Friday, June 14, 2024
spot_img
spot_img
spot_img
spot_img
spot_img
spot_img

Special news : ರಾತ್ರಿ ವೇಳೆ ಅನ್ನ ತಿನ್ನಬೇಕೆ ಅಥವಾ ತಿನ್ನಬಾರದಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅನ್ನ ಎಂದ್ರೆ ಎಲ್ಲರಿಗೂ ತುಂಬಾ ಇಷ್ಟ. ಕೆಲವರು ಅನ್ನ (rice) ಸಾಂಬಾರ್ ಊಟ ಮಾಡಿದರೆ, ಇನ್ನೂ ಕೆಲವು ಮಂದಿ ಫ್ರೈಡ್​ರೈಸ್, ಪುಳಿಯೊಗರೆ, ಚಿತ್ರಾನ್ನ, ಮೊಸರನ್ನ ಹೀಗೆ ಹತ್ತು ಹಲವು ರೀತಿಯಲ್ಲಿ ಅನ್ನವನ್ನು ಬಳಸುತ್ತಾರೆ.

ಅನ್ನ ತಿನ್ನುವುದರಿಂದ ಕೊಬ್ಬು (Fat) ಹೆಚ್ಚಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಅನ್ನವು ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಕೂಡ ಒಳಗೊಂಡಿದೆ.

ಇದನ್ನು ಓದಿ : ಬಾಯ್’ಫ್ರೆಂಡ್ ಭೇಟಿಯಾಗಲು ಬಂದು ಆತನ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ ; ಮುಂದೆನಾಯ್ತು Video ನೋಡಿ.!

ಹೀಗಿದ್ದರೂ ರಾತ್ರಿ ಅನ್ನ ತಿನ್ನಬೇಕೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅನುಕೂಲ :
ಬೇರೆ ಗಟ್ಟಿ ಆಹಾರ ಪದಾರ್ಥಗಳಿಗಿಂತ ಅನ್ನವು ಸುಲಭವಾಗಿ ಜೀರ್ಣವಾಗುತ್ತದೆ (Digestion). ಇದರೊಂದಿಗೆ ಹೊಟ್ಟೆನೋವು ಮತ್ತು ಅಜೀರ್ಣ ಸಮಸ್ಯೆಯಲ್ಲೂ ಪ್ರಯೋಜನ ಸಿಗುತ್ತದೆ.

ಅದಕ್ಕಾಗಿಯೇ ಹೊಟ್ಟೆ ಸರಿಯಿಲ್ಲ ಎಂದಾದಾಗ ಅಥವಾ ಅಜೀರ್ಣದ ಸಮಸ್ಯೆ ಇದ್ದರೆ ವೈದ್ಯರು ಮೊಸರನ್ನ ತಿನ್ನುವಂತೆ ಸಲಹೆ (Advice) ನೀಡುತ್ತಾರೆ.

ಅನಾನುಕೂಲ :
ತೂಕ ಕಡಿಮೆ (weight loss) ಮಾಡಿಕೊಳ್ಳಲು ಬಯಸುವವರು ರಾತ್ರಿ ಹೊತ್ತು ಅನ್ನ ಸೇವಿಸದೆ ಇರುವುದು ಒಳ್ಳೆಯದು.

ಇದರ ಹೊರತಾಗಿಯೂ ಅನ್ನ ತಿನ್ನದೇ ಭೋಜನ ಪೂರ್ಣವಾಗುವುದಿಲ್ಲ ಎಂದಾದರೆ ಬ್ರೌನ್ ರೈಸ್ ಬಳಸುವುದು ಒಳ್ಳೆಯದು. ಇದರಿಂದ ಕಾರ್ಬೋಹೈಡ್ರೇಟ್‌ಗಳ (carbohydrates) ಬದಲಿಗೆ ಫೈಬರ್ ದೇಹಕ್ಕೆ ಸಿಗುತ್ತದೆ.

ಹೆಚ್ಚು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ (Weak) ಮತ್ತು ಅನಿಲ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ ಹಲವು ಸಮಸ್ಯೆಗಳು ಸಹ ಅನ್ನದ ನಿರಂತರ ಸೇವನೆಯಿಂದ ಉಂಟಾಗುತ್ತದೆ.

ಇದನ್ನು ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಅನ್ನ ತಿನ್ನುವುದರಿಂದ ಮಧುಮೇಹದ ಅಪಾಯ ಹೆಚ್ಚಿಸಬಹುದು. ಇದರಲ್ಲಿ ಕ್ಯಾಲೋರಿಗಳು ಅಧಿಕ. ಹೆಚ್ಚು ಅಕ್ಕಿ ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು (Sugar Level) ಹೆಚ್ಚಿಸಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img