ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಎಸ್‌ಐ (SI) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಇನ್ಸ್‌ಪೆಕ್ಟರ್ (Women Inspector) ಓರ್ವರನ್ನು ಅರೆಸ್ಟ್ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ SI ಅನುಜ್ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದೆ. ಸಬ್-ಇನ್ಸ್‌ಪೆಕ್ಟರ್ (SI) ಅನುಜ್ ಕಶ್ಯಪ್ ಆತ್ಮಹತ್ಯೆ ಪ್ರಕರಣ ನಡೆದು ಕೇವಲ 24 ಗಂಟೆಗಳಲ್ಲೇ ಪೊಲೀಸರು ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಕುಮಾರಿಯನ್ನು ಮಾನಸಿಕ ಕಿರುಕುಳ ಮತ್ತು ಮದುವೆಗೆ ಒತ್ತಡ ಹೇರಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?
ಸಂಬಂಧದ ಆರಂಭ ಮತ್ತು ಬದಲಾವಣೆ :
2021ರಲ್ಲಿ ಇಮಾಮ್ಗಂಜ್ ಪೊಲೀಸ್ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿದ್ದಾಗ ಅನುಜ್ ಕಶ್ಯಪ್ ಮತ್ತು ಸ್ವೀಟಿ ಕುಮಾರಿ ಮೊದಲ ಬಾರಿಗೆ ಪರಿಚಯವಾದರು. ಕೆಲಸದ ಸಂದರ್ಭದಲ್ಲಿ ಆಪ್ತತೆ ಬೆಳೆದು, ನಂತರ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ಸಾರ್ವಜನಿಕವಾಗಿ ಸಮಯ ಕಳೆಯುತ್ತಿದ್ದರೆಂಬ ಮಾಹಿತಿ ಹಿರಿಯ ಅಧಿಕಾರಿಗಳಿಗೆ ಸಿಕ್ಕ ನಂತರ, ಇವರನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಯಿತು.
ಎಸ್ಎಸ್ಪಿ ಕಚೇರಿಯ ಮೀಡಿಯಾ ವಿಭಾಗಕ್ಕೆ SI ಅನುಜ್ ಅವರನ್ನು ವರ್ಗಾಯಿಸಿದ್ದರೆ, ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಕುಮಾರಿಯನ್ನು ಬೆಳಗಂಜ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಹೀಗಾಗಿ ಇದರೊಂದಿಗೆ ಇಬ್ಬರ ನಡುವಿನ ಪ್ರೀತಿ ದೂರವಾಗಿತ್ತು.
Astrology : ಹೇಗಿದೆ ಗೊತ್ತಾ.? ಅಗಷ್ಟ 10 ರ ದ್ವಾದಶ ರಾಶಿಗಳ ಫಲಾಫಲ.!
SI ಮದುವೆ ಮತ್ತು ವೈಯಕ್ತಿಕ ಜೀವನ :
ಇದರ ನಂತರ ಅನುಜ್ ತಮ್ಮ ಕುಟುಂಬದ ಒತ್ತಾಯಕ್ಕೆ ಮಣಿದು ಜೂಹಿ ಎಂಬ ಯುವತಿಯನ್ನು ಮದುವೆಯಾದರು. ಪತ್ನಿ ಜೂಹಿ ದೆಹಲಿಯಲ್ಲಿ ಯುಪಿಎಸ್‌ಸಿ (UPSC) ತಯಾರಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಅನುಜ್ ಗಯಾದಲ್ಲಿ ಒಬ್ಬರೇ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದರು.
ಮದುವೆಗೆ ಒತ್ತಡ ಮತ್ತು ದುರ್ಘಟನೆ :
ಇತ್ತೀಚೆಗೆ ಮತ್ತೆ ಅನುಜ್ ಮತ್ತು ಸ್ವೀಟಿ ನಡುವೆ ಸಂಪರ್ಕ ಆರಂಭವಾಯಿತು. ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ, ಅನುಜ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ತಾನ್ನನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Belagavi : ಕಾರು ಮರಕ್ಕೆ ಡಿಕ್ಕಿ ; 2 ಜನ ಸ್ಥಳದಲ್ಲೇ ಸಾವು.!
ಈ ಒತ್ತಡವನ್ನು ತಾಳಲಾರದೇ, ಗುರುವಾರ ರಾತ್ರಿ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿಗೆ ವಿಡಿಯೋ ಕಾಲ್ ಮಾಡಿದ ವೇಳೆ SI ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಕ್ರಮ :
ಘಟನೆಯ ನಂತರ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಭಯಭೀತಳಾಗಿ ಬೆಳಗ್ಗೆ 5 ಗಂಟೆಗೆ ಅನುಜ್ರ ಬಾಡಿಗೆ ಮನೆಗೆ ಆಗಮಿಸಿದ್ದಾರೆ. ಬಾಗಿಲು ತೆಗೆಯಲು ಸಾಧ್ಯವಾಗದಿದ್ದರಿಂದ ಮನೆ ಮಾಲೀಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ಒಡೆದು ಒಳ ಪ್ರವೇಶಿಸಿದ ಪೊಲೀಸರು ಅನುಜ್ ಮೃತದೇಹವನ್ನು ಪತ್ತೆಹಚ್ಚಿದರು.
SI ಅನುಜ್ ಪೋಷಕರು ಸಹ ಸ್ವೀಟಿ ಕುಮಾರಿ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ದೂರಿದ್ದಾರೆ. ಪರಿಣಾಮವಾಗಿ ಪೊಲೀಸರು ಸ್ವೀಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿ, ವಿಶೇಷ ತನಿಖಾ ದಳ ಅವಳನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.
“ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

ಜನಸ್ಪಂದನ ನ್ಯೂಸ್, ಆರೋಗ್ಯ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ಖಂಡಿತ ನಿರ್ಲಕ್ಷಿಸಬೇಡಿ, ಅದು ಕಿಡ್ನಿ (Kidney) ಫೆಲ್ಯೂರ್‌ನ ಸೂಚನೆ ಆಗಿರಬಹುದು”.! ಬನ್ನಿ ಈ ಬಗ್ಗೆ ತಿಳಿಯೋಣ.!
ಮೂತ್ರಪಿಂಡಗಳು (Kidney) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸುವ ಫಿಲ್ಟರ್‌ನಂತಿವೆ. ಇವು ದೇಹದಿಂದ ಟಾಕ್ಸಿನ್ ಹಾಗೂ ಹೆಚ್ಚುವರಿ ದ್ರವವನ್ನು ತೆಗೆದುಹಾಕಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಮೂಳೆಗಳಿಗೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.
ಇದನ್ನು ಓದಿ : ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!
ಆದರೆ, ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದಲ್ಲಿ ವಿಷಕಾರಿ ವಸ್ತುಗಳು ಮತ್ತು ದ್ರವ ಸಂಗ್ರಹವಾಗಿ ಕಿಡ್ನಿ ಫೆಲ್ಯೂರ್ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು.
ಈ ಕಾಯಿಲೆಯ ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಆಯಾಸ ಅಥವಾ ದೌರ್ಬಲ್ಯದಂತೆ ಕಾಣುವ ಕಾರಣ. ಅನೇಕರು ಅದನ್ನು ನಿರ್ಲಕ್ಷಿಸುತ್ತಾರೆ ಆದರೆ, ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪರಿಸ್ಥಿತಿ ಮಾರಕವಾಗಬಹುದು. ಆದ್ದರಿಂದ ದೇಹದಲ್ಲಿ ಕಾಣುವ ಕೆಳಗಿನ ಬದಲಾವಣೆಗಳಿಗೆ ತಕ್ಷಣ ಗಮನ ನೀಡುವುದು ಅತ್ಯಗತ್ಯ.!
ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಕಿಡ್ನಿ (Kidney) ವೈಪಲ್ಯದ ಲಕ್ಷಣಗಳು :
1. ಕಾಲುಗಳಲ್ಲಿ ನೋವು ಮತ್ತು ಊತ :
ಪಾದಗಳು ಹಾಗೂ ಕಣಕಾಲುಗಳಲ್ಲಿ ಊತ ಉಂಟಾಗುವುದು ಮೂತ್ರಪಿಂಡ ವೈಫಲ್ಯದ ಪ್ರಮುಖ ಸೂಚನೆ. ಮೂತ್ರಪಿಂಡಗಳು ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರಹಾಕಲು ಅಸಮರ್ಥವಾಗುವಾಗ, ದ್ರವವು ದೇಹದ ಕೆಳಭಾಗದಲ್ಲಿ ಸಂಗ್ರಹವಾಗಿ ಊತ ಮತ್ತು ನೋವಿಗೆ ಕಾರಣವಾಗುತ್ತದೆ.
2. ನಿರಂತರ ಆಯಾಸ :
ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗಿ, ಅಂಗಾಂಶಗಳು ಮತ್ತು ಸ್ನಾಯುಗಳಿಗೆ ಆಮ್ಲಜನಕ ಸರಿಯಾಗಿ ತಲುಪದೆ, ವ್ಯಕ್ತಿ ಯಾವಾಗಲೂ ದಣಿದ ಹಾಗೆ ಅನುಭವಿಸುತ್ತಾರೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!
3. ಚರ್ಮದಲ್ಲಿ ತುರಿಕೆ ಮತ್ತು ಬಣ್ಣ ಬದಲಾವಣೆ :
ರಕ್ತದಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ಸಂಗ್ರಹವಾಗುವ ಕಾರಣ ಚರ್ಮದಲ್ಲಿ ನಿರಂತರ ತುರಿಕೆ ಉಂಟಾಗಬಹುದು. ಕೆಲವೊಮ್ಮೆ ಚರ್ಮ ಒಣಗುವುದು, ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುವುದು ಸಹ ಕಿಡ್ನಿ ಸಮಸ್ಯೆಯ ಸೂಚನೆ ಆಗಬಹುದು.
4. ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ :
ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರದ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆ, ನೊರೆ ಮೂತ್ರ (ಪ್ರೋಟೀನ್ ಇರುವಿಕೆ), ಗಾಢ ಬಣ್ಣ ಅಥವಾ ರಕ್ತದ ಅಂಶ ಇರುವಿಕೆ. ಇವೆಲ್ಲವೂ ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವನ್ನು ಸೂಚಿಸುತ್ತವೆ.
5. ಉಸಿರಾಟದ ತೊಂದರೆ :
ಮೂತ್ರಪಿಂಡ (Kidney) ವೈಫಲ್ಯದಿಂದ ಹೆಚ್ಚುವರಿ ದ್ರವವು ಶ್ವಾಸಕೋಶದ ಸುತ್ತಲೂ ಸಂಗ್ರಹವಾಗಿ ಉಸಿರಾಟ ಕಷ್ಟವಾಗಬಹುದು. ಜೊತೆಗೆ ರಕ್ತಹೀನತೆಯಿಂದಾಗಿ ದೇಹಕ್ಕೆ ಆಮ್ಲಜನಕ ಕಡಿಮೆಯಾಗುವುದರಿಂದ, ಕಡಿಮೆ ಶಾರೀರಿಕ ಚಟುವಟಿಕೆಯಲ್ಲಿಯೂ ಉಸಿರಾಟ ತೊಂದರೆ ಉಂಟಾಗುತ್ತದೆ.
ಇದನ್ನು ಓದಿ : Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!
ಸಂಪಾದಕೀಯ :
ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಚಿಕಿತ್ಸೆ ಪಡೆದರೆ ಮೂತ್ರಪಿಂಡ (Kidney) ಗಳ ಆರೋಗ್ಯವನ್ನು ಕಾಪಾಡಬಹುದು ಮತ್ತು ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.






