ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಲ್ ಮೇಲೆ ಹೊರ ಬಂದ ಆರೋಪಿನೋರ್ವ ಅತ್ಯಾಚಾರ (Rape) ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಅತ್ಯಾಚಾರ (Rape) ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಗುಂಡು ಹಾರಿಸಿದ ಆರೋಪದ ಮೇಲೆ ಪ್ರಕರಣದ ಮುಖ್ಯ ಆರೋಪಿ ಅಬುಜೈರ್ ಸಫಿ (30) ಮತ್ತು ಆತನ ಸಹಚರ ಅಮನ್ ಸುಖ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
Rape ಸಂತ್ರಸ್ತೆ ಮಹಿಳೆಯ ಸ್ಥಿತಿ ಸ್ಥಿರ :
ಸಲೂನ್‌ವೊಂದರಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ಎದೆಗೆ ಗುಂಡು ತಗುಲಿದ್ದು, ಅವರನ್ನು ತಕ್ಷಣವೇ ಪಿಸಿಆರ್ ವ್ಯಾನ್ ಮೂಲಕ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ತನಿಖೆ :
ಸಂತ್ರಸ್ತೆ ಮಹಿಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಪ್ಪು ಬಣ್ಣದ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಮಹಿಳೆ ಮೇಲೆ ಗುಂಡು ಹಾರಿಸಿದರು. ಈ ವೇಳೆ ಆಟೋ ಚಾಲಕ ರಂಜೀತ್ ಯಾದವ್ ತನ್ನ ಮಹಿಳಾ ಪ್ರಯಾಣಿಕರಿಗೆ ಗುಂಡು ತಗುಲಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಪೊಲೀಸರ ಪ್ರಕಾರ, ಅತ್ಯಾಚಾರ (Rape) ಪ್ರಕರಣದಲ್ಲಿ ಬಂಧಿತನಾಗಿದ್ದ ಸಫಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಸಂತ್ರಸ್ತೆ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದ. ಆದರೆ, ಆಕೆ (Rape Victim) ಯಾವುದೇ ಪ್ರತಿಕ್ರಿಯೆ ನೀಡದೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಆತ ಕೋಪಗೊಂಡು ಈ ಕೃತ್ಯವೆಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯ ಮಾಹಿತಿ.
ಪೊಲೀಸರ ಕ್ರಮ ಮತ್ತು ಪ್ರಕರಣ ದಾಖಲೆ :
ಮಹಿಳೆಯ ದೂರು ಆಧಾರದಲ್ಲಿ, ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 109(1) (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧಕ್ಕೆ ಬಳಸಲಾದ ಮೋಟಾರ್‌ಸೈಕಲ್ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಹೆಚ್ಚಿನ ತನಿಖೆ ಮುಂದುವರಿದಿದೆ :
“ಆರೋಪಿಗಳ ಹಿನ್ನೆಲೆಯ ಪರಿಶೀಲನೆ ಮತ್ತು ಅಪರಾಧದಲ್ಲಿ ಇನ್ನಷ್ಟು ಜನರ ಭಾಗವಹಿಸುವಿಕೆ ಕುರಿತು ತನಿಖೆ ನಡೆಯುತ್ತಿದೆ,” ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Accident : ಭೀಕರ ರಸ್ತೆ ಅಪಘಾತ ; ಬೊಲೆರೊ ಕಾರು ಕಾಲುವೆಗೆ ಬಿದ್ದು 11 ಭಕ್ತರ ದುರ್ಮರಣ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾನುವಾರ ಬೆಳಿಗ್ಗೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಇಟಿಯಾಥೋಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ವಾ ಬಹುತಾ ಮಜ್ರಾ ರೆಹ್ರಾ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಖರ್ಗುಪುರದ ಪ್ರಸಿದ್ಧ ಪೃಥ್ವಿನಾಥ್ ದೇವಾಲಯಕ್ಕೆ ನೀರು ಅರ್ಪಿಸಲು ಬೊಲೆರೊ ಕಾರುನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಸರಯು ಕಾಲುವೆಗೆ ಬಿದ್ದ ಪರಿಣಾಮ 11 ಜನ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ (Accident) ದ ಸಮಯದಲ್ಲಿ ಕಾರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಇದ್ದರು. ಮೋತಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಹಗಾಂವ್‌ನಿಂದ ಬಂದಿದ್ದ ಈ ಭಕ್ತರು ಬೊಲೆರೊ ವಾಹನದಲ್ಲಿ ಖರ್ಗುಪುರದ ದೇವಾಲಯಕ್ಕೆ ತೆರಳುತ್ತಿದ್ದರು.
ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
ಕಾರು ಬೆಲ್ವಾ ಬಹುತಾ ಮಜ್ರಾ ರೆಹ್ರಾ ತಲುಪಿದ ವೇಳೆಗೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ಕಾರು ನೇರವಾಗಿ ಸರಯು ಕಾಲುವೆಗೆ ಬಿದ್ದ ಪರಿಣಾಮ ಈ ಅಪಘಾತ (Accident) ಸಂಭವಿಸಿದೆ.
ಕಾರ್ಯಾಚರಣೆಗಿಳಿದ ಸ್ಥಳೀಯರು ಮತ್ತು ಪೊಲೀಸ್ ಇಲಾಖೆ :
ಅಪಘಾತ (Accident) ಕಂಡ ಪ್ರತ್ಯಕ್ಷದರ್ಶಿಗಳು ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮತ್ತು ಇಟಿಯಾಥೋಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ವಾಹನದಿಂದ 11 ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!
ಉಳಿದ ನಾಲ್ವರು ಗಾಯಾಳುಗಳ ಸ್ಥಿತಿ ಗಂಭೀರ :
ಅಪಘಾತ (Accident) ವಾದ ಕಾರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 15 ಜನರಲ್ಲಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟವರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಗಾಯಗೊಂಡವರ ಸ್ಥಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಕುಟುಂಬದವರ ಆಕ್ರಂದನ :
ಈ ದುರ್ಘಟನೆ (Accident) ಯ ಸುದ್ದಿ ಇಡೀ ಗ್ರಾಮದಲ್ಲಿ ಶೋಕದಲ್ಲಿ ಮುಳಗಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಬಂಧುಮಿತ್ರರು ದುಃಖವ್ಯಕ್ತಪಡಿಸಿದ್ದಾರೆ.
ಅಪಘಾತದ (Accident) ವಿಡಿಯೋ :
गोंडा में बहुत ही बड़ा दर्दनाक हादसा,11 लोगों की मौत
दर्शन करने गए लोगों के साथ बड़ा हादसा, बोलेरो के नहर में पलटने से 11 की मौत, अनियंत्रित होकर बोलेरो नहर में पलटी, इटियाथोक थाना क्षेत्र का मामला, बोलेरो में सवार थे 15 लोग। pic.twitter.com/jQciHOZD23— आदित्य तिवारी / Aditya Tiwari (@aditytiwarilive) August 3, 2025
उत्तर प्रदेश : गोंडा जिले में बोलेरो गाड़ी सरयू नहर में गिरी। करीब 11 लोगों की मौत हुई। ये सभी जल चढ़ाने के लिए मंदिर जा रहे थे। pic.twitter.com/9NvfICfZ70
— Sachin Gupta (@SachinGuptaUP) August 3, 2025






