ಮಂಗಳವಾರ, ಜನವರಿ 13, 2026

Janaspandhan News

HomeCrime NewsRoad ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ; ಭಯಾನಕ ವಿಡಿಯೋ ವೈರಲ್!
spot_img
spot_img

Road ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ; ಭಯಾನಕ ವಿಡಿಯೋ ವೈರಲ್!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಂಧ್ರಪ್ರದೇಶದ ಬಾಪಟ್ಲಾ (Bapatla) ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಯುವಕರ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ರಾತ್ರಿ ವೇಳೆ ನಡೆದಿದ್ದು, ಬೈಕ್ ಸವಾರ ವೇಗವಾಗಿ ರಸ್ತೆ (Road) ಯಲ್ಲಿ ಸಂಚರಿಸುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿರುವುದರಿಂದ ಈ ಅಪಘಾತ ಸಂಭವಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ರಸ್ತೆ (Road) ಅಪಘಾತ ನಡೆಯುತ್ತಿದಂತೆಯೇ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಗಂಭೀರವಾಗಿ ಗಾಯಗೊಂಡ ಇಬ್ಬರೂ ಯುವಕರು ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣ ಕಳೆದುಕೊಂಡರು.

ಈ ರಸ್ತೆ (Road) ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ರಸ್ತೆ (Road) ಅಪಘಾತದ ಕುರಿತಾಗಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಲಾರಿ ಚಾಲಕನನ್ನು ಹುಡುಕಾಟ ಮಾಡುತ್ತಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಈ ಪ್ರಕರಣವು ರಸ್ತೆ (Road) ಸುರಕ್ಷತೆ ಕುರಿತಾಗಿ ಸಾರ್ವಜನಿಕರಲ್ಲಿ ಎಚ್ಚರಿಕೆಯನ್ನು ಮೂಡಿಸಿದ್ದು, ವಾಹನ ಚಾಲಕರಿಗೆ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ.

ವಿಡಿಯೋ ನೋಡಿ :


Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
Cancer

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ʼಕ್ಯಾನ್ಸರ್‌ (Cancer)ʼ ಎಂಬ ಪದವೇ ಕೇಳಿದರೂ ಹಲವರಿಗೆ ಭಯ ಹುಟ್ಟುತ್ತದೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಈ ಕಾಯಿಲೆಯ ಕೆಲವು ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ ಮತ್ತು ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ಮಾಡಿದರೆ ಕ್ಯಾನ್ಸರ್‌ನಿಂದ ತಪ್ಪಿಸಿಕೊಳ್ಳುವುದು ಸಾಧ್ಯ.

ಇತ್ತೀಚಿನ ಅಧ್ಯಯನದ ಪ್ರಕಾರ, ರಕ್ತದ ಗುಂಪು ಸಹ ಕ್ಯಾನ್ಸರ್ ಅಪಾಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗಿದೆ.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ರಕ್ತದ ಗುಂಪು ಮತ್ತು ಕ್ಯಾನ್ಸರ್ (Cancer) ಅಪಾಯದ ಸಂಪರ್ಕ :

ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ನಮ್ಮ ದೇಹದ ರಕ್ತದ ಪ್ರಕಾರವು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

2017ರಲ್ಲಿ ‘PLOS One’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘B’ ರಕ್ತದ ಗುಂಪು ಹೊಂದಿರುವವರಿಗೆ ಇತರ ರಕ್ತದ ಗುಂಪಿನವರಿಗಿಂತ ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆ ಎಂದು ತಿಳಿಸಿದೆ. ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್ (Cancer) ಮತ್ತು ಮೂತ್ರಕೋಶ ಕ್ಯಾನ್ಸರ್ ಅಪಾಯ ಕಡಿಮೆ ಎನ್ನಲಾಗಿದೆ.

ಆದರೆ, ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಇನ್ನೊಂದು ಅಧ್ಯಯನವು ಬೇರೆ ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ, ‘O’ ಹೊರತುಪಡಿಸಿ (A, B, AB) ರಕ್ತದ ಗುಂಪು ಹೊಂದಿರುವವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ (Pancreatic Cancer) ಅಪಾಯಕ್ಕೆ ಹೆಚ್ಚು ಒಳಗಾಗಬಹುದು.

Home
ಅಪಾಯದ ಮಟ್ಟಗಳು ಹೇಗೆ?

ಅಧ್ಯಯನದ ಪ್ರಕಾರ,

  • A ಬ್ಲಡ್ ಗ್ರೂಪ್ ಹೊಂದಿರುವವರು – 32% ಹೆಚ್ಚಿನ ಅಪಾಯ,
  • AB ಬ್ಲಡ್ ಗ್ರೂಪ್ ಹೊಂದಿರುವವರು – 51% ಹೆಚ್ಚಿನ ಅಪಾಯ,
  • B ಬ್ಲಡ್ ಗ್ರೂಪ್ ಹೊಂದಿರುವವರು – 72% ಹೆಚ್ಚಿನ ಅಪಾಯಕ್ಕೆ ಒಳಪಟ್ಟಿದ್ದಾರೆ.

‘O’ ರಕ್ತದ ಗುಂಪಿನವರಿಗಿಂತ ಇತರ ಬ್ಲಡ್ ಗ್ರೂಪ್ ಹೊಂದಿರುವವರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಆದರೆ, ಇದು ಒಂದೇ ಕಾರಣವಲ್ಲ — ಆನುವಂಶಿಕತೆ, ಆಹಾರ ಪದ್ಧತಿ ಮತ್ತು ಪರಿಸರದ ಅಂಶಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.

ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂದರೇನು?

ಮೇದೋಜ್ಜೀರಕ ಗ್ರಂಥಿ (Pancreas) ಹೊಟ್ಟೆಯ ಕೆಳಭಾಗದಲ್ಲಿ ಇರುವ ಒಂದು ಅಂಗ. ಇದು ಆಹಾರ ಜೀರ್ಣಿಸಲು ಅಗತ್ಯವಾದ ಎನ್ಜೈಮ್‌ಗಳು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

ಈ ಗ್ರಂಥಿಯ ಜೀವಕೋಶಗಳು ನಿಯಂತ್ರಣ ತಪ್ಪಿ ಬೆಳೆಯಲು ಆರಂಭಿಸಿದಾಗ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಉಂಟಾಗುತ್ತದೆ. ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ತಡವಾಗಿ ಪತ್ತೆಹಚ್ಚಲಾಗುತ್ತದೆ, ಆದ್ದರಿಂದ ಚಿಕಿತ್ಸೆ ಕಷ್ಟಕರವಾಗುತ್ತದೆ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಲಕ್ಷಣಗಳು :
  • ಹೊಟ್ಟೆ ನೋವು (ಬೆನ್ನಿಗೆ ಹರಿಯುವಂತೆ).
  • ಅತಿಯಾದ ತೂಕ ಇಳಿಕೆ ಅಥವಾ ಹಸಿವಿನ ನಷ್ಟ.
  • ಕಾಮಾಲೆ (ಚರ್ಮ ಮತ್ತು ಕಣ್ಣಿನ ಹಳದಿ ಬಣ್ಣ).
  • ಕಪ್ಪು ಮೂತ್ರ ಮತ್ತು ಬಿಳಿ ಮಲ.
  • ಚರ್ಮ ತುರಿಕೆ ಮತ್ತು ಆಲಸ್ಯ.
  • ಹೊಸ ಮಧುಮೇಹ ಲಕ್ಷಣಗಳು ಅಥವಾ ಹದಗೆಡುವ ಶುಗರ್ ಲೆವೆಲ್‌ಗಳು.

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಅತಿಮುಖ್ಯ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ರಕ್ತದ ಗುಂಪುಗಳ ಪಟ್ಟಿ :

ರಕ್ತವನ್ನು ವೈದ್ಯಕೀಯವಾಗಿ ನಾಲ್ಕು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲಾಗಿದೆ: A, B, AB ಮತ್ತು O, ಹಾಗೂ ಪ್ರತಿಯೊಂದಕ್ಕೂ RhD Positive / RhD Negative ಎಂಬ ಉಪವರ್ಗಗಳಿವೆ. ಒಟ್ಟಾರೆ ಎಂಟು ವಿಧದ ರಕ್ತದ ಗುಂಪುಗಳು ಇವೆ. ವ್ಯಕ್ತಿಯ ರಕ್ತದ ಗುಂಪು ಪೋಷಕರಿಂದ ಆನುವಂಶಿಕವಾಗಿ ದೊರಕುತ್ತದೆ.

ತಜ್ಞರ ಸಲಹೆ :

ರಕ್ತದ ಗುಂಪು ಒಂದು ಸೂಚಕ ಅಂಶ ಮಾತ್ರ. ಇದರ ಮೇಲೆ ಅತಿಯಾಗಿ ಭಯಪಡುವ ಅಗತ್ಯವಿಲ್ಲ.
ನಿತ್ಯ ವ್ಯಾಯಾಮ, ಆರೋಗ್ಯಕರ ಆಹಾರ, ತಂಬಾಕು ಮತ್ತು ಮದ್ಯದಿಂದ ದೂರ, ಹಾಗೂ ನಿಯಮಿತ ವೈದ್ಯಕೀಯ ತಪಾಸಣೆ. — ಇವುಗಳು ಯಾವುದೇ ಕ್ಯಾನ್ಸರ್‌ (Cancer) ನ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತವೆ.


Disclaimer : ಈ ಲೇಖನವು ವಿವಿಧ ಆರೋಗ್ಯ ಸಂಸ್ಥೆಗಳ ಅಧ್ಯಯನಗಳು ಮತ್ತು ವಿಶ್ವಾಸಾರ್ಹ ವೈದ್ಯಕೀಯ ವರದಿಗಳನ್ನು ಆಧರಿಸಿದೆ. ಇದು ಸಾಮಾನ್ಯ ಮಾಹಿತಿ ನೀಡುವುದಕ್ಕಾಗಿ ಮಾತ್ರ. ವೈದ್ಯಕೀಯ ಸಲಹೆಗಾಗಿ ಸದಾ ತಜ್ಞರನ್ನು ಸಂಪರ್ಕಿಸಿ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments