ಜನಸ್ಪಂದನ ನ್ಯೂಸ್, ಬೆಳಗಾವಿ : ಸೆಪ್ಟೆಂಬರ್ ಮೂರರ ಮಂಗಳವಾರ ನಡೆಯಬೇಕಾಗಿದ್ದ ಕಿತ್ತೂರು ಪಟ್ಟಣ ಪಂಚಾಯಿತಿ ಚುನಾವಣೆಗೆ ಧಾರವಾಡ ಹೈಕೋರ್ಟ್ ಇದೀಗ ತಡೆ ನೀಡಿದೆ.
ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಅಪಹರಿಸಲಾಗಿತ್ತು. ಪರಿಣಾಮ ಚುನಾವಣೆ ಮುಂದೂಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ನಿರಂತರ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಕೊನೆಗೂ ಇದೀಗ ನ್ಯಾಯಾಲಯ ಚುನಾವಣೆ ಮುಂದೂಡಿದೆ.
ಇದನ್ನು ಓದಿ : Belagavi : ಬಿಜೆಪಿ ಸದಸ್ಯನ ಅಪಹರಣಕ್ಕೆ ಬಳಸಿದ ಕಾರು ರೆಸಾರ್ಟ್ ನಲ್ಲಿ ಪತ್ತೆ.!
ಈ ಮಧ್ಯ ತಮ್ಮ ಸದಸ್ಯನನ್ನು ಹುಡುಕಿಕೊಂಡು ಬರಬೇಕು, ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಚುನಾವಣೆಗೆ ತಡೆಯೊಡ್ಡಿ ಸೋಮವಾರ ಆದೇಶ ಹೊರಡಿಸಿದೆ.
ಅಪಹರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ರೆಸಾರ್ಟ್ ಬಳಿ ಸೋಮವಾರ ಅಪಹರಿಸಿಕೊಂಡು ಹೋಗಿದ್ದ ವಾಹನ ಪತ್ತೆಯಾಗಿದೆ.