Sunday, September 8, 2024
spot_img
spot_img
spot_img
spot_img
spot_img
spot_img
spot_img

ಮಾಟ ಮಂತ್ರಕ್ಕೆ ಆಕರ್ಷಿತನಾಗಿ ಎರಡೂ ಹೆಣ್ಣು ಮಕ್ಕಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಳಗಾವಿ : ಜುಲೈ 2021 ರಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಹದ್ದಿಯ ರಾಮನಗರ 2ನೇ ಕ್ರಾಸ್, ಕಂಗ್ರಾಳಿ ಕೆಎಚ್ ಗ್ರಾಮದ ತಮ್ಮ ಮನೆಯ ಮುಂದೆ ಯಾರೋ ಮಾಟಮಂತ್ರ ಮಾಡಿಸಿ ಇಟ್ಟಿರುವ ಬಗ್ಗೆ ಬೆಳಗಾವಿಯ ರಾಮನಗರ ಕೆಎಚ್ ಕಂಗ್ರಾಳಿಯ ಆರೋಪಿ ಅನಿಲ್ ಚಂದ್ರಕಾಂತ ಬಾಂದೇಕರ್ ಇವನು ಅಂಜಲಿ(8) ಮತ್ತು ಅನನ್ಯ(4) ಎಂಬ ತನ್ನ ಎರಡೂ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಕೊಲೆಗೈದ ಬಗ್ಗೆ ಆತನ ವಿರುದ್ಧ ಅವನ ಹೆಂಡತಿ ಶ್ರೀಮತಿ ಜಯಾ ಬಾಂದೇಕರ್ ದೂರು ನೀಡಿದ್ದರು.

ಈ ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್‌ಪೇಕ್ಟರ್ ಮಂಜುನಾಥ ಹಿರೇಮಠರವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಇದನ್ನು ಓದಿ : ರೈಲ್ವೆಯಲ್ಲಿ 7,951 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ.!

ಪೊಲೀಸ್ ತನಿಖೆ ಸಾಕ್ಷಾಧಾರಗಳನ್ನು ಹಾಗೂ ವಾದವನ್ನು ಆಲಿಸಿದ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ದಂಡವನ್ನು ವಿಧಿಸಿ ಶಿಕ್ಷೆ ನೀಡಿರುತ್ತದೆ.

ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಪಿಐ ಮಂಜುನಾಥ ಹಿರೇಮಠ ಹಾಗೂ ತನಿಖಾ ಸಹಾಯಕ ವೀರಭದ್ರ ಬೂದನವರರವರ ಕಾರ್ಯವನ್ನು ಯಡಾ ಮಾರ್ಟಿನ ಮಾರ್ಬನ್ಯಾಂಗ ಐಪಿಎಸ್ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿರುತ್ತಾರೆ.

ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಈ 4 ತಾಲ್ಲೂಕುಗಳಿಗೆ ರಜೆ ಘೋಷಣೆ.!

ಪ್ರಕರಣದ ಹಿನ್ನೆಲೆ :
ಬೆಳಗಾವಿಯ ಎ.ಪಿ.ಎಂ.ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಂಗ್ರಾಳಿ ಕೆ.ಎಚ್ ವಾಸಿಯಾದ ಆರೋಪಿ ಅನೀಲ ಚಂದ್ರಕಾಂತ ಬಾಂದೇಕರ ಈತನು ತನ್ನ ಮನೆ ಮಾರಾಟ ಮಾಡಲು ಖರೀದಿಗೆ ಯಾರು ಬರದ ಕಾರಣ ಬೇಜಾರು ಮಾಡಿಕೊಂಡಿದ್ದ.

ಆತನಿಗೆ ರಾತ್ರಿ ಕನಸಿನಲ್ಲಿ ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದು ತನ್ನ ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ತನ್ನ ಮನೆ ಮಾರಾಟ ಆಗುತ್ತದೆ ಹಾಗೂ ಎಲ್ಲ ಕೆಲಸದಲ್ಲಿ ಯಶಸ್ಸು ಆಗುತ್ತದೆ ಅಂತಾ ಕನಸು ಬೀಳುತ್ತಿತಂತೆ. ಅದನ್ನು ನಂಬಿಕೊಂಡು ತನ್ನ ಮಕ್ಕಳಾದ ಅಂಜಲಿ (8 ವರ್ಷ) ಹಾಗೂ ಅನನ್ಯ (4 ವರ್ಷ) ಇವರಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿ,  ಬೇಡ್‌ನಿಂದ ತನ್ನ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಾಕಿದ ಅಪರಾಧಕ್ಕಾಗಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಅಂದಿನ ಆರಕ್ಷಕ ನಿರೀಕ್ಷಕ ಮಂಜುನಾಥ ಹಿರೇಮಠ ಇವರು ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದನ್ನು ಓದಿ : Health : ಈ ಮಳೆಗಾಲದಲ್ಲೂ ಅತಿಯಾಗಿ ಬೆವರುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಸದರ ಪ್ರಕರಣದ ಆರೋಪಿತನ ವಿರುದ್ಧ ಮಾಡಲಾಗಿದ್ದ ಆರೋಪ ಕಲಂ 302 ಅಡಿಯಲ್ಲಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.20,000/- ಗಳ ದಂಡ ವಿಧಿಸಿ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯ್ಯಾಲಯ ಬೆಳಗಾವಿಯ ಮಾನ್ಯ ನ್ಯಾಯಾಧೀಶರಾದ ಎಚ್. ಎಸ್. ಮಂಜುನಾಥ ರವರು ತೀರ್ಪು ನೀಡಿರುತ್ತಾರೆ.

ಸರ್ಕಾರಿ ಅಭಿಯೋಜಕರಾದ ಶ್ರೀಮತಿ ನಸರೀನ ಬಂಕಾಪೂರ 6ನೇ ಅಪರ ಜಿಲ್ಲಾ & ಸತ್ರ ನ್ಯಾ. ಬೆಳಗಾವಿರವರು ವಾದ ಮಂಡಿಸಿದ್ದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img