Thursday, April 24, 2025
spot_img
HomeGeneral Newsಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್
spot_img
spot_img
spot_img

ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಆಕೆಯ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ (Sarigamapa reality show) ಮೂಲಕ ಪೃಥ್ವಿ ಭಟ್ ಬೆಳಕಿಗೆ ಬಂದ ಗಾಯಕಿಯಾಗಿದ್ದು, ಇವರು ಗಡಿನಾಡು ಕಾಸರಗೋಡು ಮೂಲದವರು.

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ ಪೃಥ್ವಿ ಭಟ್ ಈಗ ದಿಢೀರ್ ಆಗಿ ಮದುವೆಯಾಗಿದ್ದಾರೆ.

ಗಾಯಕಿ ಪೃಥ್ವಿ ಭಟ್, ಅಭಿಷೇಕ್ ಎನ್ನುವ ಯುವಕನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ (Married in a temple) ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತಗೊಂಡಿದ್ದಾರೆ.

ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!

ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದ ಮಗಳು, ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ (Vashikaran Vidya Experiment). ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದಾರೆ.

ಮಾರ್ಚ್ 27 ರಂದು ಇಬ್ಬರ ವಿವಾಹವಾಗಿದೆ. ಮದುವೆಯಾಗಿ 20 ದಿನಗಳಾಗಿದ್ದು, ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪಾಗಲಿಲ್ಲ. ರೆಕಾರ್ಡಿಂಗ್ ಗೆ ಅಂತ ನಾನೇ ಅವಳನ್ನು ಸ್ಟುಡಿಯೋಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಕಾಲ್ ಮಾಡಿ ಹೇಳಿದ್ರು ಪೃಥ್ವಿ ಭಟ್ ನಿಮ್ಮ ಮಗಳಾ? ಅವಳು ಅಭಿಷೇಕ್ ಎನ್ನುವವರನ್ನು ಮದುವೆಯಾಗಿ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಮನೆಗೆ ಬರ್ತಾರಂತೆ ಅಂತ ಹೇಳಿದ್ರು. ಆಗ ನಾವು ಮನೆಗೆ ಬರುವುದು ಬೇಡ. ಇಲ್ಲಿಗೆ ಬಂದರೆ ಗಲಾಟೆಯಾಗುತ್ತದೆ ಎಂದೆವು.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಅದಾದ ಬಳಿಕ ಒಂದೆರಡು ಸಲ ಕಾಲ್ ಮಾಡಿ ತಪ್ಪಾಯ್ತು ಅಪ್ಪ, ಅಮ್ಮ ಎಂದು ಹೇಳಿದ್ದಳು. ಅದು ಬಿಟ್ಟರೆ ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಪೃಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತಜ್ಞರು ಫೇಸ್‌ ಮ್ಯಾಪಿಂಗ್‌ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್‌ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.

ಮುಖದ ವೈಶಿಷ್ಟ್ಯಗಳು ಮತ್ತು ನಮ್ಮ ದೇಹದ ಅಂಗಗಳ ನಡುವೆ ಆಕರ್ಷಕ ಸಂಪರ್ಕವಿದೆ, ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೇಸ್ ಮ್ಯಾಪಿಂಗ್ ಎಂದೂ ಕರೆಯುತ್ತಾರೆ.

ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!

ಫೇಸ್ ಮ್ಯಾಪಿಂಗ್ ಎನ್ನುವುದು ಚರ್ಮದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸಲು (To determine skin health) ವಿವಿಧ ಮುಖದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಒಂದು ರೀತಿಯ ಚರ್ಮದ ಪರೀಕ್ಷೆಯಾಗಿದೆ.

ಹಾರ್ಮೋನುಗಳ ಅಸಮತೋಲನ, ನಿರ್ಜಲೀಕರಣ, ಸೂಕ್ಷ್ಮತೆಗಳು ಮತ್ತು ನಿರ್ಬಂಧಿಸಲಾದ ರಂಧ್ರಗಳಂತಹ (Dehydration, sensitivities and blocked pores) ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಮುಖದ ಭಾಗಗಳನ್ನು ಗ್ರಿಡ್ ವಿಧಾನವನ್ನು ಬಳಸಿಕೊಂಡು ಗುರುತಿಸಲಾಗುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!

ವಿಶ್ಲೇಷಣೆಯನ್ನು ಬಳಸಿಕೊಂಡು, ಚರ್ಮದ ಆರೈಕೆ ತಜ್ಞರು ಸಾಮಾನ್ಯ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಸೂಚಿಸಬಹುದು.

* ಗಲ್ಲ ಮತ್ತು ದವಡೆ :
ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು (Hormonal imbalance) ಸೂಚಿಸಬಹುದು. ಇನ್ನೂ ಗಂಡು ಮಕ್ಕಳಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಅದೇ ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್‌ ಭೇಟಿ ಮಾಡಬೇಕು.

ಇದನ್ನು ಓದಿ : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!

* ಮೂಗು :
ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರತಿಬಿಂಬವೇ ಆಗಿದೆ ಈ ಪ್ರದೇಶ. ಅಲ್ಲದೇ ಹೃದಯ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದೆ. ಇಲ್ಲಿ ಯಾವುದೇ ಕೆಂಪು ಅಥವಾ ಕಲೆಗಳು ಅಧಿಕ ರಕ್ತದೊತ್ತಡ, ಕಳಪೆ ರಕ್ತಪರಿಚಲನೆ (Poor circulation) ಅಥವಾ ಹೃದಯ ರಕ್ತನಾಳದ ಒತ್ತಡದಂತಹ ಆಧಾರವಾಗಿರುವ ಸಮಸ್ಯೆಗಳ ಸಂಕೇತವಾಗಿರಬಹುದು, ನಮ್ಮ ಹೃದಯದ ಆರೋಗ್ಯವನ್ನು ಹತ್ತಿರದಿಂದ ನೋಡಲು ಪ್ರೋತ್ಸಾಹಿಸುತ್ತದೆ.

* ಹಣೆ :
ಹಣೆಯ ಮೇಲಿನ ಬಿರುಕುಗಳು ಕಳಪೆ ಜೀರ್ಣಕ್ರಿಯೆ, ಉಬ್ಬುವುದು ಅಥವಾ ಒತ್ತಡವನ್ನು ಸೂಚಿಸಬಹುದು, ಜೀರ್ಣಕ್ರಿಯೆ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದೆ. ಸ್ಪಷ್ಟವಾದ ಚರ್ಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಂತರಿಕ ಅಸಮತೋಲನವನ್ನು ಪರಿಹರಿಸುವ ಅಗತ್ಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

* ಕೆನ್ನೆಗಳು :
ಈ ಪ್ರದೇಶವು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದೆ, ಕಲೆಗಳು ಅಥವಾ ಅಸಮತೋಲನದ ಮೂಲಕ ಉಸಿರಾಟದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ಸಂಕೇತಿಸುತ್ತದೆ, ಉಸಿರಾಟ ಮತ್ತು ಶ್ವಾಸಕೋಶದ ಕಾರ್ಯವನ್ನು ಪರಿಹರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.

* ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ಕಣ್ಣಿನ ಕೆಳಗೆ ತುಂಬಾ ನೀರು ಸೇರಿದ ರೀತಿ ಇದ್ದರೆ ಅಥವಾ ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ (It means that the kidneys are not working properly). ಲೇಟ್‌ ನೈಟ್‌ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು.

ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!

* ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ, ಬಾಯಿಯ ಎರಡೂ ಕಡೆಗಳಲ್ಲಿಯೂ ಮೊಡವೆ ಉಂಟಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
- Advertisement -
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments