ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆಯಲ್ಲಿ ರಾಟ್‌ವೀಲರ್ ನಾಯಿಗಳ (Rottweiler Dog) ದಾಳಿಗೆ ಮಹಿಳೆ ಸಾವನ್ನಪ್ಪಿದ ಪ್ರಕರಣ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದರೂ, ಇದೀಗ ಈ ಘಟನೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆ ಹೊರಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿಗಳನ್ನು ನಿರ್ದಯವಾಗಿ ಬಿಟ್ಟುಹೋದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮತ್ತೊಂದೆಡೆ, ದಾಳಿ ನಡೆಸಿದ ಎರಡೂ ರಾಟ್‌ವೀಲರ್ ನಾಯಿಗಳು ಸೆರೆ ಕಾರ್ಯಾಚರಣೆ ಸಮಯದಲ್ಲೇ ಮೃತಪಟ್ಟಿರುವ ದುಃಖಕರ ಮಾಹಿತಿ ಹೊರಬಿದ್ದಿದೆ.
ನಾಯಿ (Rottweiler Dog) ಗಳನ್ನು ಬಿಟ್ಟುಹೋದ ಆರೋಪಿ ಬಂಧನ :
ಪೊಲೀಸರ ಬಂಧನದಲ್ಲಿರುವ ಶೈಲೇಶಕುಮಾರ್ ಅವರು ದಾವಣಗೆರೆಯ ದೇವರಾಜ ಅರಸು ಬಡಾವಣೆ ಪ್ರದೇಶದ ನಿವಾಸಿ. ಈತ ಹೊನ್ನೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 48 (NH-48) ಸೇವಾ ರಸ್ತೆಯಲ್ಲಿ ಎರಡು ರಾಟ್‌ವೀಲರ್ ನಾಯಿಗಳನ್ನು ಬಾಡಿಗೆ ಆಟೋದಲ್ಲಿ ತಂದು ಬಿಟ್ಟುಹೋದ ಎನ್ನಲಾಗಿದೆ.
ಇದನ್ನು ಓದಿ :
ನಂತರ ಈ ನಾಯಿ (Rottweiler Dog) ಗಳು ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಅವರ ಮೇಲೆ ದಾಳಿ ಮಾಡಿ ಅವರನ್ನು ದುರ್ಘಟನೆಗೊಳಪಡಿಸಿದವು.
ಪ್ರಕರಣದ ತನಿಖೆಯನ್ನು ಗ್ರಾಮಾಂತರ ಠಾಣೆಯ ಸಿಪಿಐ ಅಣ್ಣಯ್ಯ ಕೆ.ಟಿ. ಅವರು ನೇತೃತ್ವ ವಹಿಸಿದ್ದರು. ಘಟನೆಯ ಬಳಿಕ ಪೊಲೀಸ್ ತಂಡವು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ನಾಯಿ (Rottweiler Dog) ಗಳನ್ನು ಯಾರಿಂದ ಕರೆ ತಂದು ಬಿಡಲಾಯಿತು ಎಂಬ ಸುಳಿವುಗಳನ್ನು ಕಲೆಹಾಕಿತು.
ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಶೈಲೇಶಕುಮಾರ್ ಭಾಗವಹಿಸಿದ ಬಗ್ಗೆ ಮಾಹಿತಿ ದೃಢಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಘಟನೆ ನಡೆದ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಾಯಿತು.
ರಕ್ತಸ್ರಾವದಿಂದ ನಾಯಿಗಳ ಸಾವು :
ಅನಿತಾ ಅವರು ರಾತ್ರಿ ಹೊತ್ತು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಾಟ್‌ವೀಲರ್ ನಾಯಿ (Rottweiler Dog) ಗಳು ಅಕಸ್ಮಿಕವಾಗಿ ದಾಳಿ ನಡೆಸಿದ್ದವು. ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ನಾಯಿಗಳು ಸುಮಾರು 50ಕ್ಕೂ ಹೆಚ್ಚು ಬಾರಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದವು. ಸ್ಥಳೀಯರು ನೆರವಿಗೆ ಧಾವಿಸಿದರೂ, ಅವರು ಪ್ರಾಣ ಕಳೆದುಕೊಂಡಿದ್ದರು.
ಇದನ್ನು ಓದಿ : ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.
ಘಟನೆ ಬಳಿಕ ಜನರು ನಾಯಿ (Rottweiler Dog) ಗಳನ್ನು ಸ್ಥಳೀಯರ ನೆರವಿನಿಂದ ಹುಡುಕಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವಾಗಲೇ ನಾಯಿಗಳು ತೀವ್ರ ನಿತ್ರಾಣಗೊಂಡಿದ್ದವು. ನಂತರ ಸೆರೆ ಕಾರ್ಯಾಚರಣೆಯ ವೇಳೆ ಎರಡೂ ನಾಯಿಗಳು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿರುವುದು ವರದಿಯಾಗಿದೆ.
ಶ್ವಾನಪ್ರೇಮಿಗಳಿಂದ ತೀವ್ರ ಆಕ್ರೋಶ :
ಈ ದುರ್ಘಟನೆಗೆ ಸಂಬಂಧಿಸಿದಂತೆ ದಾವಣಗೆರೆಯ ಶ್ವಾನಪ್ರೇಮಿಗಳು ಮತ್ತು ಡಾಗ್ ಹ್ಯಾಂಡ್ಲರ್‌ಗಳು ನಾಯಿಗಳ (Rottweiler Dog) ಮಾಲೀಕರ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಡಾಗ್ ಹ್ಯಾಂಡ್ಲರ್ ನಂದೀಶ್ ಮತ್ತು ಶ್ವಾನಪ್ರೇಮಿ ಸಚಿನ್ ಅವರು ಮಾತನಾಡಿ, ನಾಯಿಗಳನ್ನು ಸಾಕಲಾಗದಿದ್ದರೆ ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸಬಹುದಿತ್ತು. ಕಾಯಿಲೆ ಅಥವಾ ಆಕ್ರೋಶದ ಸಮಸ್ಯೆ ಇದ್ದರೆ ದಯಾಮರಣಕ್ಕೆ ಕಾನೂನು ಅವಕಾಶವಿದೆ.
ಆದರೆ ಹೀಗೆ ಬಿಟ್ಟುಹೋದ ಪರಿಣಾಮವಾಗಿ ಒಬ್ಬ ಮಹಿಳೆ ಮತ್ತು ಎರಡು ಪ್ರಾಣಿಗಳು ಸಾವನ್ನಪ್ಪಿರುವುದು ಮಾಲೀಕನ ಗಂಭೀರ ನಿರ್ಲಕ್ಷ್ಯ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಹೆತ್ತ ಮಗನನ್ನು ಸೇರಿಸಿ 4 ಮಕ್ಕಳನ್ನು ಹತ್ಯೆ ಮಾಡಿದ Woman.!
ನಿರ್ಲಕ್ಷ್ಯದಿಂದ ದುರಂತ :
ಒಬ್ಬ ಮಾಲೀಕನ ನಿರ್ಲಕ್ಷ್ಯದಿಂದಾಗಿ ಮನುಷ್ಯ ಜೀವವೊಂದು ಕಳೆದುಹೋಗಿರುವುದಲ್ಲದೆ, ಸಾಕಲ್ಪಟ್ಟ ಪ್ರಾಣಿಗಳೂ ದುರಂತ ಅಂತ್ಯ ಕಂಡಿವೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್, ಜೈಪುರ : ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಹಗಲು ದರೋಡೆ ರೀತಿಯ ಘಟನೆ ನಡೆದಿದೆ. ಶಾಪಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನೆಲಕ್ಕೆ ಕೆಡವಿದ್ದ 50 ಸಾವಿರ ರೂಪಾಯಿ ಇರುವ ಹಣದ ಬಂಡಲ್‌ನ್ನು ಇಬ್ಬರು ಬೈಕರ್‌ಗಳು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿವೆ.
ಶಾಪಿಂಗ್ ವೇಳೆ ಬಿದ್ದ ರೂ.50 ಸಾವಿರ :
ಬರ್ಕತ್ ನಗರದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ ರಸ್ತೆ (Road) ದಾಟುವಾಗ, ಕೈಯಲ್ಲಿದ್ದ 50,000 ರೂ ನಗದು ಇರುವ ಬಂಡಲ್ ಜಾರಿಬಿದ್ದು ರಸ್ತೆಗೆ ಬಿದ್ದಿದೆ. ಜನಸಂದಣಿ ಮತ್ತು ಜಾಕೆಟ್ ಹಾಕಿಕೊಳ್ಳುವ ಗಡಿಬಿಡಿಯಲ್ಲಿ ರಸ್ತೆಗೆ (Road) ಹಣ ಬಿದ್ದಿರುವುದನ್ನು ಮಹಿಳೆ ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ.
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಬೈಕರ್‌ಗಳು ಕ್ಷಣಾರ್ಧದಲ್ಲಿ ಹಣ ಎತ್ತಿಕೊಂಡು ಪರಾರಿ :
ಅದೇ ವೇಳೆ ಬಂದ ಇಬ್ಬರು ಬೈಕ್ ಸವಾರರು ರಸ್ತೆ (Road) ಯಲ್ಲಿ ಬಿದ್ದಿದ್ದ ಹಣವನ್ನು ಗಮನಿಸಿ ಕ್ಷಣಾರ್ಧದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಹಿಂಬದಿ ಸವಾರ ಕೆಳಗಿಳಿದು ರಿಕ್ಷಾ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಬಿದ್ದ ಹಣವನ್ನು ಎತ್ತಿಕೊಂಡು, ಮಹಿಳೆ ಅರಿತುಕೊಳ್ಳುವಷ್ಟರಲ್ಲಿ ಬೈಕ್‌ಗೆ ಏರಿ ಪರಾರಿಯಾಗಿದ್ದಾರೆ.
ರಸ್ತೆ (Road) ಮೇಲೆ ತಮ್ಮ ಹಣ ಬಿದ್ದಿದೆ ಎಂದು ಗಮನಿಸಿದ ಮಹಿಳೆ ಬೈಕ್ ನಿಲ್ಲಿಸಲು ಓಡಿ ಬಂದರೂ, ದುಷ್ಕರ್ಮಿಗಳು ಅವರನ್ನು ತಳ್ಳಿ ಸಂಚಾರ ದಟ್ಟಣೆಯ ನಡುವೆ ಪರಾರಿಯಾಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಸ್ಪಷ್ಟ ದೃಶ್ಯ :
ಈ ಘಟನೆಯ ದೃಶ್ಯ ರಸ್ತೆ (Road) ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನು ಓದಿ : ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್ ; ಗಲಾಟೆಯ ವಿಡಿಯೋ ವೈರಲ್.
ಮದುವೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ :
SHO ಪೂನಂ ಚೌಧರಿ ನೀಡಿರುವ ಮಾಹಿತಿಯ ಪ್ರಕಾರ, “ಮಹಿಳೆ ತಮ್ಮ ಮಗಳೊಂದಿಗೆ ಮದುವೆ ಶಾಪಿಂಗ್‌ಗಾಗಿ ಜೈಪುರಕ್ಕೆ ಬಂದಿದ್ದರು. ಜನಸಂದಣಿ ಇರುವ ಬರ್ಕತ್ ನಗರದಲ್ಲಿ ರಸ್ತೆ (Road) ದಾಟುವಾಗ ಮತ್ತು ಜಾಕೆಟ್ ಹಾಕಿಕೊಳ್ಳುವ ಅವಸರದ ವೇಳೆ ಹಣ ಬಿದ್ದಿದೆ. ಬೈಕರ್‌ಗಳು ಈ ಅವಕಾಶವನ್ನು ಬಳಸಿಕೊಂಡು ನಗದನ್ನು ಕದ್ದಿದ್ದಾರೆ,” ಎಂದು ತಿಳಿಸಿದ್ದಾರೆ.
FIR ದಾಖಲು :
ಸ್ಥಳೀಯ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ FIR ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ.
ವಿಡಿಯೋ :
जयपुर के बरकत नगर में दिनदहाड़े चोरी की वारदात।शॉपिंग करने आई महिला के जैकेट से 50 हजार सड़क पर गिरे।दो बाइक सवार युवकों ने नोटों की गड्डी पर डाली नजर।
एक युवक बाइक से कूदकर गड्डी उठाकर भागा।महिला ने दौड़कर पकड़ने की कोशिश की, लेकिन आरोपी फरार।वारदात कल शाम 4:45 बजे हुई। पूरी… pic.twitter.com/FssUpyYYoY— Roshan sharma (@roshansharma_j) December 5, 2025
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






