಕ್ ಪೊಲೀಸ್‌ರನ್ನು ಅಸಭ್ಯವಾಗಿ ಮಾತನಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ.
ಪೊಲೀಸರು ಹೇಳುವುದೇನು.?
ಡ್ರೈವಿಂಗ್ ಲೈಸೆನ್ಸ್ (License) ಇಲ್ಲದ ಕಾರಣ ಯುವಕನನ್ನು ಪೋಲೀಸ್ ಸಿಬ್ಬಂದಿಗಳಾದ ಹನುಮಂತ ಸಾಂಗಲೆ ಮತ್ತು ಶೇಷನಾರಾಯಣ ಆಠರೆ ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ್ದಾನೆ ಮತ್ತು ಯುವಕ ತನ್ನ ತಂದೆಯನ್ನು ಸ್ಥಳಕ್ಕೆ ಕರೆಸಿದ್ದಾನೆ.
ಯುವಕನ ತಂದೆ ಆಗಮಿಸಿದ ನಂತರ, ಅಪ್ಪ-ಮಗ ಇಬ್ಬರೂ ಸೇರಿ ಪೋಲೀಸರುಗಳೊಂದಿಗೆ ಕೇವಲ ಲೈಸನ್ಸ್ (License) ಗಾಗಿ ಈ ರೀತಿ ವಾದಕ್ಕೆ ಇಳಿದ್ದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದಂತೆಯೇ ಅವರಿಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದ್ದಾರೆ.
ಇದನ್ನು ಓದಿ : Teacher : ವಿದ್ಯಾರ್ಥಿನಿ ಜೊತೆ ಸ್ಟಾಫ್ ರೂಂನಲ್ಲಿ ಅಸಭ್ಯ ವರ್ತನೆ : ಶಿಕ್ಷಕನ ವಿರುದ್ಧ ಆಕ್ರೋಶ.!
ಹೀಗೆ ಹಲ್ಲೆ ಮಾಡಿದ ಆರೋಪಿತ ಯುವಕನನ್ನು ಪಾರ್ಥ ನಾರ್ಕರ್ (ಮಗ) ಮತ್ತು ಮಂಗೇಶ ನಾರ್ಕರ್ (ತಂದೆ) ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂಡ ನಲ್ಲಸೋಪಾರಾ ನಿವಾಸಿಗಳು ಎಂದು ತಿಳಿದುಬಂದಿದೆ.
ವಿಡಿಯೋ ಸಾಬೀತುಗಳು ಮತ್ತು ಸಾರ್ವಜನಿಕ ಪ್ರತಿಕ್ರಿಯೆ :
ಮಾಹಿತಿಯ ಪ್ರಕಾರ, ಈ ಘಟನೆ ಹಾಡಹಗಲೇ ಸಾರ್ವಜನಿಕರ ಮುಂದೆಯೇ ನಡೆದಿದ್ದು, ಇದರಿಂದ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಸಾರ್ವಜನಿಕ ಸೇವಕರ ಗೌರವ ಕಾಪಾಡಬೇಕು ಎಂಬ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮ :
- ತುಳಿಂಜ್ ಪೊಲೀಸ್ ಠಾಣೆ ಈಗಾಗಲೇ ಈ ಕುರಿತು ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.
- ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಮತ್ತು ಕರ್ತವ್ಯದ ಅಡಚಣೆ ಮಾಡುವ ಹಕ್ಕುಬದ್ಧ ಕಲಂಗಳು ಅನ್ವಯವಾಗುವ ಸಾಧ್ಯತೆ ಇದೆ.
- ಮೊಬೈಲ್ ಕ್ಲಿಪ್‌ಗಳನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ.
ಲೈಸನ್ಸ್ (License) ಟ್ರಾಪಿಕ್ ಪೊಲೀಸರ ಮೇಲೆ ಹಲ್ಲೆಯ ವಿಡಿಯೋ :
IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತ ಸರ್ಕಾರದ ಗೃಹ ಸಚಿವಾಲಯವು ಗುಪ್ತಚರ ಬ್ಯೂರೋ (Intelligence Bureau – IB) ನಲ್ಲಿ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್-II/ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 15 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಗಳ ವಿಭಾಗವಾರು ವಿವರಗಳು:
ವರ್ಗ | ಹುದ್ದೆಗಳ ಸಂಖ್ಯೆ |
---|---|
ಸಾಮಾನ್ಯ (UR) | 1,537 |
ಆರ್ಥಿಕವಾಗಿ ಹಿಂದುಳಿದ (EWS) | 442 |
ಇತರೆ ಹಿಂದುಳಿದ ವರ್ಗಗಳು (OBC) | 946 |
ಪರಿಶಿಷ್ಟ ಜಾತಿ (SC) | 566 |
ಪರಿಶಿಷ್ಟ ಪಂಗಡ (ST) | 226 |
ಈ IB ಅಧಿಸೂಚನೆಯಡಿ ಒಟ್ಟು 3,717 ಹುದ್ದೆಗಳನ್ನು ಭರ್ತಿ ಮಾಡಲಾಗಲಿದೆ.
ಅರ್ಹತಾ ಮಾನದಂಡಗಳು :
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು. ಕಂಪ್ಯೂಟರ್ ಪ್ರಾವೀಣ್ಯತೆ ಕಡ್ಡಾಯವಲ್ಲ, ಆದರೂ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ : Gorilla :ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?
ವಯೋಮಿತಿ :
- ನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು.
- ಗರಿಷ್ಠ ವಯಸ್ಸಿನ ಮಿತಿ : 27 ವರ್ಷಗಳು.
NOTE : IB ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಹುದ್ದೆಯ ಹೆಸರು ಮತ್ತು ಸಂಬಳ ಶ್ರೇಣಿ (7ನೇ ವೇತನ ಆಯೋಗದ ಪ್ರಕಾರ) :
ಹುದ್ದೆಯ ಹೆಸರು | ವೇತನ ಶ್ರೇಣಿ (ರೂ.ಗಳಲ್ಲಿ) |
---|---|
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ- I/ಕಾರ್ಯನಿರ್ವಾಹಕ (ಗ್ರೂಪ್-A) : | ರೂ.47,600 – ರೂ.1,51,100 (ಮ್ಯಾಟ್ರಿಕ್ಸ್ ಪದವಿ 8) |
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ : | ರೂ.44,900 –ರೂ.1,42,400 (ಮ್ಯಾಟ್ರಿಕ್ಸ್ ಪದವಿ 7) |
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- I/ಕಾರ್ಯನಿರ್ವಾಹಕ : | ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5) |
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- II/ಕಾರ್ಯನಿರ್ವಾಹಕ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
ಸಹಾಯಕ ಇಂಟೆಲಿಜೆನ್ಸ್ ಆಫೀಸರ್-I (ಮೊಟಾರ್ ಸಾರಿಗೆ) : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
ಸಹಾಯಕ ಇಂಟೆಲಿಜೆನ್ಸ್ ಆಫೀಸರ್-II (ಮೊಟಾರ್ ಸಾರಿಗೆ) : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
ಭದ್ರತಾ ಸಹಾಯಕ (ಮೊಟಾರ್ ಸಾರಿಗೆ) : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
ಹಲ್ಲೆಯ ತಾಂತ್ರಿಕ ಕಮ್ : | ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5) |
ಎಂಜಿನ್ಮನ್ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
ಅರ್ಜಿ ಶುಲ್ಕ :
ವರ್ಗ | ಶುಲ್ಕ (ರೂ.) |
---|---|
ಸಾಮಾನ್ಯ / OBC / EWS : | ರೂ. 650/- |
SC / ST / PwD : | ರೂ. 550/- |
- ಆನ್‌ಲೈನ್ ಪಾವತಿಯ ಮೂಲಕ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
- “IB ACIO Recruitment 2025” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರೆ ವಿವರಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ.
- ಛಾಯಾಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಪಾವತಿ ಗೇಟ್‌ವೇ ಮೂಲಕ ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ : KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಂತಿಮ ಆಯ್ಕೆ :
ಲಿಖಿತ, ವಿವರಣಾತ್ಮಕ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ನಡೆಯುತ್ತದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜುಲೈ 19, 2025.
- ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : ಆಗಸ್ಟ್ 10, 2025
ಪ್ರಮುಖ ಲಿಂಕ್ :
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಮೂಲಕ ಅರ್ಜಿ ಸಲ್ಲಿಸಬಹುದು.