Friday, October 18, 2024
spot_img
spot_img
spot_img
spot_img
spot_img
spot_img
spot_img

ರೇವ್ ಪಾರ್ಟಿ ಪ್ರಕರಣ ; ಕರ್ತವ್ಯ ಲೋಪದ ಮೇಲೆ PSI ಸಸ್ಪೆಂಡ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಹೊರವಲಯದ ಕೆಆರ್​ಎಸ್​ ಹಿನ್ನೀರಿನಲ್ಲಿ ನೂರಕ್ಕೂ ಅಧಿಕ ಯುವತಿ- ಯುವತಿಯರಿಂದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಮೈಸೂರು ತಾಲ್ಲೂಕಿನ ಇಲವಾಲ ಠಾಣೆ PSI ಮಂಜುನಾಥ ನಾಯಕ್​ರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ : ರಾತ್ರಿ ವೇಳೆ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಅಪಾಯದ ಗಂಟೆ ಬಾರಿಸಿದಂತೆ.!

ಇಲವಾಲ ಠಾಣೆ ವ್ಯಾಪ್ತಿಯಲ್ಲಿ ಸೆ. 28ರಂದು ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಪಾರ್ಟಿ ಮೇಲೆ ಇಲವಾಲ ಠಾಣೆ PSI ಮಂಜುನಾಥ ನಾಯಕ್ ದಾಳಿ ಮಾಡಿದ್ದರು.

ಈ ರೇವ್ ಪಾರ್ಟಿಯಲ್ಲಿ ಯುವಕರು, ಯುವತಿಯರು ಪಾಲ್ಗೊಂಡಿದ್ದರು. ದಾಳಿ ವೇಳೆ ಪಿಎಸ್​​ಐ ಮೇಲೆ ಹಲ್ಲೆ ನಡೆಸಿ ಯುವಕರು ಎಸ್ಕೇಪ್ ಆಗಿದ್ದರು.

ಇದನ್ನು ಓದಿ : ಕಳ್ಳನನ್ನು ಬೆನ್ನುಟ್ಟುತ್ತಿದ್ದ police ಕಾರು ಅಪಘಾತ; ಮೂವರು ಪೊಲೀಸರಿಗೆ ಗಂಭೀರ ಗಾಯ.!

ನಂತರ ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈಗ ದಿಢೀರ್ ಆಗಿ ಅವರನ್ನು ಅಮಾನತು ಮಾಡಿರುವುದು ಸಾರ್ವಜನಿಕರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಪಿಎಸ್ಐ ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾದ ನಂತರ ಎಎಸ್​ಪಿ ನಾಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಯುವಕರು, ಯುವತಿಯರನ್ನು ವಶಕ್ಕೆ ಪಡೆದು 64 ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು.

ಇದನ್ನು ಓದಿ : Video : ಬೃಹದಾಕಾರದ ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡೆಯಾಟ ಆಡಿದ ಪುಟ್ಟ ಮಕ್ಕಳು.!

ಪಾರ್ಟಿ ಆಯೋಜಿಸಿದ್ದ ಐವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ಉಳಿದವರಿಗೆ ನೋಟಿಸ್ ನೀಡಲಾಗಿತ್ತು.

ಸದ್ಯ ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಮಾದಕ ದ್ರವ್ಯ ಸಿಕ್ಕಿಲ್ಲ. ವಿವಿಧ ಮಾದರಿಯ ಬಿಯರ್ ಬಾಟಲ್​ಗಳು, ಮದ್ಯ, ಸಿಗರೇಟ್ ಪತ್ತೆಯಾಗಿವೆ. ಕೆಲವರು ಕಾರುಗಳನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಶಕ್ಕೆ ಪಡೆದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img