Thursday, September 19, 2024
spot_img
spot_img
spot_img
spot_img
spot_img
spot_img
spot_img

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ : ಕೊನೆಯ ದಿನಾಂಕ ಯಾವತ್ತು.? ಡೈರೆಕ್ಟ್ link ಇಲ್ಲಿದೆ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಆಹಾರ ಇಲಾಖೆಯು ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ/ತಿದ್ದುಪಡಿಗೆ ಆಗಸ್ಟ್ 10 ರವರೆಗೆ ಅವಕಾಶ ನೀಡಲಾಗಿದೆ.

ಆಗಸ್ಟ್ 10ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!

ಏನೆಲ್ಲಾ ತಿದ್ದುಪಡಿ ಮಾಡಬಹುದು :
ವಿಳಾಸ ಬದಲಾವಣೆ
ಹೊಸ ಸದಸ್ಯರ ಸೇರ್ಪಡೆ
ಕುಟುಂಬ ಸದಸ್ಯರ ಹೆಸರು ತಿದ್ದುಪಡಿ
ಮನೆ ಯಜಮಾನರ ಬದಲಾವಣೆ
ಫೋಟೋ ಮತ್ತು ಬಯೋಮೆಟ್ರಿಲ್‌ ಅಪ್ಡೇಟ್‌
ಮೃತರ ಅಥವಾ ಬೇರೆ ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು.

ತಿದ್ದುಪಡಿ ಎಲ್ಲಿ ಮಾಡಿಸಬೇಕು.?
ತಿದ್ದುಪಡಿ ಮಾಡಿಕೊಳ್ಳುವವರು ಹತ್ತಿರವಿರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್‌ಲೈನ್ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಯಾವುದೇ ಕೈಬರಹ ಹಾಗೂ ಮುದ್ರಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್‌ಆರ್‌ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.

ಇದನ್ನು ಓದಿ : ರಾತ್ರಿ ಪಕ್ಕದಲ್ಲಿಯೇ Mobile ಇಟ್ಟುಕೊಂಡು ಮಲಗ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಇನ್ನು ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು.

ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳು :
ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ, ಮಗುವಿನ ಜನನ ಪ್ರಮಾಣಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾ‌ರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ಕೊಡ ಬೇಕಾಗುತ್ತದೆ.

ಹೊಸ ಚೀಟಿ ಈ ರೀತಿ ಪಡೆಯಬಹುದು
ಅಧಿಕೃತ ವೆಬ್ ಸೈಟ್ https://ahara.kar.nic.in/homeಗೆ ಭೇಟಿ ನೀಡಿ

ಇದನ್ನು ಓದಿ : Ration card ರದ್ದಾಗಿದೆಯೇ.? ಮತ್ತೆ ಪಡೆಯುವುದು ಹೇಗೆ.?

ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಬೇಕು.

ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಬಳಿಕ ನಂತರ ಸೂಚಿಸಲಾಗುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿರಿ.

ಇದನ್ನು ಓದಿ : Lokayukta trap : ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್‌ ಲೋಕಾಯುಕ್ತ ಬಲೆಗೆ.!

ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ https://ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img