ಶುಕ್ರವಾರ, ಜನವರಿ 2, 2026

Janaspandhan News

HomeGeneral Newsಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.
spot_img
spot_img
spot_img

ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಎಂಬುದು ಸಂತಸದ ಕಾರ್ಯಕ್ರಮವಷ್ಟೇ ಅಲ್ಲಾ, ಅದು ಮನೆ ಮಂದಿಗೆ ದೊಡ್ಡ ಜವಾಬ್ದಾರಿಯ ಕಾರ್ಯಕ್ರಮವೂ ಹೌದು. ಅತಿಥಿ ನಿರ್ವಹಣೆ, ಅಡುಗೆ, ಅಲಂಕರಣ, ಆಹ್ವಾನ ಸೇರದಂತೆ ಮದುವೆಯ ಸಿದ್ಧತೆಗಳೆಂದರೆ ಕಷ್ಟಪಟ್ಟು ಮಾಡಬೇಕಾದ ಕೆಲಸ. ಎಲ್ಲವನ್ನೂ ಸರಿಯಾಗಿ ನಡೆಸಿದರೂ, ಅಂತಿಮ ಕ್ಷಣದಲ್ಲಿ ಈರುಳ್ಳಿ ಕಡಿಮೆ, ಮಜ್ಜಿಗೆ ಹೆಚ್ಚು, ಅಡುಗೆ ಒಗ್ಗರಣೆ ತಡ ಅಥವಾ ಅತಿಥಿಗಳು ನಿರೀಕ್ಷೆಗಿಂತ ಹೆಚ್ಚು ಬರುವುದು ಹೀಗೆ ಮದುವೆ ಮನೆಯಲ್ಲಿ ಸಣ್ಣಪುಟ್ಟ ತೊಂದರೆಗಳು ಸಾಮಾನ್ಯ.

ಆದರೆ ಬಿಹಾರದಲ್ಲಿ ನಡೆದ ಘಟನೆ ಮಾತ್ರ ಸಾಮಾನ್ಯವಲ್ಲ. ಅಲ್ಲಿ “ರಸಗುಲ್ಲಾ (Rsagulla)” ಕಡಿಮೆ ಆಯ್ತು ಎನ್ನುವ ಒಂದು ಸಣ್ಣ ಕಾರಣಕ್ಕೆ ಮದುವೆ ಮನೆಯಲ್ಲಿ ಭಾರೀ ಗಲಭೆ ಉಂಟಾಗಿ, ಮದುವೆ ಸ್ಥಳವೇ ರಣರಂಗದಂತಾಗಿತ್ತು.

ಇದನ್ನು ಓದಿ : “ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ರಸಗುಲ್ಲಾ (Rasgulla) ಮುಗಿದ ಕಾರಣಕ್ಕೆ ಮದುವೆ ಮನೆಯಲ್ಲಿ ಗಲಾಟೆ :

ಬುದ್ಧಗಯಾದ ಮದುವೆ ಹಾಲ್‌ನಲ್ಲಿ ಅತಿಥಿಗಳಿಗೆ ನೀಡಲಾಗುತ್ತಿದ್ದ ಸಿಹಿತಿನಿಸಿನ (Rasgulla) ಪ್ರಮಾಣ ಕಡಿಮೆ ಆಯಿತು. ಇದಕ್ಕಾಗಿ ವರಪಕ್ಷದ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮದುವೆ ಮನೆಯಲ್ಲಿ ಕುರ್ಚಿಗಳನ್ನು ಎತ್ತಿ ಪರಸ್ಪರ ಹೊಡೆಯಲು ಪ್ರಾರಂಭಿಸಿದರು. ಅಲ್ಲದೆ ಅಡುಗೆ ಸಿಬ್ಬಂದಿಯ ಮೇಲೂ ಹಲ್ಲೆ ನಡೆದಿದ್ದು, ಮದುವೆ ಸ್ಥಳದಲ್ಲಿ ಭಾರೀ ಗಲಾಟೆ ನಡೆಯಿತು.

ಮದುವೆ ಹಾಲ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಈ ಗಲಾಟೆಯ ದೃಶ್ಯಗಳು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ. ವೈರಲ್ ದೃಶ್ಯಗಳಲ್ಲಿ ಯುವಕರು ಕೈಯಲ್ಲಿ ಕುರ್ಚಿಗಳನ್ನು ಹಿಡಿದು ಆಹಾರ ಬಡಿಸುತ್ತಿದ್ದವರ ಮೇಲೆ ದಾಳಿ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕೆಲವು ಮಂದಿ ಅಡುಗೆ ಪಾತ್ರೆಗಳನ್ನೇ ಎತ್ತಿ ಪರಸ್ಪರ ಹೊಡೆಯುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಗಲಾಟೆಯಿಂದ ಮದುವೇ ನಿಂತುಹೋದ ವರದಿ :

ಕೆಲ ವರದಿಗಳ ಪ್ರಕಾರ, ರಸಗುಲ್ಲಾ (Rasgulla) ವಿಷಯದಿಂದ ಆರಂಭವಾದ ಗಲಾಟೆ ದೊಡ್ಡ ಜಗಳ ಉಂಟಾಗಿ ಮದುವೆ ಕಾರ್ಯಕ್ರಮವೇ ತಾತ್ಕಾಲಿಕವಾಗಿ ನಿಲ್ಲಬೇಕಾಯಿತು ಎನ್ನಲಾಗಿದೆ. ಎರಡೂ ಸಮುದಾಯದವರು ಪರಸ್ಪರ ಕೈಯಿಕ್ಕಿ ಹೊಡೆದಾಡಿರುವ ಮಾಹಿತಿ ಹೊರಬಿದ್ದಿದೆ. ತಳ್ಳಾಟ–ನೂಕಾಟ ಹಾಗೂ ಕುರ್ಚಿಗಳಿಂದ ಹೊಡೆದಾಟ ಮದುವೆ ಹಾಲ್‌ನಲ್ಲಿ ಗೊಂದಲ ಸೃಷ್ಟಿಸಿತು.

ಈ ಘಟನೆ ನವೆಂಬರ್ 29ರಂದು ನಡೆದಿದೆ ಎಂದು ವರದಿಯಾಗಿದೆ. ಆದರೆ ಈವರೆಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ, ಬಂಧನವೂ ಆಗಿಲ್ಲ.

ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ವಿಡಿಯೋ ಹೊರಬಿದ್ದ ನಂತರ ನೆಟ್ಟಿಗರು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ. “ರಸಗುಲ್ಲಾ (Rasgulla) ಮುಗಿದ ಕಾರಣಕ್ಕೆ ಮದುವೆ ಮುರಿದು ಹೋಗುತ್ತದೆ ಎನ್ನುವುದೇ ವಿಚಿತ್ರ!”. “ನನ್ನ ದೇಶ ನಿತ್ಯವೂ ಹೊಸ ರೀತಿಯಲ್ಲಿ ಅಚ್ಚರಿ ಕೊಡುತ್ತದೆ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ರಸಗುಲ್ಲಾ (Rasgulla) ದ ಈ ಘಟನೆ, ಮದುವೆ ಮನೆಗಳಲ್ಲಿ ಅಡುಗೆ ನಿರ್ವಹಣೆ ಹೇಗೆ ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಬದಲಾಗಬಹುದು ಎಂಬುದನ್ನೇ ಮತ್ತೊಮ್ಮೆ ದೃಢಪಡಿಸಿದೆ.

ರಸಗುಲ್ಲಾ (Rasgulla) ವಿಡಿಯೋ :


“ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.

divider car fire lokayukta inspector death

ಜನಸ್ಪಂದನ ನ್ಯೂಸ್‌, ಧಾರವಾಡ : ಧಾರವಾಡದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲೋಕಾಯುಕ್ತ ಇಲಾಖೆಯ ಇನ್ಸ್‌ಪೆಕ್ಟರ್‌ (Inspector) ರಾದ ಪಂಚಾಕ್ಷರಿ ಸಾಲಿಮಠ ದುರ್ಘಟನೆಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮೃತಪಟ್ಟ ಘಟನೆ ಇನ್ನೂ ಜನರ ಮನಸಿನಲ್ಲಿ ಮಸುಕಾಗುವುದಕ್ಕೂ ಮುನ್ನ, ಮತ್ತೊಂದು ಗಂಭೀರ ಕಾರು ದುರಂತ ರಾಜ್ಯವನ್ನು ಕಂಗೆಡಿಸಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಕಾರು ಅಪಘಾತ :

ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಬುಧವಾರ ಸಂಜೆ ಗದಗ ಕಡೆಗೆ i20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ‌

ಇದನ್ನು ಓದಿ : ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ಅಣ್ಣಿಗೇರಿ ಪಟ್ಟಣ ಹೊರವಲಯದ ಭದ್ರಾಪುರದ ಬಳಿ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ (Divider) ಭೀಕರವಾಗಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಅತಿ ವೇಗವಾಗಿ ವ್ಯಾಪಿಸಿದ್ದು, ಕಾರ್ ಲಾಕ್ ತೆಗೆಯಲು ಸಾಧ್ಯವಾಗಿಲ್ಲ ಕಾರಣ Inspector ಅವರು ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ.

ಅಪಘಾತ ಸಂಜೆ 7.30ರ ಸಮಯದಲ್ಲಿ ನಡೆದಿದೆ. ಆಗ Inspector ಪಂಚಾಕ್ಷರಿ ಸಾಲಿಮಠ ತಮ್ಮ ವಾಹನವನ್ನು ಸ್ವತಃ ಚಾಲನೆ ಮಾಡುತ್ತಿದ್ದರು. ಕುಟುಂಬವನ್ನು ಭೇಟಿಯಾಗಲು ಗದಗಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದಂತೆ ಮೂಲಗಳು ತಿಳಿಸಿವೆ.

ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

“ಡಿಕ್ಕಿಯ ನಂತರ ಪೆಟ್ರೋಲ್ ಸೋರಿಕೆ ಆಗಿ ಸ್ಪಾರ್ಕ್ ಉಂಟಾಗಿ ಬೆಂಕಿ ಹಬ್ಬಿದ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.”

ಘಟನಾ ಸ್ಥಳಕ್ಕೆ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಒಳಗಿದ್ದ ಪಂಚಾಕ್ಷರಿ ಸಾಲಿಮಠ ಸಜೀವವಾಗಿ ದಹನಗೊಂಡಿರುವುದು ದೃಢಪಟ್ಟಿದೆ.

Inspector ಮೃತದೇಹ ಗುರುತಿಸಲು ಆರಂಭದಲ್ಲಿ ಕಷ್ಟ ಎದುರಾಯಿತು. ನಂತರ ಅವರ ಕೈಯಲ್ಲಿದ್ದ ಬ್ರೆಸ್ಲೆಟ್ ಆಧರಿಸಿ ಕುಟುಂಬದ ಸದಸ್ಯರು ಗುರುತು ಪತ್ತೆಹಚ್ಚಿದರು. ಇದಾದ ಬಳಿಕ ಪೊಲೀಸರು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.

ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : “ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ಈ ಅಪಘಾತದಿಂದ ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಐಎಎಸ್ ಮಹಾಂತೇಶ್ ಬೀಳಗಿ ನಿಧನದ ಸುದ್ದಿ ಮಾಸುವ ಮುನ್ನೇ ಮತ್ತೊಂದು Inspector ಓರ್ವರ ಜೀವ ಹಾನಿ ರಾಜ್ಯದ ಕಾನೂನು ಜಾಗೃತಿ ವಲಯದಲ್ಲಿ ಆತಂಕ ಮೂಡಿಸಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments