ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral News2025-26ನೇ ಸಾಲಿನ SSLC ಹಾಗೂ ದ್ವಿತೀಯ PUC ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ.!
spot_img
spot_img
spot_img

2025-26ನೇ ಸಾಲಿನ SSLC ಹಾಗೂ ದ್ವಿತೀಯ PUC ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಪರೀಕ್ಷೆ-1 ಮತ್ತು ಪರೀಕ್ಷೆ-2ಗೆ ಸಂಬಂಧಿಸಿದಂತೆ ಎಲ್ಲಾ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಶಾಲೆ/ಕಾಲೇಜು ಫಲಕಗಳಲ್ಲಿ ಸಮಯ ಪಟ್ಟಿಯನ್ನು ಪ್ರಕಟಿಸಿ, ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಮಂಡಳಿ ಸೂಚಿಸಿದೆ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1 ನೋಂದಣಿ ಮಾರ್ಗಸೂಚಿ :

2026ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ಕ್ಕೆ ಅರ್ಜಿ ಸಲ್ಲಿಸಲು ಮಾರ್ಗಸೂಚಿಯನ್ನು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಓದುವ ಅರ್ಹ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.

ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಶುಲ್ಕ 710 ರೂ. ನಿಗದಿಪಡಿಸಲಾಗಿದೆ. ಬಾಲಕರು, ಪರಿಶಿಷ್ಟರು ಹಾಗೂ ಆದಾಯಮಿತಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಲಭ್ಯವಿದೆ.

Attendance ಕೊರತೆಯಿಂದ ಪರೀಕ್ಷೆಗೆ ತಡೆ ಬೇಡ ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು.!
ಹಾಜರಾತಿ ನಿಯಮ ಮತ್ತು ವಿದ್ಯಾರ್ಥಿ ಅರ್ಹತೆ :

ಪ್ರತಿ ವಿದ್ಯಾರ್ಥಿಗೂ 75% ಹಾಜರಾತಿ ಕಡ್ಡಾಯವಾಗಿದೆ. ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಅರ್ಹ ವಿದ್ಯಾರ್ಥಿಗಳನ್ನು https://kseab.karnataka.gov.in ಮೂಲಕ ಶಾಲಾ ಲಾಗಿನ್‌ನಲ್ಲಿ ನೋಂದಾಯಿಸಬೇಕು. ಈ ಸಾಲಿನಿಂದ ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ನೇರವಾಗಿ ಮಂಡಳಿ ಜಾಲತಾಣದಲ್ಲಿ ನೋಂದಾಯಿಸಬಹುದಾಗಿದೆ.

ಮಾನ್ಯತೆ ಮತ್ತು ಕಾನೂನು ಅನುಸರಣಾ ಸೂಚನೆ :

ಕರ್ನಾಟಕ ಪ್ರೌಢಶಿಕ್ಷಣ ಕಾಯ್ದೆ-1966 (Chapter VI) ನಿಯಮ 36 ಮತ್ತು 37 ಅನ್ವಯ, ಮಾನ್ಯತೆ ಪಡೆದ ಶಾಲೆಗಳ ವಿದ್ಯಾರ್ಥಿಗಳನ್ನು ಮಾತ್ರ ಪರೀಕ್ಷೆಗೆ ನೋಂದಾಯಿಸಲು ಅವಕಾಶವಿದ್ದು, ಖಾಸಗಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು 1983ರ ಕಾಯ್ದೆ ನಿಯಮ 30, 31, 33, 36 ಮತ್ತು 38ರ ಪ್ರಕಾರ ಮಾನ್ಯತೆಯನ್ನು ಸಕಾಲದಲ್ಲಿ ನವೀಕರಿಸಿರಬೇಕು.

38 ವರ್ಷದ ಮಹಿಳೆಯ ಕಾಟಕ್ಕೆ ಬೇಸತ್ತು 19 ವರ್ಷದ Young man ಆತ್ಮಹತ್ಯೆ.
ಸಾರಾಂಶ :

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ನೋಂದಾಯಿಸಿ, ಮಂಡಳಿಯ ಸೂಚನೆಗಳಂತೆ ಪರೀಕ್ಷಾ ವೇಳಾಪಟ್ಟಿಯನ್ನು ಪಾಲನೆ ಮಾಡಬೇಕು.

SSLC ಪರೀಕ್ಷಾ ವೇಳಾಪಟ್ಟಿ – ಮಾರ್ಚ್/ಏಪ್ರಿಲ್ 2026 :
ದಿನಾಂಕವಾರದ ದಿನವಿಷಯವಿಷಯ ಕೋಡ್ಪರೀಕ್ಷಾ ಸಮಯಅವಧಿಅಂಕಗಳು
18.03.2026ಬುಧವಾರಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ತಮಿಳು, ಮಲಯಾಳಂ, ಇಂಗ್ಲಿಷ್, ಸಂಸ್ಕೃತ (NCERT)01–16ಪೂ.10.00 – ಮ.1.153.00 ಗಂಟೆ100
19.03.2026ಗುರುವಾರಯುಗಾದಿ ಹಬ್ಬ
20.03.2026ಶುಕ್ರವಾರಪರೀಕ್ಷೆ ಇಲ್ಲಾ
21.03.2026ಶನಿವಾರರಂಜಾನ್
22.03.2026ಭಾನುವಾರಭಾನುವಾರ‌ ರಜೆ
23.03.2026ಸೋಮವಾರಎರಡನೇ ಭಾಷೆ – ಇಂಗ್ಲಿಷ್ / ಕನ್ನಡ83ಪೂ.10.00 – ಮ.1.153.00 ಗಂಟೆ80
23.03.2026ಸೋಮವಾರಸಾಮಾಜಿಕ ವಿಜ್ಞಾನ97ಪೂ.10.00 – ಮ.1.153.00 ಗಂಟೆ80
23.03.2026ಸೋಮವಾರಹಿಂದೂ ಧರ್ಮ / ಇಸ್ಲಾಮಿಕ್ ಅಧ್ಯಯನ / ಕ್ರಿಶ್ಚಿಯನ್ ಧರ್ಮೋಪದೇಶ28 / 29ಪೂ.2.00 – ಮ.5.003.00 ಗಂಟೆ80
24.03.2026ಮಂಗಳವಾರರಜೆ
25.03.2026ಬುಧವಾರತೃತೀಯ ಭಾಷೆ: ಇಂಗ್ಲಿಷ್ / ಕನ್ನಡ31 / 33ಪೂ.10.00 – ಮ.1.002.45 ಗಂಟೆ80
26.03.2026ಗುರುವಾರವಿಶ್ರಾಂತಿ
27.03.2026ಶುಕ್ರವಾರವಿಶ್ರಾಂತಿ
28.03.2026ಶನಿವಾರಗಣಿತ / ಗಣಿತ (Basic)81 / 95ಪೂ.10.00 – ಮ.1.153.00 ಗಂಟೆ80
29.03.2026ಭಾನುವಾರರಜೆ
30.03.2026ಸೋಮವಾರವಿಜ್ಞಾನ (NCERT)60–69ಪೂ.10.00 – ಮ.1.002.45 ಗಂಟೆ80
31.03.2026ಮಂಗಳವಾರರಜೆ (ಹಬ್ಬದ ದಿನ)
01.04.2026ಬುಧವಾರವೃತ್ತಿ ಶಿಕ್ಷಣ ವಿಷಯಗಳು (Vocational Subjects)51–54, 96ಪೂ.10.00 – ಮ.1.153.00 ಗಂಟೆ80
02.04.2026ಗುರುವಾರವ್ಯಾವಹಾರಿಕ ಪರೀಕ್ಷೆಗಳು / ಕಂಪ್ಯೂಟರ್ ವಿಷಯಗಳು85ಪೂ.10.00 – ಮ.1.153.00 ಗಂಟೆ80
04.04.2026ಶನಿವಾರಪ್ರಾಯೋಗಿಕ (Vocational Practical Exams)56–59ಸೂಚನೆಯ ಪ್ರಕಾರ

2025-26 PUC ಪರೀಕ್ಷಾ – 1 ರ ವೇಳಾಪಟ್ಟಿ :
ದಿನಾಂಕದಿನವಿಷಯಗಳು
ಫೆಬ್ರವರಿ 28, 2026ಶನಿವಾರಕನ್ನಡ, ಅರೇಬಿಕ್
ಮಾರ್ಚ್ 2, 2026ಸೋಮವಾರಭೂಗೋಳಶಾಸ್ತ್ರ, ಅಂಕಿಅಂಶಗಳು, ಮನೋವಿಜ್ಞಾನ
ಮಾರ್ಚ್ 3, 2026ಮಂಗಳವಾರಇಂಗ್ಲೀಷ್
ಮಾರ್ಚ್ 4, 2026ಬುಧವಾರತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5, 2026ಗುರುವಾರಇತಿಹಾಸ, ಗೃಹ ವಿಜ್ಞಾನ
ಮಾರ್ಚ್ 6, 2026ಶುಕ್ರವಾರಭೌತಶಾಸ್ತ್ರ
ಮಾರ್ಚ್ 7, 2026ಶನಿವಾರಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂವಿಜ್ಞಾನ
ಮಾರ್ಚ್ 9, 2026ಸೋಮವಾರರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ
ಮಾರ್ಚ್ 10, 2026ಮಂಗಳವಾರಅರ್ಥಶಾಸ್ತ್ರ
ಮಾರ್ಚ್ 11, 2026ಬುಧವಾರತರ್ಕ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ
ಮಾರ್ಚ್ 12, 2026ಗುರುವಾರಹಿಂದಿ
ಮಾರ್ಚ್ 13, 2026ಶುಕ್ರವಾರರಾಜ್ಯಶಾಸ್ತ್ರ
ಮಾರ್ಚ್ 14, 2026ಶನಿವಾರಲೆಕ್ಕಪತ್ರ ನಿರ್ವಹಣೆ
ಮಾರ್ಚ್ 16, 2026ಸೋಮವಾರಸಮಾಜಶಾಸ್ತ್ರ, ಗಣಿತ
ಮಾರ್ಚ್ 17, 2026ಮಂಗಳವಾರಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ
- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments