Sunday, July 20, 2025

Janaspandhan News

HomeGeneral NewsSchoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!
spot_img
spot_img

Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿಯೇ ಶಾಲಾ ವಿದ್ಯಾರ್ಥಿನಿ (Schoolgirl) ಯೋರ್ವಳು ಧರ್ಮದೇಟು ಕೊಟ್ಟ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಸ್ತೆಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತ ಪರಿಸ್ಥಿತಿ ಸದ್ಯಕಂತು ತುಂಬಾ ಕಷ್ಟಕರವಾಗಿದೆ.‌ ಏಕೆಂದರೆ, ಕೆಲವರು ಚಿನ್ನದ ಸರಗಳ್ಳತನ, ಕಳ್ಳತನದಲ್ಲಿ ತೊಡಗಿದ್ದರೆ, ಇನ್ನೂ ಕಾಮುಕರು ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿ (Schoolgirl) ಯರನ್ನೋ ಅಥವಾ ಯುವತಿಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆದರೆ ಈ ನಡುವೆ ಒಂದು ಶಾಕಿಂಗ್‌ ಎಂಬಂತೆ ಹೈ ಸ್ಕೂಲ್‌ ವಿದ್ಯಾರ್ಥಿನಿ (Schoolgirl) ಯೋರ್ವಳು ಧೈರ್ಯವಂತೆ ನಿಂತು ತಮಗೆ ಕಿರುಕುಳ ನೀಡಿದನಿಗೆ ರಸ್ತೆಯಲ್ಲಿಯೇ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಹೀಗೆ ಹೈ ಸ್ಕೂಲ್‌ ವಿದ್ಯಾರ್ಥಿನಿಯಿಂದ ಧರ್ಮದೇಟು ತಿನ್ನುತ್ತಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ವಿದ್ಯಾರ್ಥಿನಿ (Schoolgirl) ಯಿಂದ ಧರ್ಮದೇಟು ತಿನ್ನುತ್ತಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿರುವ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಹೈ ಸ್ಕೂಲ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋಬ್ಬ ಮಾರ್ಗಮಧ್ಯದಲ್ಲಿ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತನಿಗೆ ತಕ್ಕ ಶಿಕ್ಷೆ ನೀಡಿ ಹೆಣ್ಣುಮಕ್ಕಳೂ ಪ್ರತಿರೋಧ ತೋರಿದರೆ ಏನಾಗುತ್ತದೆ ಎಂಬ ಸಂದೇಶವನ್ನು ಕೊಟ್ಟಿದ್ದಾಳೆ.

ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
ಕಾಲರ್ ಹಿಡಿದು ಚಪ್ಪಲಿ ಏಟು – ಧೈರ್ಯಶಾಲಿ ಪ್ರತಿಭಟನೆ :

ಮೂಲಗಳ ಪ್ರಕಾರ, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ (Schoolgirl) ಗೆ ವ್ಯಕ್ತಿಯೊಬ್ಬ ಚುಡಾಯಿಸಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಮುಂದಾದ ವಿದ್ಯಾರ್ಥಿನಿ, ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ನಿಲ್ಲಿಸಿ ಕಾಲರ್ ಹಿಡಿದು ಪ್ರಶ್ನಿಸಿದ್ದಾಳೆ. ಅಷ್ಟೆ ಅಲ್ಲಾ, ಬಳಿಕ ಎಲ್ಲರ ಮುಂಭಾಗದಲ್ಲೇ Schoolgirl ತನ್ನ ಚಪ್ಪಲಿಯಿಂದ ಏಟು ಕೊಟ್ಟು ಆತನಿಗೆ ಎಚ್ಚರಿಕೆ ನೀಡಿದ್ದಾಳೆ.

ಈ ಘಟನೆಯ ವಿಡಿಯೋವನ್ನು ಜುಲೈ 20 ರಂದು Ghar Ke Kalesh ಎಂಬ “X” (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಲಾಗಿದ್ದು, “ಶಾಲೆಗೆ ಹೋಗುತ್ತಿದ್ದ ವೇಳೆ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಪಾಠ ಕಲಿಸಿದ ವಿದ್ಯಾರ್ಥಿನಿ” ಎಂಬ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲಿಯವರೆಗೆ 72K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಹಾಪೂರ :

ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದ್ದು, ಅದರಲ್ಲಿ ಒಬ್ಬ ಬಳಕೆದಾರರು, “ಅಲ್ಲಿ ನಿಂತವರು ಯಾರಾದರೂ ಸಹಾಯಕ್ಕೆ ಬಂದರಾ? ನಾಚಿಕೆ ಆಗಬೇಕು.! ಆದರೆ ಹುಡುಗಿಯ ಧೈರ್ಯ ಅದ್ಭುತ.!” ಎಂದಿದ್ದಾರೆ. ಮತ್ತೋಬ್ಬ ನೆಟ್ಟಿಗ, “ಈ ವಿದ್ಯಾರ್ಥಿನಿಗೆ ಬಹುಮಾನ ನೀಡಬೇಕು.!” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಈ ಧೈರ್ಯಶಾಲಿ ಹೆಣ್ಣಿಗೆ ಶಭಾಷ್ ಹೇಳಿದ್ದಾರೆ.

ಧರ್ಮದೇಟು ಕೊಡುತ್ತಿರುವ ಶಾಲಾ ಬಾಲಕಿ (Schoolgirl) ಯ ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


“ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”

Kidney

ಜನಸ್ಪಂದನ ನ್ಯೂಸ್, ಆರೋಗ್ಯ : ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಶೋಧಿಸುವ ಪ್ರಮುಖ ಅಂಗಾಂಗಗಳಲ್ಲೊಂದು. ರಕ್ತದಲ್ಲಿರುವ ತ್ಯಾಜ್ಯಗಳನ್ನು ಮತ್ತು ಅಗತ್ಯವಿಲ್ಲದ ದ್ರವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯ ಈ ಅಂಗಾಂಗ (Kidney) ಗಳು ನಿರ್ವಹಿಸುತ್ತವೆ.

ಒಂದು ವೇಳೆ ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ಕಶ್ಮಲಗಳು ಸಂಗ್ರಹವಾಗಲು ಆರಂಭವಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!

ಈ ರೀತಿಯ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡ (Kidney) ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಎಂದು ಕರೆಯಲಾಗುತ್ತದೆ.

ಇದು ನಿಧಾನವಾಗಿ ಬೆಳೆಯುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾದ್ಯವಾಗಬಹುದು.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇವು ಮೂತ್ರಪಿಂಡ (Kidney) ವೈಫಲ್ಯವನ್ನು ಸೂಚಿಸಬಹುದಾದ ಕೆಲವು ಪ್ರಮುಖ ಸಂಕೇತಗಳು :
1. ಮೂತ್ರದಲ್ಲಿ ಬದಲಾವಣೆಗಳು :
  • ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ.
  • ರಾತ್ರಿಯ ವೇಳೆ ಮಿಕ್ಕಷ್ಟು ಬಾರಿ ಮೂತ್ರದ ಅವಶ್ಯಕತೆ.
  • ಮೂತ್ರದಲ್ಲಿ ನೊರೆ, ರಕ್ತ ಅಥವಾ ಬದಲಾಗಿದ ಬಣ್ಣ.
  • ಮೂತ್ರ ವಿಸರ್ಜನೆ ವೇಳೆ ಗಂಭೀರ ತೊಂದರೆ.
2. ದೇಹದ ಅವಯವಗಳಲ್ಲಿ ಊತ :
  • ಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಉಂಟಾಗುವ ಊತ.
  • ದೇಹದಲ್ಲಿ ನೀರಿನ ಶೇಖರಣೆಯಿಂದ ಉಂಟಾಗುವ ಶ್ವಾಸದ ತೊಂದರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
3. ದಣಿವು ಮತ್ತು ಅಶಕ್ತತತೆ :
  • ಮೂತ್ರಪಿಂಡಗಳ ಕಾರ್ಯ ಕ್ಷೀಣಗೊಂಡಾಗ, ರಕ್ತಹೀನತೆ ಉಂಟಾಗಬಹುದು.
  • ಕಡಿಮೆ ಶ್ರಮದಲ್ಲಿಯೇ ದಣಿವು ಅನುಭವಿಸುವುದು.
4. ತುರಿಕೆ ಮತ್ತು ಸ್ನಾಯು ಸೆಳೆತ :
  • ರಕ್ತದಲ್ಲಿ ತ್ಯಾಜ್ಯ ಪದಾರ್ಥಗಳು ಮತ್ತು ಖನಿಜಗಳ ಅಸಮತೋಲನದಿಂದ ತುರಿಕೆ.
  • ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಿರಿಕಿರಿ.
  • ಕಾಲುಗಳಲ್ಲಿ ಸ್ನಾಯು ಸೆಳೆತ ಮತ್ತು ನೋವು.
5. ಇತರ ಲಕ್ಷಣಗಳು :
  • ಊಟದ ಮೇಲೆ ಆಸೆ ಕಡಿಮೆಯಾಗುವುದು.
  • ವಾಕರಿಕೆ ಅಥವಾ ಒಮ್ಮೆ ಎದೆಯಲ್ಲಿ ತೀವ್ರ ಒತ್ತಡ.
  • ಏಕಾಏಕಿ ತೂಕ ಇಳಿಕೆ ಅಥವಾ ಹೆಚ್ಚಳ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

ಆರೋಗ್ಯ ಸಲಹೆ : ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ, ಮೂತ್ರಪಿಂಡ (Kidney) ದ ಸಮಸ್ಯೆಗಳನ್ನು ನಿಯಂತ್ರಣದಲ್ಲಿರಿಸಬಹುದು.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments