ಜನಸ್ಪಂದನ ನ್ಯೂಸ್, ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆ ಅಂಬರ್‌ನಾಥ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಭಯಾನಕ ಸರಣಿ ಅಪಘಾತ (Accident) ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಫ್ಲೈಓವರ್ ಮೇಲೆ ಸಂಭವಿಸಿದ ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ರಾತ್ರಿ ಕೆಲವೇ ಕ್ಷಣಗಳಲ್ಲಿ ನಡೆದಿದ್ದು, ಪ್ರಯಾಣಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮುಂಬೈ–ಪುಣೆ ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಧ್ಯ ಭಾಗದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಉರುಳಿ ಎದುರಿನಿಂದ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ.
ಸರಣಿ ಅಪಘಾತ (Accident) ದಿಂದ ಮೂರು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಮತ್ತೇ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಇನ್ನೋಮ್ಮೆ ಉರುಳಿ ಬಿದ್ದಿದೆ.
ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.
ಪ್ರಬಲ ಡಿಕ್ಕಿ ರಭಸಕ್ಕೆ ಒರ್ವ ಬೈಕ್ ಸವಾರ ನೇರವಾಗಿ ಫ್ಲೈಓವರ್‌ನ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಇನ್ನೂ ಮೂವರು ಸವಾರರು ಕಾರಿನಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ತಕ್ಷಣ ಥಾಣೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬ ಮಹಿಳೆ ಇದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ನೀಡಿದ ಮಾಹಿತಿಯಂತೆ, ಮೃತರಲ್ಲಿ ಇಬ್ಬರು ಅಂಬರ್‌ನಾಥ್ ನಿವಾಸಿಗಳು, ಒಬ್ಬರು ಕಲ್ಯಾಣ್, ಹಾಗೂ ಇನ್ನೊಬ್ಬರು ಬದ್ಲಾಪುರ ಮೂಲದವರು. ಅಪಘಾತ (Accident) ದ ನಂತರ ಅಂಬರ್‌ನಾಥ್ ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ತೆರಳಿ, ಗಾಯಾಳುಗಳ ರಕ್ಷಣಾ ಕಾರ್ಯ ನಡೆಸಿ, ವಾಹನಗಳನ್ನು ರಸ್ತೆ ಮಾರ್ಗದಿಂದ ತೆರವುಗೊಳಿಸಿದೆ.
ಇದನ್ನು ಓದಿ : “ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.
ಅಪಘಾತ (Accident) ದ ಕುರಿತಾದ ಪ್ರಕರಣದ ತನಿಖೆ ಮುಂದುವರಿದಿದ್ದು, ಕಾರಿನ ವೇಗ ಮತ್ತು ನಿಯಂತ್ರಣ ಕಳೆದುಕೊಳ್ಳಲು ಕಾರಣಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಅಪಘಾತ (Accident) ದ ವಿಡಿಯೋ :
https://twitter.com/i/status/1991906463221231660
“ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.

ಜನಸ್ಪಂದನ ನ್ಯೂಸ್, ಜಲ್ನಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಟ್ಟಡದಿಂದ ಹಾರಿಕೊಂಡು 8ನೇ ತರಗತಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಘಟನೆ ಕುರಿತಾಗಿ ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಎಂದಿನಂತೆ ಶಾಲೆಯ ನಿರ್ದಿಷ್ಟ ಬೆಳಗಿನ ವೇಳೆಯಾದ 7:30ರ ಸುಮಾರಿಗೆ ಬಾಲಕಿ (Student) ತನ್ನ ತರಗತಿಗೆ ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಒಮ್ಮಿಂದಲೇ Student ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಾಳೆ.
ಮೂರನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದ ತಕ್ಷಣ ಆಕೆಯ ತಂದೆಯನ್ನು ಸಂಪರ್ಕಿಸಿದರು. ಬಾಲಕಿಗೆ ತಾತ್ಕಾಲಿಕ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಳಿಕ, ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆಕೆಯ ಮೃತ್ಯ ಪಟ್ಟಿರುವುದಾಗಿ ಘೋಷಿಸಿದರು.
ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
ಪೊಲೀಸರು ಕೂಡಲೇ ಕ್ಯಾಂಪಸ್‌ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ವರದಿ ಆಕಸ್ಮಿಕ ಸಾವು (Suicide) ಸಾಧ್ಯತೆಗಳಿವೆ ಎಂದು ಸೂಚಿಸುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಎಲ್ಲಾ ಕೋನಗಳನ್ನು ದೃಷ್ಟಿಯದಲ್ಲಿಟ್ಟು ತನಿಖೆ ಮುಂದುವರಿಯುತ್ತಿದೆ.
ಬಾಲಕಿಯ ತಂದೆಯ ಪ್ರಕಾರ, “ಶಿಕ್ಷಕರ ನಿರಂತರ ಮಾನಸಿಕ ಕಿರುಕುಳದ ಒತ್ತಡದಿಂದಾಗಿ ಈ ಹಂತಕ್ಕೆ ತಲುಪಿದಳು” ಎಂದು ಆರೋಪಿಸಿದ್ದಾರೆ. ಕುಟುಂಬದವರು, “ಅವರು ಹಿಂದೆಂದಿಗೂ ಈ ರೀತಿಯ ಘಟನೆ ನಿರೀಕ್ಷಿಸಿರಲಿಲ್ಲ, ಆದರೆ ಮಕ್ಕಳ ಮನಃಸ್ಥಿತಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿತ್ತು” ಎಂದು ತಿಳಿಸಿದ್ದಾರೆ.
ಈ ಘಟನೆಗೂ ಮುಂಚೆ, ಜೈಪುರದಲ್ಲೂ ಇದೇ ಮಾದರಿ ದುರಂತ ಸಂಭವಿಸಿತ್ತು. ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿಕೊಂಡು 9 ವರ್ಷದ ಬಾಲಕಿ (Student) ಮೃತಪಟ್ಟಿದ್ದಳು. ಪ್ರಾಥಮಿಕ ಪರಿಶೀಲನೆಗಳಲ್ಲಿ ಆತ್ಮಹತ್ಯೆ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.
ಬಾಲಕಿ (Student) ಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ FIR ದಾಖಲೆ ಮಾಡಿರುವುದು, ಶಿಕ್ಷಣ ಸಂಸ್ಥೆಯ ಮತ್ತು ಸಿಬ್ಬಂದಿಯ ಜವಾಬ್ದಾರಿಯನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ.
ಪೊಲೀಸರು ಮತ್ತು ಶಾಲಾ ಆಡಳಿತ ತಂಡವು, ಶಾಲಾ ಆವರಣದಲ್ಲಿ ಈ ರೀತಿಯ ಘಟನೆ ನಡೆಯಲು ಕಾರಣವಾದ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.
Courtesy : TV9 Kannada
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







