ಜನಸ್ಪಂದನ ನ್ಯೂಸ್, ಡೆಸ್ಕ್ : ಗುರುಗ್ರಾಮದಲ್ಲಿ ಜಪಾನ್ ಪ್ರವಾಸಿಗರಿಂದ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಿಗೇ, ಸಂಚಾರಿ ಪೊಲೀಸ್ (Police) ಇಲಾಖೆಯ ಮೂವರು ಸಿಬ್ಬಂದಿಯನ್ನು ಅಮಾನತು (Suspended) ಗೊಳಿಸಲಾಗಿದೆ.
ಮಾಹಿತಿಯ ಪ್ರಕಾರ, ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗನಿಗೆ ಸಂಚಾರಿ ಪೊಲೀಸರು (Police) ರೂ.1,000 ದಂಡ ವಿಧಿಸಿದ್ದರು. ಆದರೆ, ಆ ದಂಡಕ್ಕೆ ಯಾವುದೇ ರಸೀದಿ ನೀಡಲಾಗಿರಲಿಲ್ಲ. ಇದರಿಂದಾಗಿ ವಿಡಿಯೋ ವೈರಲ್ ಆಗಿ, ಲಂಚ ಸ್ವೀಕರಿಸುವ ಪ್ರಕರಣಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಗ್ರಾಮ ಸಂಚಾರಿ ಪೊಲೀಸ (Police) ರು, “ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ ಸಿಬ್ಬಂದಿಗಳ ಅಸಭ್ಯ ವರ್ತನೆ ಬಯಲಾಗಿದೆ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ಬದ್ಧತೆಯ ಭಾಗವಾಗಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಕರಣ್ ಸಿಂಗ್, ಶುಭಂ ಹಾಗೂ ಭೂಪೇಂದ್ರ ಎಂಬ ಸಿಬ್ಬಂದಿಯನ್ನು ಅಮಾನತು (Suspended) ಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮುಂದುವರೆದು, “ಸಾರ್ವಜನಿಕ ಸೇವೆಯಲ್ಲಿ ನಾವೆಂದಿಗೂ ಉನ್ನತ ಮಟ್ಟದ ಸಮಗ್ರತೆಯನ್ನು ಕಾಪಾಡುತ್ತೇವೆ. ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಇಂತಹ ಘಟನೆಗಳನ್ನು ತಕ್ಷಣ ವರದಿ ಮಾಡುವಂತೆ ಸಾರ್ವಜನಿಕರಿಗೆ ಮನವಿ” ಮಾಡಿದ್ದಾರೆ.
ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?
ಘಟನೆಯ ಹಿನ್ನಲೆ : ಸ್ಕೂಟರ್‌ನಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗನಿಂದ ಕಾರ್ಡ್ ಮೂಲಕ ದಂಡ ಪಾವತಿಸಿಕೊಳ್ಳಲು ನಿರಾಕರಿಸಿದ ಪೊಲೀಸ್ (Police) ರು ನಗದು ಪಾವತಿಗೆ ಒತ್ತಾಯಿಸಿದ್ದರು. ಬಳಿಕ ಪ್ರವಾಸಿಗನು ರೂ.500 ಮುಖಬೆಲೆಯ ಎರಡು ನೋಟುಗಳನ್ನು ನೀಡಿದ್ದಾರೆ.
ಪೊಲೀಸ (Police) ರಿಗೆ ಹಣ ನೀಡುತ್ತಿರುವ ಈ ದೃಶ್ಯವನ್ನು ಮೆಟಾ ಸ್ಮಾರ್ಟ್ ಗ್ಲಾಸ್ ಮೂಲಕ ರೆಕಾರ್ಡ್ ಮಾಡಲಾಗಿತ್ತು. ರೆಕಾರ್ಡ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ತಕ್ಷಣವೇ ಘಟನೆ ಬೆಳಕಿಗೆ ಬಂದಿದೆ.
ಹಣ ಪಡೆಯುತ್ತಿರುವ ಪೊಲೀಸರ (Police) ವಿಡಿಯೋ :
View this post on Instagram
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತ ಹೆಚ್ಚುವರಿ ಕೊಬ್ಬು (Fat) ಕೇವಲ ಬೊಜ್ಜಿನ ಲಕ್ಷಣ ಮಾತ್ರವಲ್ಲ, ಇದು ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮತೋಲನ ಆಹಾರದ ಪರಿಣಾಮವೂ ಆಗಿದೆ.
ಹೊಟ್ಟೆಯಲ್ಲಿ ನಿಧಾನವಾಗಿ ಹೆಚ್ಚುವ ಕೊಬ್ಬು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ತಜ್ಞರ ಪ್ರಕಾರ, ಹೊಟ್ಟೆಯ ಕೊಬ್ಬನ್ನು “ವಿಸ್ಸರಲ್ ಫ್ಯಾಟ್” ಎಂದು ಕರೆಯಲಾಗುತ್ತದೆ.
Car : ಗಣೇಶೋತ್ಸವ ಮೆರವಣಿಗೆಯಲ್ಲಿ ಕಾರು ಡಿಕ್ಕಿ : 2 ಸಾವು, ಮೂವರಿಗೆ ಗಂಭೀರ ಗಾಯ.!
ಇದು ಯಕೃತ್ತು, ಮೂತ್ರಪಿಂಡಗಳು, ಕರುಳಿನಂತಹ ಆಂತರಿಕ ಅಂಗಗಳ ಸುತ್ತಲೂ ಸಂಗ್ರಹವಾಗುತ್ತಿದ್ದು, ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತದೆ.
ಪರಿಣಾಮವಾಗಿ ಮಧುಮೇಹ, ಹೃದಯ ಸಮಸ್ಯೆಗಳು, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಮಹಿಳೆಯರಲ್ಲಿ ಪಿಸಿಒಡಿ ಮತ್ತು ಹಾರ್ಮೋನು ಅಸಮತೋಲನಕ್ಕೂ ಹೊಟ್ಟೆಯ ಕೊಬ್ಬು (Fat) ಕಾರಣವಾಗಬಹುದು.
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರ ಪ್ರಕಾರ, ಹೊಟ್ಟೆಯ ಕೊಬ್ಬು (Fat) ಹೆಚ್ಚಾಗಲು ಮುಖ್ಯ ಕಾರಣಗಳು ಇವು:
- ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ – ಅತಿಯಾಗಿ ಅನ್ನ, ರೊಟ್ಟಿ, ಬ್ರೆಡ್ ಸೇವನೆಯಿಂದ ಕೊಬ್ಬು ಶೇಖರಣೆಯಾಗುತ್ತದೆ.
- ಸಂಸ್ಕರಿತ ಆಹಾರಗಳು – ಪ್ಯಾಕ್ ಮಾಡಿದ ಅಥವಾ ಪ್ರಾಸೆಸ್ಡ್ ಫುಡ್‌ಗಳಲ್ಲಿ ಫೈಬರ್ ಕಡಿಮೆಯಾಗಿದ್ದು, ಕೊಬ್ಬು (Fat) ಬೇಗನೆ ಜಮೆಯಾಗುತ್ತದೆ.
- ವ್ಯಾಯಾಮದ ಕೊರತೆ – ನಿಧಾನ ನಡಿಗೆ ಸಾಕಾಗದೇ, ಚುರುಕಾದ ನಡಿಗೆ, ಓಟ ಅಥವಾ ಕಾರ್ಡಿಯೋ ವ್ಯಾಯಾಮ ಅಗತ್ಯ.
- ಒತ್ತಡ ಮತ್ತು ನಿದ್ರಾಹೀನತೆ – ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.
- ಆನುವಂಶಿಕ ಕಾರಣಗಳು – ಕೆಲವರಲ್ಲಿ ಕುಟುಂಬ ಪರಂಪರೆಯಿಂದಲೂ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ಹೊಟ್ಟೆಯ ಕೊಬ್ಬಿನಿಂದ (Fat) ರಕ್ಷಿಸಿಕೊಳ್ಳುವ ಮಾರ್ಗಗಳು :
- ಪ್ರತಿದಿನ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ.
- ಆಹಾರದಲ್ಲಿ ಹಣ್ಣು-ತರಕಾರಿಗಳಂತಹ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸಿ.
- ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಭ್ಯಾಸ ಮಾಡಿ.
- ನಿದ್ರೆ ಸರಿಯಾಗಿ ಪಡೆಯುವುದು ಅತ್ಯಂತ ಅಗತ್ಯ.
- ತಡರಾತ್ರಿ ಎಚ್ಚರವಾಗದೇ, ನಿಗದಿತ ಸಮಯದಲ್ಲಿ ಮಲಗಿ ಎಚ್ಚರವಾಗುವುದು ಆರೋಗ್ಯಕರ.
- ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್ ಸೇವನೆಯನ್ನು ತಗ್ಗಿಸಿ.
Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!
ಹೊಟ್ಟೆಯ ಕೊಬ್ಬು (Fat) ಕೇವಲ ಬಾಹ್ಯ ಸೌಂದರ್ಯ ಸಮಸ್ಯೆಯಲ್ಲ, ಇದು ಗಂಭೀರ ಆರೋಗ್ಯ ಅಪಾಯಗಳಿಗೂ ಕಾರಣವಾಗಬಹುದು. ಆದ್ದರಿಂದ ಈಗಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ.
Disclaimer : This article is based on reports and information available on the internet. Janaspandhan News is not affiliated with it and is not responsible for it.