ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಲ್‌ವೊಂದು ಬೆಂಕಿಗೆ ಆಹುತಿ (Fire disaster) ಯಾಗಿ ಮಹಿಳೆಯರು, ಮಕ್ಕಳು ಸೇರಿ 50 ಮಂದಿ ಸಾವಿಗೀಡಾಗಿರುವ ಘಟನೆ ಇರಾಕ್‌ನ ವಾಸಿತ್ ಪ್ರಾಂತ್ಯದ ಕುಟ್ ಪಟ್ಟಣದಲ್ಲಿ ಸಂಭವಿಸಿದೆ. ಭೀಕರ ಬೆಂಕಿ ಅನಾಹುತದಲ್ಲಿ ಕನಿಷ್ಠ 50 ಮಂದಿ ದುರ್ಮರಣಕ್ಕೊಳಗಾಗಿದ್ದಾರೆ.
ಮೃತಪಟ್ಟವರಲ್ಲಿ ಮಹಿಳೆಯರು, ಮಕ್ಕಳು ಕೂಡ ಸೇರಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಖರೀದಿಯಲ್ಲಿ ತೊಡಗಿದ್ದಾಗ ಬೆಂಕಿ ಹೊತ್ತಿಕೊಂಡ ದುರ್ಘಟನೆ :
ಕುಟ್‌ನಲ್ಲಿನ ಜನಪ್ರಿಯ ಮಾಲ್‌ನಲ್ಲಿ ಜನರು ಖರೀದಿಯಲ್ಲಿ ನಿರತರಾಗಿದ್ದ ವೇಳೆ, ಏಕಾಏಕಿ ಬೆಂಕಿ (Fire disaster) ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬಹು ಮಹಡಿಗಳನ್ನೂ ವ್ಯಾಪಿಸಿದೆ. ಹೆಚ್ಚಿನ ಜನರು ಹೊರಬರಲು ಸಾಧ್ಯವಾಗದೆ ಮಾಲ್‌ನ ಒಳಗೇ ಸಿಲುಕಿದ ಹಿನ್ನಲೆಯಲ್ಲಿ ಹೆಚ್ಚಿನ ಸಾವು ನೋವಿಗೆ ಕಾರಣವಾಗಿದೆ ಎಂದು ವಾಸಿತ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಅಲ್ ಮಯ್ಯೆಹ್ ತಿಳಿಸಿದ್ದಾರೆ.
ಶೋಕಾಚರಣೆ – ತನಿಖೆ ಆರಂಭ :
ದೇಶವ್ಯಾಪಿ ಆಘಾತ ಉಂಟು ಮಾಡಿರುವ ಈ ದುರಂತದ (Fire disaster) ಹಿನ್ನೆಲೆಯಲ್ಲಿ, ವಾಸಿತ್ ಪ್ರಾಂತ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಬೆಂಕಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.
ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!
ಕಾರಣಕರ್ತರಿಗೆ ಕಠಿಣ ಶಿಕ್ಷೆ :
“ಈ ದುರ್ಘಟನೆ (Fire disaster) ಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಕಿಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ನ್ಯಾಯ ದೊರಕಿಸಲಾಗುವುದು,” ಎಂದು ಗವರ್ನರ್ ಭರವಸೆ ನೀಡಿದ್ದಾರೆ.
ಮಾಲ್‌ನಲ್ಲಿ ಅಗ್ವಿ ದುರಂತದ (Fire disaster) ವಿಡಿಯೋ :
Son dakika
Irak'ın güneyindeki Kut kentinde bir alışveriş merkezinde çıkan yangında yaklaşık 50 kişi hayatını kaybetti!
shopping mall fire in Iraq Irak yangın avm 50 ölü Cem Küçük Teşekkür #SONDAKİKA #tekirdağyanıyor #marmaray Cemil Koç Akın Gürlek Günay İsrail Amerika pic.twitter.com/6PbARbzSCh
— OZAN ÖZTÜRK (@ozanozturk_tr) July 17, 2025
Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳು (Stray dogs) ಅಟ್ಟಹಾಸ ಮೆರೆದಿರುವ ಘಟನೆಯೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪರೀಕ್ಷೆಗಾಗಿ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಯುವತಿ (ವಿದ್ಯಾರ್ಥಿನಿ) ಯೊಬ್ಬಳ ಮೇಲೆ ನಾಲ್ಕೈದು ಬೀದಿ ನಾಯಿಗಳ ಗುಂಪು ದಾಳಿ ನಡೆಸಿವೆ.
ಬೀದಿ ನಾಯಿಗಳ (Stray dogs) ದಾಳಿಯಿಂದ ಯುವತಿಗೆ ಗಾಯಗಳಾಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ಕಯೆದೊಯ್ಯಲಾಗಿದೆ.
ಇದನ್ನು ಓದಿ : ಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!
ಭಯಾನಕ ಘಟನೆಯ ಸಂಪೂರ್ಣ ದೃಶ್ಯ CCTV ಯಲ್ಲಿ ಸೆರೆಯಾಗಿದ್ದು, ಸದ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಘಟನೆಯ ಹಿನ್ನಲೆ :
ಕಾಲೇಜು ಯುವತಿಯೋರ್ವಳು ಪರೀಕ್ಷೆಗೆ ತೆರಳಲ್ಲೆಂದು ಬೆಳಗ್ಗೆ ರಸ್ತೆ ಮಧ್ಯೆ ಸಾಗುತ್ತಿದ್ದಾಗ, ಒಮ್ಮೇಲೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ನಡೆಸಿವೆ. ಬೀದಿ ನಾಯಿಗಳ ಗುಂಪುನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ಮನೆಯ ಹತ್ತಿರ ತೆರಳಿ ಹೇಗೋ ಪಾರಾಗಿದ್ದಾಳೆ.
ಕೆಲ ಸಮಯದ ನಂತರ ಅವೇ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ಪುನಃ ಯುವತಿಯ ಮೇಲೆ ದಾಳಿಗೆ ಮುಂದಾಗಿವೆ. ಸುದೈವಶಾತ್ ಇದೇ ವೇಳೆ ಅದೆ ರಸ್ತೆಯಲ್ಲಿ ಇನ್ನೋಬ್ಬ ಯುವತಿ (ವಿದ್ಯಾರ್ಥಿನಿಯ ಸ್ನೇಹಿತೆ) ಬರುತ್ತಿರಬೇಕಾದರೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ಮಾಡಲು ಮುಂದಾಗಿರುವುದನ್ನು ಗಮನಿಸಿದ್ದಾಳೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಈ ವೇಳೆ ಸ್ನೇಹಿತೆ ಧೈರ್ಯದಿಂದ ಆಕೆಯ ನೆರವಿಗೆ ಧಾವಿಸಿ, ಕೈಯಲ್ಲಿ ಕಲ್ಲು ಹಿಡಿಯುತ್ತಲೇ ಬೀದಿ ನಾಯಿಗಳು ಅಲ್ಲಿಂದ ಓಡಿ ಹೋಗಿವೆ. ಸ್ನೇಹಿತೆಯ ಸಮಯಪ್ರಜ್ಷೆಯಿಂದ ಯುವತಿ ಬೀದಿ ನಾಯಿ (Stray dogs) ಗಳಿಂದ ಪಾರಾಗಿದಾಳೆ.
ಗಂಭೀರ ಗಾಯ, ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು :
ನಾಯಿಗಳ ಹಲ್ಲೆಯಿಂದ ಯುವತಿಗೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ : Private video threat : ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳೆಯ ಪತಿ ಬಂಧನ.!
ವೈರಲ್ ವಿಡಿಯೋ: ಆತಂಕ ಮೂಡಿಸಿದ ದೃಶ್ಯ :
ಜುಲೈ 15ರಂದು @Incognito_qfs ಎಂಬ ಫ್ಲಾಟ್‌ಪಾರಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, 7.8 ಮಿಲಿಯನ್‌ವೇಳೆ ವೀಕ್ಷಣೆ ಪಡೆದಿದೆ. ವಿಡಿಯೋದಲ್ಲಿ, ತನ್ನ ಪಾಡಿಗೆ ನಡೆಯುತ್ತಿದ್ದ ಯುವತಿಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದ್ದು, ದಾಳಿ ವೇಳೆ ಯುವತಿ ಕೆಳಗೆ ಬಿದ್ದು ನಾಯಿಗಳನ್ನು ಓಡಿಸಲು ಪಯತ್ನಿಸುತ್ತಿರುವುದು ನೋಡಬಹುದು.
ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪ್ರತಿಕ್ರಿಯೆ :
ಈ ವಿಡಿಯೋ ಕುರಿತು ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದು, “ಈ ಸ್ಥಳದಲ್ಲಿ ಮಕ್ಕಳಿದ್ದರೆ ಅವರ ಪ್ರಾಣಕ್ಕೂ ಅಪಾಯವಾಗಬಹುದಿತ್ತು” ಎಂದು ಒಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ಬೀದಿ ನಾಯಿಗಳ (Stray dogs) ದಾಳಿಯ ವಿಡಿಯೋ :
https://x.com/i/status/1945043277796815117