Friday, October 18, 2024
spot_img
spot_img
spot_img
spot_img
spot_img
spot_img
spot_img

2 ಗಂಟೆಗಳಲ್ಲಿ ಫೋನ್​ ನಂಬರ್‌ ಬ್ಲಾ‌ಕ್‌ ಆಗುತ್ತೆ, 9 ಒತ್ತಿ; ಈ call ಬಂದ್ರೆ ಹುಷಾರ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಜನರು ಮೋಸಗೊಳ್ಳುತ್ತಿರುವ ಹೊಸ ಹಗರಣವೆಂದರೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಾಲ್ ಸ್ಕ್ಯಾಮ್.

ಇದನ್ನು ಓದಿ : Job : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.!

ಈಗಾಗಲೇ ಹಲವಾರು ರೀತಿಯಲ್ಲಿ ಮೊಬೈಲ್‌ ಕರೆಗಳು ಬಂದು ಗ್ರಾಹಕರನ್ನು ಮೋಸದ ಬಲೆಯಲ್ಲಿ ಸಿಲುಕಿಸಿರುವ ಘಟನೆಗಳು ನಡೆದಿವೆ. ಫೋನ್‌ ಬಂದ ವೇಳೆ ಇದನ್ನು ಒತ್ತಿ, ಅದನ್ನು ಒತ್ತಿ ಎಂದು ಹೇಳಿದರೆ ಅದು ಖಂಡಿತವಾಗಿಯೂ ಸ್ಕ್ಯಾಮ್‌ ಆಗಿರುತ್ತದೆ ಎಂದರ್ಥ.

ಕೂಡಲೇ ಈ ಸಂಖ್ಯೆ ಒತ್ತದಿದ್ದರೆ ಹಾಗಾಗತ್ತೆ, ಹೀಗಾಗತ್ತೆ ಎನ್ನುವ ಹೆದರಿಸುವ ಕರೆಗಳೇ ಬಂದರೆ ಅದನ್ನು ಕಡ್ಡಾಯವಾಗಿ ನಿರ್ಲಕ್ಷಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುಟ್ಟಿ.

ನೀವು ಫೋನ್‌ ರಿಸೀವ್‌ ಮಾಡಿದ ಕೂಡಲೇ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಈ ಮೊಬೈಲ್‌ ಸಂಖ್ಯೆ ಇನ್ನು ಎರಡು ಗಂಟೆಯಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9 ಒತ್ತಿ ಎಂದು ಅತ್ತ ಕಡೆಯಿಂದ ಕರೆ ಬರುತ್ತದೆ.

ಇದನ್ನು ಓದಿ : Video : ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್.!

ನೀವು ಗಡಿಬಿಡಿಯಲ್ಲಿ ಭಯದಿಂದ ಕೂಡಲೇ 9 ಒತ್ತಿದರೆ ಕರೆಯನ್ನು ‘ಟ್ರಾಯ್ ಅಧಿಕಾರಿ’ಗಳಿಗೆ ರವಾನಿಸಿದಂತೆ ನಿಮ್ಮನ್ನು ನಂಬಿಸಲಾಗುತ್ತದೆ. ಅಲ್ಲಿಂದ ವಂಚಕರು ತಮ್ಮನ್ನು ಟೆಲಿಕಾಮ್‌ನ ಸಿಬ್ಬಂದಿ ಅಥವಾ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಲ್ಲಿ ಮತ್ತೊಂದು ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಅಥವಾ ಕಿರುಕುಳದ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಆ ಸಂಖ್ಯೆಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ನಿಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಾರೆ.

ಅಲ್ಲದೇ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಪೊಲೀಸರಿಂದ ಸ್ಪಷ್ಟೀಕರಣ ಪತ್ರ ನೀಡಬೇಕಾಗುತ್ತದೆ. ಆ ಬಳಿಕ ನಿಮ್ಮ ಸಂಖ್ಯೆಯು ಅನ್‌ಬ್ಲಾಕ್ ಆಗುತ್ತದೆ. ಆದ್ದರಿಂದ ಕೂಡಲೇ ಪೊಲೀಸರಿಂದ ಸ್ಪಷ್ಟೀಕರಣದ ಅಗತ್ಯವಿದೆ ಎಂದು ನಿಮಗೆ ಮಾಹಿತಿ ನೀಡುತ್ತಾರೆ ಸ್ಕ್ಯಾಮರ್.

ನೀವು ನಂಬದಿದ್ದರೆ ಎಫ್‌ಐಆರ್ ಸಂಖ್ಯೆ, ಎರಡನೇ ಸಿಮ್ ಖರೀದಿಸಿದ ಅಂಗಡಿಯ ವಿಳಾಸ ಮತ್ತು ನಿಮ್ಮೊಂದಿಗೆ ಮಾತನಾಡುವ ಅಧಿಕಾರಿಯ ಹೆಸರು ಮತ್ತು ಸ್ಥಾನದಂತಹ ಮಾಹಿತಿಯನ್ನು ಸಹ ನೀಡುತ್ತಾರೆ.

ಇದನ್ನು ಓದಿ : Lokayukta raid : ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ.!

ಕರೆ ಮಾಡಿದವರು ನಿಮ್ಮ ಕರೆಯನ್ನು ಪೊಲೀಸರಿಗೆ ವರ್ಗಾಯಿಸಲು ಪ್ರಯತ್ನಿಸುತ್ತಾರೆ. ನಂತರ ಅದರಿಂದ ತಪ್ಪಿಸಿಕೊಳ್ಳಲು ನಿಮ್ಮ ಬ್ಯಾಂಕ್‌ ವಿವರ ಇತ್ಯಾದಿಗಳನ್ನು ಕೇಳಲಾಗುತ್ತದೆ. ಹಣದ ವರ್ಗಾವಣೆ ಮಾಡುವಂತೆ ಹೇಳಲಾಗುತ್ತದೆ. ಕೇಸ್‌ನಿಂದ ತಪ್ಪಿಸಿಕೊಂಡರೆ ಸಾಕು ಎಂದು ನೀವು ಎಲ್ಲಾ ದಾಖಲೆ ನೀಡಿದರೆ, ಇಲ್ಲವೇ ಅವರು ಹೇಳಿದಂತೆ ನಿಮ್ಮ ನಂಬರ್​ಗೆ ಬರುವ ಓಟಿಪಿಯನ್ನು ಅವರಿಗೆ ತಿಳಿಸಿದರೆ, ನಿಮ್ಮ ಬ್ಯಾಂಕ್‌ ಖಾತೆಯಿಂದ ಖಾಲಿಯಾಗುವುದು ಕನ್ಫರ್ಮ್

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img