ಶುಕ್ರವಾರ, ಜನವರಿ 2, 2026

Janaspandhan News

HomeGeneral Newsಯುವತಿಯ ಹೊಟ್ಟೆಯಲ್ಲಿ "ಶಸ್ತ್ರಚಿಕಿತ್ಸಾ ಬ್ಲೇಡ್" ಉಳಿಸಿ ಹೊಲಿಗೆ ಹಾಕಿದ Doctor!
spot_img
spot_img
spot_img

ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

- Advertisement -

ಜನಸ್ಪಂದನ ನ್ಯೂಸ್‌, ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ (Doctor) ಗಂಭೀರ ನಿರ್ಲಕ್ಷ್ಯದ ಪ್ರಕರಣ ಹೊರಬಿದ್ದಿದೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ (Family planning surgery) ಗಾಗಿ ದಾಖಲಾಗಿದ್ದ ಬಾಲಯ್ಯ ನಗರದ ನಿವಾಸಿ ರಮಾದೇವಿ (22) ಅವರ ದೇಹದೊಳಗೆ ಶಸ್ತ್ರಚಿಕಿತ್ಸಾ ಬ್ಲೇಡ್ ಉಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ವೈದ್ಯರ (Doctor) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಮಾದೇವಿಗೆ ಕೆಲವು ದಿನಗಳ ಹಿಂದೆ ಡಾ. ನಾರಾಯಣ ಸ್ವಾಮಿ ಮತ್ತು ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರದಿಂದಲೇ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳತೊಡಗಿತು. ಆಸ್ಪತ್ರೆಗೆ ಹಲವಾರು ಬಾರಿ ದೂರು ನೀಡಿದರೂ ಸಿಬ್ಬಂದಿ “ನೋವು ಸಾಮಾನ್ಯ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದರು.

ವೈದ್ಯರ (Doctor) ನಿರ್ಲಕ್ಷ್ಯ ಬೆಳಕಿಗೆ :

ನೋವು ದಿನೇದಿನೇ ಹೆಚ್ಚುತ್ತಿದ್ದ ಕಾರಣ, ರಮಾದೇವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆಕೆಯ ಹೊಟ್ಟೆ (ಯೋನಿ) ಯ ಸಮೀಪ ಶಸ್ತ್ರಚಿಕಿತ್ಸಾ ಬ್ಲೇಡ್ ಇರುವುದಾಗಿ ವರದಿಯಲ್ಲಿ ಪತ್ತೆಯಾಯಿತು.

ಇದನ್ನು ಓದಿ : Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಇದನ್ನು ನೋಡಿ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರು (Doctor) ಶಸ್ತ್ರಚಿಕಿತ್ಸೆಯ ವೇಳೆ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಸಂತ್ರಸ್ತೆಯ ಕುಟುಂಬದವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ ಉಚಿತವಾಗಿದ್ದರೂ, ಆಸ್ಪತ್ರೆ ಸಿಬ್ಬಂದಿ ರೂ.2,500/- ಹಣ ವಸೂಲಿ ಮಾಡಿದ್ದಾರೆಂದು ರಮಾದೇವಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಸ್ವಾಮಿ, “ಶಸ್ತ್ರಚಿಕಿತ್ಸೆಯ ನಂತರ ಮತ್ತೊಂದು ತುರ್ತು ಪ್ರಕರಣ ಇತ್ತು. ಕ್ಲೀನರ್‌ಗಳು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಾನು ಹೊರಟುಹೋಗಬೇಕಾಯಿತು. ಬ್ಲೇಡ್ ಉಳಿದಿರುವುದು ನನ್ನ ತಪ್ಪಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಆದರೆ, ಜೀವ ಉಳಿಸಬೇಕಾದ ಸ್ಥಳದಲ್ಲೇ ವೈದ್ಯರ (Doctor) ಇಂತಹ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂಬ ಕಾರಣಕ್ಕೆ ಸಾರ್ವಜನಿಕರ ಮಧ್ಯೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಟುಂಬದವರು ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಬೇಜವಾಬ್ದಾರಿ (Doctor) ಗಳ  ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ರಮಾದೇವಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೂಡಾ ಅವರು ಬೇಡಿಕೆ ಇಟ್ಟಿದ್ದಾರೆ.


PO ನಲ್ಲಿ ಪತಿ-ಪತ್ನಿ ಜಂಟಿ ಖಾತೆ ; ರೂ.2 ಲಕ್ಷ ಹೂಡಿಕೆಗೆ 90,000 ರೂ. ಬಡ್ಡಿ!

Post Office PO - TD

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬ್ಯಾಂಕ್‌ಗಳಲ್ಲಿ ಬಡ್ಡಿದರಗಳು ನಿರಂತರವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ, ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಅಂಚೆ ಕಚೇರಿ (Post Office – PO) ಇನ್ನೂ ವಿಶ್ವಾಸಾರ್ಹ ಆಯ್ಕೆಯಾಗಿದೆ. ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಮತ್ತೊಮ್ಮೆ ಕಡಿತಗೊಳಿಸಿದರೂ, ಅಂಚೆ ಕಚೇರಿ (Post Office – PO) ಯ ಸಮಯ ಠೇವಣಿ (Time Deposit – TD) ಯೋಜನೆ ಗ್ರಾಹಕರಿಗೆ ಗರಿಷ್ಠ 7.5% ಬಡ್ಡಿದರವನ್ನು ನೀಡುತ್ತಿದೆ.

ಜಂಟಿ ಖಾತೆಗೆ ಹೆಚ್ಚಾದ ಲಾಭ :

ಗಂಡ–ಹೆಂಡತಿ ಇಬ್ಬರೂ ಜಂಟಿ ಖಾತೆ ತೆರೆದು ಹೂಡಿಕೆ ಮಾಡಿದರೆ, 5 ವರ್ಷಗಳ ಕೊನೆಯಲ್ಲಿ ಉತ್ತಮ ಮ್ಯಾಚ್ಯುರಿಟಿ ಮೊತ್ತ ಸಿಗುತ್ತದೆ. ಉದಾಹರಣೆಗೆ, 2 ಲಕ್ಷ ರೂ. ಹೂಡಿಕೆಗೆ 7.5% ಸಂಯುಕ್ತ ಬಡ್ಡಿದರ ಅನ್ವಯ, 5 ವರ್ಷಗಳ ನಂತರ ಒಟ್ಟು ರೂ. 2,89,990 ಸಿಗುತ್ತದೆ. ಅಂದರೆ, ಬಡ್ಡಿಯಲ್ಲಿ ಮಾತ್ರವೇ ರೂ. 89,990 ಲಾಭ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ರೆಪೊ ದರ ಇಳಿಕೆ – ಬ್ಯಾಂಕ್ ಎಫ್‌ಡಿ ಬಡ್ಡಿ ಕಡಿಮೆ :

ಆರ್ಥಿಕ ಪರಿಸ್ಥಿತಿ ಬದಲಾವಣೆ ಹಿನ್ನೆಲೆಯಲ್ಲಿ, ಈ ವರ್ಷ ರಿಸರ್ವ್ ಬ್ಯಾಂಕ್ ನಾಲ್ಕು ಬಾರಿ ರೆಪೊ ದರವನ್ನು 0.25% ಇಳಿಸಿದೆ.

ಒಟ್ಟಾರೆ 1.25%ರಷ್ಟು ಇಳಿಕೆ ನಡೆದಿದ್ದು, ಇದರ ಪರಿಣಾಮವಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನು ಕಡಿತಗೊಳಿಸಿವೆ. ಆದರೆ ಅಂಚೆ ಕಚೇರಿ (Post Office – PO) ಮಾತ್ರ ತನ್ನ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಹಾಗೇ ಉಳಿಸಿಕೊಂಡಿದೆ.

ಅಂಚೆ ಕಚೇರಿ (Post Office – PO) ಟಿಡಿ ಯೋಜನೆ ಯಾಕೆ ವಿಶೇಷ?

ಅಂಚೆ ಕಚೇರಿ ಸಮಯ ಠೇವಣಿ ಯೋಜನೆಗೆ ಸರ್ಕಾರದ ಭದ್ರತೆ ಇರುವುದೇ ಪ್ರಮುಖ ಆಕರ್ಷಣೆ.
ಅದೇಂತೆ:

ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

  • 5 ವರ್ಷಗಳ ಟಿಡಿಗೆ 7.5% ಬಡ್ಡಿ — ಬ್ಯಾಂಕ್‌ಗಳು ಸಾಮಾನ್ಯವಾಗಿ ನೀಡುವುದಕ್ಕಿಂತ ಹೆಚ್ಚು.
  • ಹೂಡಿಕೆ ಸಂಪೂರ್ಣ ಅಪಾಯ–ರಹಿತ.
  • ಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ಒಂದೇ ಬಡ್ಡಿದರ (ಹಿರಿಯರಿಗೆ ಕೆಲ ಯೋಜನೆಗಳಲ್ಲಿ ಹೆಚ್ಚುವರಿ ಪ್ರಯೋಜನವಿದ್ದರೂ, ಇಲ್ಲಿ ಎರಡಿಗೂ ಸಮಾನ).
  • ಮ್ಯಾಚ್ಯುರಿಟಿ ಮೊತ್ತ ಖಚಿತ.

ಹೂಡಿಕೆದಾರರಿಗೆ ದೊಡ್ಡ ಲಾಭ :

ಮಾರುಕಟ್ಟೆ ಅಸ್ಥಿರತೆ ಮತ್ತು ಬ್ಯಾಂಕ್‌ಗಳಲ್ಲಿ ಕಡಿಮೆಯಾಗುತ್ತಿರುವ FD ಬಡ್ಡಿದರಗಳನ್ನು ಗಮನಿಸಿದರೆ, ಅಂಚೆ ಕಚೇರಿ (Post Office – PO) TD ಯೋಜನೆ 5 ವರ್ಷಗಳ ನಿರಂತರ ಮತ್ತು ಭದ್ರ ಆದಾಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments