ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ಠಾಣೆಯ ಪೊಲೀಸರು ಕಳ್ಳನನ್ನ ಟ್ರೇಸ್ ಮಾಡುವಾಗ ಅವರ ಕಾರು ಅಪಘಾತಕ್ಕೀಡಾಗಿ, ಮೂವರು ಪೊಲೀಸರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮಣ್ಣೂರು ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಸಿನಿಮೀಯ ಶೈಲಿಯಲ್ಲಿ ಕಾರು ಸುತ್ತುವರೆದು 2.5 KG ತೂಕದ ಚಿನ್ನಾಭರಣ ದರೋಡೆ ; ವಿಡಿಯೋ Viral.!
ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್‌ಗೆ ಗಂಭೀರ ಗಾಯವಾಗಿದೆ.
ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಪೊಲೀಸ್ ಎಂದು ಪರಿಚಯಿಸಿಕೊಂಡ ಕಳ್ಳ, ನಗರದಲ್ಲಿ ಸರಗಳ್ಳತನ ಹೆಚ್ಚಾಗಿದೆ. ಮಾಂಗಲ್ಯ ಸರ ಜೋಪಾನವಾಗಿ ತೆಗೆದುಕೊಂಡು ಹೋಗಿ ಎಂದು ಕವರ್ ಕೊಟ್ಟಿದ್ದಾನೆ.
ಇದನ್ನು ಓದಿ : Video : ವಿಮಾನದಲ್ಲಿ ಮತ್ತೊಬ್ಬನ ಜೊತೆ ಸಿಕ್ಕಿಬಿದ್ದ ಯುವತಿ; ಮುಂದೆನಾಯ್ತು ನೋಡಿ.
ಖದೀಮ ಕೊಟ್ಟಿದ್ದ ಕವರ್‌ನಲ್ಲಿ ಮಹಿಳೆ ಮಾಂಗಲ್ಯ ಸರ ಹಾಕಿದ್ದಾಳೆ. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಕವರ್‌ನಲ್ಲಿ ಚಿನ್ನದ ಸರ ತೆಗೆದು ಅದರಲ್ಲಿ ಕಲ್ಲು ಹಾಕಿ ಕೊಟ್ಟಿದ್ದಾನೆ. ಬಳಿಕ 70 ಗ್ರಾಂ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದ. ಮಹಿಳೆ ಮನೆಗೆ ಹೋಗಿ ನೋಡಿದಾಗ ಕವರ್‌ನಲ್ಲಿ ಚಿನ್ನದ ಮಾಂಗಲ್ಯ ಸರದ ಬದಲು ಕಲ್ಲು ಕಂಡಿದೆ. ಇದರಿಂದ ಶಾಕ್ ಆದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸರ ಕದ್ದ ಬಳಿಕ ಕಳ್ಳ ಸೀದಾ ಆಂಧ್ರ ಪ್ರದೇಶಕ್ಕೆ ಪರಾರಿಯಾಗಿರುವುದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳ್ಳನ ಜಾಡು ಹಿಡಿದು ಹೊರಟ ಮಧುಗಿರಿ ಪೊಲೀಸರು ಕಳ್ಳನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ, ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ಇದನ್ನು ಓದಿ : Health : ಡಿಪ್ರೆಶನ್ನಿಂದ ಹೊರ ಬರಲು ಇಲ್ಲಿದೆ ಪವರ್ ಫುಲ್ ಟಿಪ್ಸ್.!
ಅಪಘಾತದ ಪರಿಣಾಮ ಪೊಲೀಸ್ ಸಿಬ್ಬಂದಿಯ ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಂಧ್ರಪ್ರದೇಶದ ಧರ್ಮವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ