ಶುಕ್ರವಾರ, ಜನವರಿ 2, 2026

Janaspandhan News

HomeGeneral Newsವಿವಾಹಿತ ಮಹಿಳೆಯ ಮನೆಯಲ್ಲಿ PSI : ಸ್ಥಳಕ್ಕಾಗಮಿಸಿದ ಪತ್ನಿ, ಕುಟುಂಬಸ್ಥರು ; ಮುಂದೆನಾಯ್ತು.!
spot_img
spot_img
spot_img

ವಿವಾಹಿತ ಮಹಿಳೆಯ ಮನೆಯಲ್ಲಿ PSI : ಸ್ಥಳಕ್ಕಾಗಮಿಸಿದ ಪತ್ನಿ, ಕುಟುಂಬಸ್ಥರು ; ಮುಂದೆನಾಯ್ತು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿವಾಹಿತ ಮಹಿಳೆಯ ಮನೆಯಲ್ಲಿ ಪಿಎಸ್‌ಐ (PSI) ಇದ್ದ ಸಂದರ್ಭದಲ್ಲಿ ಪಿಎಸ್‌ಐ ಪತ್ನಿ ಹಾಗೂ ಕುಟುಂಬಸ್ಥರು ಅಚಾನಕ್ ಆಗಮಿಸಿದ್ದು, ಆ ನಂತರ ನಡೆದದ್ದು ಮಾತ್ರ ಶಾಕ್‌ಕಿಂಗ್‌ ವಿಚಾರ.!

ಹೌದು, ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಎಸ್ಐ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಅಪಮಾನವಾಗಿರುವ ಘಟನೆಯೊಂದು ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ವಿವಾಹಿತ ಮಹಿಳೆಯ ಮನೆಯಲ್ಲಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿ (PSI) ಸುರೇಶ ಕಂಡುಬಂದಿದ್ದಾರೆ. ಈ ವೇಳೆ ಆತನ ಪತ್ನಿ ಹಾಗು ಪತ್ನಿಯ ಸಂಬಂಧಿಕರು ಆಗಮಿಸಿದ್ದಾರೆ.

ಇದನ್ನು ಓದಿ : LDL : ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆಯೇ.? ಇಲ್ಲಿವೆ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!

ಪತಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ, ಅದು ವಿವಾಹಿತ ಮಹಿಳೆಯ ಮನೆಯಲ್ಲಿ ಇರುವುದನ್ನು ಗಮನಿಸಿದ ಪತ್ನಿ, ಅಧಿಕಾರಿಯ ಕಪಾಳಮೋಕ್ಷ ಮಾಡಿದ್ದಾರೆ. ಕೆಲ ಸಮಯದಿಂದ ಪತಿ-ಪತ್ನಿ ನಡುವೆ ವೈಮನಸ್ಯ ಇದ್ದಿದ್ದು, ಕಳೆದ ಎರಡು ತಿಂಗಳಿನಿಂದ PSI ಸುರೇಶ್ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರು ಆತನನ್ನು ಮದ್ಯ ಸೇವಿಸುತ್ತಿರುವ ಸ್ಥಿತಿಯಲ್ಲಿ ನೋಡಿದ್ದಾರೆ. ಆಗ PSI ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.

ಇದನ್ನು ಓದಿ : Shravan : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನಬಾರದು ಏಕೆ.? ಶಾಸ್ತ್ರ ಮತ್ತು ವಿಜ್ಞಾನ ಏನು ಹೇಳುತ್ತವೆ?

ಸ್ಥಳೀಯರ ಹೇಳಿಕೆಯಂತೆ, PSI ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಎಸ್ಐ ಸುರೇಶ್ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಇದೇ ಸಮಯದಲ್ಲಿ ಮೈಮೇಲಿದ್ದ ಬಟ್ಟೆ ಹರಿದು ಹಾಕಲು ಯತ್ನಿಸಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣ, ಪೊಲೀಸ್ ಸಿಬ್ಬಂದಿಯನ್ನು ಕರೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಘಟನೆ ಸಂಬಂಧವಾಗಿ ಕೆಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ.

ಪಿಎಸ್‌ಐ (PSI) ಥಳಿಸುತ್ತಿರುವ ವಿಡಿಯೋ :

https://twitter.com/i/status/1948297125311467823

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!

AIIMS

ಜನಸ್ಪಂದನ ನ್ಯೂಸ್‌, ನೌಕರಿ : ಅಖಿಲ ಭಾರತ ಮೆಡಿಕಲ್ ಸೈನ್ಸ್ ಸಂಸ್ಥೆ (AIIMS) ಯಲ್ಲಿ ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ AIIMS ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಆರೋಗ್ಯಕ್ಕೆ ವರದಾನವಾಗಿರುವ Dragon fruit : ಇಲ್ಲಿವೆ ಅದ್ಭುತ ಪ್ರಯೋಜನಗಳು.!
All India Institute of Medical Sciences ಹುದ್ದೆಗಳ ವಿವರ :
  • ವಿಭಾಗದ ಹೆಸರು : ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)
  • ಒಟ್ಟು ಹುದ್ದೆಗಳು : 3,500.
  • ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ.
  • ಉದ್ಯೋಗ ಸ್ಥಳ : ಭಾರತದೆಲ್ಲೆಡೆ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳದ ವಿವರ :

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 34,800/- ವೇತನ ನೀಡಲಾಗುತ್ತದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ವಯೋಮಿತಿ :

ಅರ್ಜಿ ಸಲ್ಲಿಸುವ ಅಭ್ಯರ್ಥಿಯು,

  • ಕನಿಷ್ಠ 18 ವರ್ಷ ಮತ್ತು
  • ಗರಿಷ್ಠ 30 ವರ್ಷ ವಯಸ್ಸು ಹೊಂದಿರಬೇಕು.
  • Note : ಮೀಸಲಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ದೊರೆಯುತ್ತದೆ.
ಶೈಕ್ಷಣಿಕ ಅರ್ಹತೆ :

AIIMS ಅಧಿಕೃತ ಅಧಿಸೂಚನೆಯ ಪ್ರಕಾರ,

  • ಅಭ್ಯರ್ಥಿಯು ಪದವಿ (Degree) ಅಥವಾ ಸಮಾನ ಶಿಕ್ಷಣ (Equal education) ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಅರ್ಹತಾ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಅರ್ಜಿ ಶುಲ್ಕ :
  • ಸಾಮಾನ್ಯ/OBC ಅಭ್ಯರ್ಥಿಗಳು : ರೂ. 3000/-
  • SC/ST/EWS ಅಭ್ಯರ್ಥಿಗಳು : ರೂ. 2400/-
ಆಯ್ಕೆ ವಿಧಾನ :

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಇತರ ಹಂತಗಳ ಆಧಾರವಾಗಿ ನಡೆಯಲಿದೆ. ಆಯ್ಕೆ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ AIIMS ಅಧಿಕೃತ ನೋಟಿಫಿಕೇಶನ್ ಓದಬೇಕು.

ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. AIIMS ನ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ (Download) ಮಾಡಿ ಮತ್ತು ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಲಿಂಕ್ (Online link) ಮೂಲಕ ಅರ್ಜಿ ನಮೂದಿಸಿ.
  4. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  5. ಫೋಟೋ ಮತ್ತು ಸಹಿ ಸೇರಿಸಿ.
  6. ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  7. ಮುದ್ರಣ (Print) ಪ್ರತಿಯನ್ನು ಭದ್ರವಾಗಿ ಇಟ್ಟುಕೊಳ್ಳಿ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಆರಂಭ : 22 ಜುಲೈ 2025.
  • ಅರ್ಜಿ ಸಲ್ಲಿಕೆ ಕೊನೆ : 11 ಆಗಸ್ಟ್ 2025 (ಸಂಜೆ 5 ಗಂಟೆ).
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments