ಜನಸ್ಪಂದನ ನ್ಯೂಸ್, ಡೆಸ್ಕ್ : ದೈತ್ಯ ಹಾವುಗಳು ಮನುಷ್ಯರನ್ನೇ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಬ್ಬಾವು ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ.
ಇದನ್ನು ಓದಿ : ರಾಜ್ಯದ ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ; ಶ್ರೀಗಳಿಂದ ಸ್ಪಷ್ಟೀಕರಣ.!
ಆದರೆ ಸೋಶಿಯಲ್ ಮೀಡಿಯಾದಲ್ಲಿ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಬೃಹದಾಕಾರದ ಹೆಬ್ಬಾವಿನ ಮೇಲೆ ಪುಟ್ಟ ಮಕ್ಕಳಿಬ್ಬರು ಕುಳಿತು ಜಾರುಬಂಡಿ ಆಡುತ್ತಾ ಅದರ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.
ವಿಡಿಯೋ ನೋಡಿದ ನೆಟ್ಟಿಗರು ಮಕ್ಕಳಿಬ್ಬರು ಧೈರ್ಯ ಕಂಡು ಬೆಚ್ಚಿಬಿದ್ದಿದ್ದಾರೆ.
ವೈರಲ್ ವಿಡಿಯೋದಲ್ಲಿ ಹೆಬ್ಬಾವು ಮುಂದೆ ಸಾಗುತ್ತಿರುವುದನ್ನು ಕಾಣಬಹುದು. ಅದರ ಮೇಲೆ ಮಕ್ಕಳು ಕುಳಿತುಕೊಂಡು ಜಾರುತ್ತಿದ್ದಾರೆ. ಆ ಬೃಹದಾಕಾರದ ಹೆಬ್ಬಾವು ಮಾತ್ರ ಸುಮ್ಮನೆ ಇದೆ.
@BapuDaLadla ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!
ಈ ವಿಡಿಯೋ ಇಂಡೋನೇಷ್ಯಾದಾಗಿದ್ದು, ಇದು ಸಾಕಷ್ಟು ಹಳೆಯ ವಿಡಿಯೋ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹೆಬ್ಬಾವು ‘ರೆಟಿಕ್ಯುಲೇಟೆಡ್ ಪೈಥಾನ್’ ಆಗಿದ್ದು, ಇದು ವಿಶ್ವದ ಎರಡನೇ ಅತಿ ದೊಡ್ಡ ಹಾವು. ಈ ಹಾವಿಗೆ ಮನುಷ್ಯನನ್ನು ಜೀವಂತವಾಗಿ ನುಂಗುವ ಶಕ್ತಿ ಇದೆಯಂತೆ.
ये अनाकोंडा सोच रहा होगा कहा फस गया यार 😂😂😝 pic.twitter.com/YIoJyX9aEG
— लाडला बापू का 🙏 (@BapuDaLadla) September 20, 2024