Monday, September 16, 2024
spot_img
spot_img
spot_img
spot_img
spot_img
spot_img
spot_img

ಆಕಾಶದಿಂದ ಕೆಳಗೆ ಬಿದ್ದ ವಿಚಿತ್ರ ವಸ್ತುಗಳು ; alien ವಸ್ತುಗಳೆಂದು ಬೆಚ್ಚಿಬಿದ್ದ ಜನರು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ವಿಜಯಪುರ : ಆಕಾಶದಿಂದ ವಿಚಿತ್ರ ವಸ್ತು ಭೂಮಿಗೆ ಇಳಿಯುವುದನ್ನು ಕಂಡು ಬೆಚ್ಚಿಬಿದ್ದ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.

ಆಕಾಶದಿಂದ ಹಾರುತ್ತ ಭೂಮಿಗೆ ಬಿದ್ದಿದ್ದು ಏನು? ಅದ್ಯಾಕೆ ಬಂತು? ಏಲಿಯನ್ ಏನಾದರೂ ಭೂಮಿಗೆ ಬಂತಾ? ಹೀಗೆ ಹಲವು ಅನುಮಾನ ಭೀಮಾತೀರದ ಜನರ ಆತಂಕಕ್ಕೆ ಕಾರಣವಾಯಿತು.

ಇದನ್ನು ಓದಿ : Health : ಬೆಳಿಗ್ಗೆ ತುಟಿ ಬಣ್ಣ ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

ಆಕಾಶದಿಂದ ಹಾರುತ್ತ ಭೂಮಿಗೆ ಬಿದ್ದಿ ವಸ್ತುಗಳು ಎತ್ತರದಲ್ಲಿ ಬಲೂನಿನಂತೆ ಕಂಡಿವೆ. ನಿಧಾನಕ್ಕೆ ಪ್ಯಾರಾಚೂಟ್ ಮೂಲಕ ನೆಲಕ್ಕೆ ಬಿದ್ದ ಈ ವಸ್ತುಗಳನ್ನು ಕಂಡು ಗಾಬರಿಯಾದ ಸ್ಥಳೀಯರು. ಹತ್ತಿರಕ್ಕೆ ಹೋಗಿ ನೋಡಿದಾಗ ಬಾಕ್ಸ್, ಮಶೀನ್, ವೈರಿಂಗ್ ಇರುವ ಡಿವೈಸ್ ಕಾಣಿಸಿದೆ.

ಈ ಬಾಕ್ಸ್ ರೀತಿ ಇರುವ ಡಿವೈಸ್ ಕಂಡು ಗಾಬರಿಯಾದ ಸ್ಥಳೀಯರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಚಡಚಣ ಪೊಲೀಸರು, ತಹಸೀಲ್ದಾರ್ ಡಿವೈಸ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಕೇಂದ್ರ ಹವಾಮಾನ ಇಲಾಖೆಗೆ ಸೇರಿದ ಸೈಂಟಿಫಿಕ್ ಡಿವೈಸ್ ಎಂಬುದು ಬೆಳಕಿಗೆ ಬಂದಿದೆ.

ಇದನ್ನು ಓದಿ : Astrology : ಅಗಷ್ಟ್ 2ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಬಿದ್ದಿರುವ ವಸ್ತುಗಳು ಯಾವುದೋ ಅನ್ಯಗ್ರಹ ವಸ್ತು ಅಲ್ಲ, ಬದಲಿಗೆ ಭಾರತ ಸರ್ಕಾರದ ರಾಷ್ಟ್ರೀಯ ಪರಮಾಣು ವಿಜ್ಞಾನ ಗಣಿತ ಕೇಂದ್ರಕ್ಕೆ ಸೇರಿದ ವಸ್ತುಗಳಾಗಿವೆ.

ಹವಾಮಾನ ಬದಲಾವಣೆ, ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುವ ಪಿಐಎಫ್‌ಆರ್ ವಸ್ತುವಾಗಿದ್ದು, ಹೈದರಾಬಾದ್ ಸೆಂಟರ್‌ನಿಂದ ಹಾರಿಬಿಡಲಾಗಿದೆ. ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿರಬಹುದು ಎಂದು ಸ್ಥಳೀಯರಿಗೆ ತಹಸೀಲ್ದಾರರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳೀಯರು ನಿಟ್ಟುಸಿರುವ ಬಿಟ್ಟಿದ್ದಾರೆ. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img