Monday, April 28, 2025
spot_img
HomeGeneral Newsಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
spot_img
spot_img
spot_img

ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೇಡ, ಬೇಡ ಎಂದರೂ ಮಧ್ಯರಾತ್ರಿ ಮನೆಗೆ ನುಗ್ಗಿದ ಸರ್ಕಾರಿ ಶಾಲೆ ಶಿಕ್ಷಕ (Government school teacher) ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಘಟನೆ ರಾಜಸ್ಥಾನದ ಭರತ್‌ಪುರ (Bharatpur, Rajasthan) ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಧ್ಯರಾತ್ರಿಯಲ್ಲಿ ಶಿಕ್ಷಕ ಮಹಿಳೆಯ ಮನೆಗೆ ನುಗ್ಗಿದ್ದಾನೆ. ಆಗ ಮಹಿಳೆ ಜೋರಾಗಿ ಕಿರುಚಲು ಶುರು ಮಾಡಿದ್ದಾರೆ. ಇದನ್ನು ಕೇಳಿ ಗ್ರಾಮಸ್ಥರು ಸೇರಿ ಆತನನ್ನು ಹಿಡಿದು ಥಳಿಸಿದ್ದಾರೆ.

ಇದನ್ನು ಓದಿ : Health : ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತೇ.?

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಂಚಲನ ಮೂಡಿಸಿದ್ದು (Incident caused a stir), ಭಾರೀ ವೈರಲ್ ಆಗಿದೆ.

ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಎರಗಿದ್ದ ಆರೋಪಿಯನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಅವನನ್ನು ಹಿಡಿದು ನೋಡಿದಾಗ ಶಿಕ್ಷಕ ಅಮಿತ್ ಕುಮಾರ್‌ ಎಂಬುದು ತಿಳಿದು ಬಂದಿದೆ. ಗ್ರಾಮಸ್ಥರು ಕೂಡಲೇ ಆ ಕಾಮಿ ಶಿಕ್ಷಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ (Tied to an electric pole and beaten).

ಇದನ್ನು ಓದಿ : ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಬಂಧಿಸಿದ ಪಾಕ್‌ ಸೇನೆ.!

ವರದಿಗಳ ಪ್ರಕಾರ, ಜರುಬಾರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಅಮಿತ್ ಕುಮಾರ್ ಗುರುವಾರ ಬೆಳಗಿನ ಜಾವ 2.30 ರ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಮಹಿಳೆಯ ಮನೆಗೆ ತಲುಪಿ ಗೇಟ್ ಹಾರಿ ಒಳಗೆ ಪ್ರವೇಶಿಸಿದನು.

ಇನ್ನು ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಲ್ಲದೇ ಈತನಿಗೆ ಶಿಕ್ಷೆ ಕೊಡಿಸಬೇಕು ಎಂದು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ಇದನ್ನು ಓದಿ : Health : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಆರೋಪಿಯನ್ನು ಶಾಂತಿಭಂಗದ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ (He was arrested on the charge of disturbing the peace) ಎಂದು ವರದಿಯಿಂದ ತಿಳಿದು ಬಂದಿದೆ.

ಶಿಕ್ಷಕ ಮಹಿಳೆಗೆ ಗೊತ್ತಿಲ್ಲದೇ ಮಧ್ಯರಾತ್ರಿ ಮನೆಗೆ ನುಗ್ಗಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದರೆ ನಂಬಲು ಸಾಧ್ಯವಿಲ್ಲ. ಹೀಗಾಗಿ ಈ ಘಟನೆಯಲ್ಲಿ ಮಹಿಳೆಯ ಪಾತ್ರ ಏನಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಟ್ರಂಕ್​​ನಲ್ಲಿ ಪತ್ನಿಯ Lover ; ಬೆತ್ತಲೆಯಾಗಿ ಸಿಕ್ಕಿಬಿದ್ದವನನ್ನು ಪತಿ ಮಾಡಿದ್ದೇನು ಗೊತ್ತಾ.?

ಏತನ್ಮಧ್ಯೆ, ಬಲಿಪಶುವಿನ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಸುದ್ದಿ : Health : ಉಗುರಿನ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತೇ.?

ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯರ ಪ್ರಕಾರ, ಲ್ಯುಕೋನಿಚಿಯಾ ಎಂದೂ ಕರೆಯಲ್ಪಡುವ ಉಗುರುಗಳ ಮೇಲಿನ ಬಿಳಿ ಚುಕ್ಕೆಗಳ ಸಾಮಾನ್ಯ ಕಾರಣವೆಂದರೆ ಉಗುರುಗಳ ಗಾಯವಾಗಿದೆ. ನಿಮ್ಮ ಉಗುರು ಅಥವಾ ಬೆರಳಿನ ಮೇಲೆ ಆಕಸ್ಮಿಕವಾಗಿ ಗಾಯಗಳಾದ ಸಂದರ್ಭಗಳಲ್ಲಿ ಈ ರೀತಿಯ ಕಲೆಗಳು ಹುಟ್ಟಿಕೊಳ್ಳುತ್ತವೆ.

ಲ್ಯುಕೋನಿಚಿಯಾ (Leukonychia) ಎನ್ನುವುದು ಕಾಲ್ಬೆರಳ ಅಥವಾ ಬೆರಳಿನ ಉಗುರುಗಳ ಮೇಲೆ ಬಿಳಿ ಗೆರೆಗಳು ಅಥವಾ ಚುಕ್ಕೆಗಳು (White spots) ಕಾಣಿಸಿಕೊಳ್ಳುವುದಾಗಿದೆ. ಹೀಗಾದಾಗ ಕಾಲ್ಬೆರಳ ಉಗುರುಗಳು ಅಥವಾ ಬೆರಳಿನ ಉಗುರುಗಳು ತಿಳಿ ಗುಲಾಬಿ ಬಣ್ಣದಲ್ಲಿರುತ್ತವೆ.

ಇದನ್ನು ಓದಿ : Video : ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ವೈದ್ಯ ವಿದ್ಯಾರ್ಥಿ.!

ಕೆಲವೊಮ್ಮೆ ಬಿಳಿ ಚುಕ್ಕೆಗಳು ಕೂಡ ಕಾಣಿಸಿಕೊಳ್ಳಬಹುದು. ಉಗುರುಗಳ ಮೇಲಿನ ಈ ಕಲೆಗಳು ಯಕೃತ್ತಿನ ಕಾಯಿಲೆ ಅಥವಾ ರಕ್ತಹೀನತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.

ಉಗುರುಗಳ ಮೇಲೆ ಇಂತಹ ಅಸಾಮಾನ್ಯ ಕಲೆಗಳಿಗೆ ಕಾರಣವಾಗುವ ಇತರ ಕಾರಣಗಳು ಇಲ್ಲಿವೆ :

* ನಮ್ಮ ದೇಹಕ್ಕೆ ಸಮರ್ಪಕವಾಗಿ ಪೌಷ್ಟಿಕಾಂಶಗಳು ಎಲ್ಲಾ ರೀತಿಯಲ್ಲೂ ಸಿಗಬೇಕು. ಒಂದು ವೇಳೆ ಸಿಗದಿದ್ದರೆ ಅದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಎದುರಾಗುತ್ತವೆ. ವಿಶೇಷವಾಗಿ ಜಿಂಕ್, ಸೆಲಿನಿಯಂ, ವಿಟಮಿನ್ ಡಿ ಇತ್ಯಾದಿ ಅಂಶಗಳು.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

ಇವುಗಳ ಕೊರತೆಯಿಂದ ಉಗುರುಗಳ ಮೇಲೆ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು (Change in diet) ತಂದುಕೊಳ್ಳುವುದರಿಂದ ಇದರಿಂದ ಪಾರಾಗಬಹುದು.

* ನಿಮಗೆ ಉಗುರು ಸುತ್ತು ಗೊತ್ತಿರಬಹುದು. ಇದು ಒಂದು ರೀತಿಯ ಫಂಗಲ್ ಸೋಂಕು. ಇದರ ಕಾರಣದಿಂದ ಉಗುರುಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಮಚ್ಚೆಗಳು (White spots) ಕಂಡು ಬರುತ್ತವೆಯಂತೆ.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ಸರಿಯಾದ ಚಿಕಿತ್ಸೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗುತ್ತದೆ. ಹೀಗೆ ಮಾಡಿದರೆ ಕ್ರಮೇಣವಾಗಿ ಉಗುರು ಸುತ್ತು ಮಾಯವಾಗುತ್ತದೆ ಮತ್ತು ಉಗುರುಗಳ ಮೇಲೆ ಕಂಡುಬಂದಿರುವ ಮಚ್ಚೆಗಳು ಸಹ ಹೊರಟು ಹೋಗುತ್ತವೆ.​

* ಲಿವರ್ ಮಾನವನ ದೇಹದ ಬಹುತೇಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಅದರಲ್ಲಿನ ತೊಂದರೆ ಉಗುರುಗಳ ಮೇಲೆ ಬಿಳಿ ಮಚ್ಚೆಗಳು ಕಂಡು ಬರುವ ಹಾಗೆ ಮಾಡುತ್ತದೆ.

ಇದನ್ನು ಓದಿ : Video : ವಾಷಿಂಗ್ ಮಷಿನ್‍ನೊಳಗೆ ಕಲ್ಲು ಹಾಕಿದ ಯುವಕ ; ಆಮೇಲೆನಾಯ್ತು ಗೊತ್ತಾ?

* ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಉಗುರುಗಳಲ್ಲಿ ಬಿಳಿ ಮಚ್ಚೆಗಳು ಕಾಣಿಸುತ್ತಿವೆ. ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾದ್ರೆ ಕೈ ಬೆರಳುಗಳ ಎಲ್ಲಾ ಉಗುರುಗಳಲ್ಲಿ ಅಥವಾ ಕೆಲವು ಬೆರಳುಗಳ ಉಗುರುಗಳಲ್ಲಿ ಸಣ್ಣ ಸಣ್ಣದಾಗಿ ಬಿಳಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

* ಯಾವುದೋ ಸಂದರ್ಭದಲ್ಲಿ ನಮಗೆ ಗೊತ್ತಿರದೆ ಮಾಡಿ ಕೊಂಡಂತಹ ಉಗುರುಗಳ ಪೆಟ್ಟು ಅವುಗಳ ಸೌಂದರ್ಯವನ್ನು ಹಾಳುಮಾಡುತ್ತದೆ (Destroy beauty). ಇದರಿಂದಾಗಿ ಉಗುರುಗಳ ಮೇಲೆ ಬಿಳಿ ಮಚ್ಚೆ ಕಾಣಿಸುತ್ತವೆ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

* ಕಿಡ್ನಿಯಲ್ಲಿ ಏನಾದರೂ ಸಮಸ್ಯೆಯಾದರೆ ಅಥವಾ ಸರಿಯಾಗಿ ಕಾರ್ಯ ನಿರ್ವಹಿಸಲು ಆಗದೆ ಇದ್ದರೆ, ಅಂತಹ ಸಂದರ್ಭದಲ್ಲಿ ಉಗುರುಗಳ ಮೇಲ್ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

* ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬಂದ್ರೆ ಅದರಿಂದ ಉಗುರುಗಳ ಆರೋಗ್ಯ ಕೆಡುತ್ತದೆ. ಇದರಿಂದ ಉಗುರುಗಳ ಮೇಲೆ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
- Advertisement -
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments