Tuesday, February 4, 2025
HomeCrime Newsಮಹಾಕುಂಭಮೇಳದಿಂದ ವಾಪಸ್ ಬರುವಾಗ ರಸ್ತೆ ಅ*ಪಘಾ*ತ : ಕರ್ನಾಟಕದ ಇಬ್ಬರು ಯುವಕರ ಸಾ*ವು.!
spot_img
spot_img
spot_img
spot_img

ಮಹಾಕುಂಭಮೇಳದಿಂದ ವಾಪಸ್ ಬರುವಾಗ ರಸ್ತೆ ಅ*ಪಘಾ*ತ : ಕರ್ನಾಟಕದ ಇಬ್ಬರು ಯುವಕರ ಸಾ*ವು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ವಾಪಸ್ ಊರಿಗೆ ಬರುವಾಗ ರಸ್ತೆ ಅಪಘಾತ (road accident) ದಲ್ಲಿ ಕರ್ನಾಟಕದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಮೃತ ಯುವಕರಲ್ಲಿ ಓರ್ವ ಮೈಸೂರು (Mysuru) ಜಿಲ್ಲೆಯವರು ಹಾಗೂ ಮತ್ತೋರ್ವರು ಮಂಡ್ಯ (Mandya) ದ ಯುವಕ ಎಂದು ತಿಳಿದು ಬಂದಿದೆ.

ಇದನ್ನು ಓದಿ : 10 ಕೋಟಿಗೂ ಹೆಚ್ಚು ಭಕ್ತರು ಮಹಾಕುಂಭ ಮೇಳದಲ್ಲಿ ಭಾಗಿ ; ಉಂಟಾದ ಕಾಲ್ತುಳಿತ.!

ಪ್ರಯಾಗ್‌ರಾಜ್‌ನ ಕುಂಭಮೇಳ ಮುಗಿಸಿಕೊಂಡು ಕಾಶಿ (Kashi) ವಿಶ್ವನಾಥನ ದರ್ಶನಕ್ಕೆ ಬರುವಾಗ ಮಿರ್ಜಾಪುರ (Sarjapur) ದ ಬಳಿ ಲಾರಿಗೆ ರಾಮಕೃಷ್ಣ ಶರ್ಮ ಹಾಗೂ ಅರುಣ್ ಶಾಸ್ತ್ರಿ ಅವರಿದ್ದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಇಬ್ಬರು ಯುವಕರ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಆ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ದುರ್ದೈವಶಾತ್ (unfortunately) ಚಿಕಿತ್ಸೆ ಫಲಕಾರಿಯಾಗದೆ ರಾಮಕೃಷ್ಣ ಶರ್ಮ ಹಾಗೂ ಅರುಣ್ ಶಾಸ್ತ್ರಿ ಮಂಗಳವಾರ ಬೆಳಿಗ್ಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ಇದನ್ನು ಓದಿ : ಪ್ರಯಾಗ್‌ರಾಜ್ : ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಾಲಕಿಯರು ಸೇರಿ ನಾಲ್ಕು ಮಹಿಳೆಯರಿಗೆ ಗಾಯ.!

ಮೃತ ರಾಮಕೃಷ್ಣ ಶರ್ಮಾ (Ramakrishna Sharma) ಅವರು ಕೆ.ಆರ್‌.ಎಸ್‌ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಹಾಗಯೇ ಅರುಣ್‌ ಶಾಸ್ತ್ರೀ ( Arun Shastri) ಅವರು ಕೂಡ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು.

ಇವರಿಬ್ಬರಿಗೂ ಮದುವೆ ಆಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!