Saturday, July 13, 2024
spot_img
spot_img
spot_img
spot_img
spot_img
spot_img

ನೋಡಲು ಖಡಕ್ ಪೊಲೀಸ್ : ಆದರೆ ಮಾಡಿದ್ದು ಮಾತ್ರ ನೀಚ ಕೃತ್ಯ ; Video ನೋಡಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸರು ನಾಗರಿಕರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಾರೆ. ಅಲ್ಲದೆ ಕೆಟ್ಟವರ ಪಾಲಿಗೆ ದುಸ್ವಪ್ನವಾಗಿ (Nightmarishly) ಕಾಡುತ್ತಾರೆ. ಪ್ರಾಮಾಣಿಕ ಪೊಲೀಸರ ಬಗ್ಗೆ ಮಾತ್ರ ಜನರಿಗೆ ಯಾವಾಗಲೂ ಗೌರವವಿದೆ.

ಆದರೆ ಭ್ರಷ್ಟ ಅಧಿಕಾರಿಗಳು ಕೂಡ ನಮ್ಮ ನಡುವೆ ಇದ್ದಾರೆ. ಸಿಗುವ ಸಂಬಳಕ್ಕೆ (salary) ಸರಿಯಾಗಿ ಕೆಲಸ ಮಾಡದೆ ಹಣಕ್ಕಾಗಿ ಕೈ ಚಾಚುವ ಪೊಲೀಸರು ಸಹ ಇದ್ದಾರೆ.

ಇದನ್ನು ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

ಇನ್ನೂ ಕೆಲವರು ಪೊಲೀಸರು ಭ್ರಷ್ಟಾಚಾರ ಮಾಡುತ್ತಾರೆ, ಅಕ್ರಮ ಎಸಗುತ್ತಾರೆ, ಲಂಚ ಪಡೆದು ದೌರ್ಜನ್ಯ ನಡೆಸಿ ಇಡೀ ಪೊಲೀಸ್ ವ್ಯವಸ್ಥೆಗೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಾರೆ.

ಇತ್ತೀಚೆಗಷ್ಟೇ ಕಾನ್ಸ್​ಟೆಬಲ್​ ಒಬ್ಬರು ಪೊಲೀಸ್ ಠಾಣೆಯನ್ನು ಮಸಾಜ್ ಸೆಂಟರ್ ಆಗಿ ಮಾಡಿಕೊಂಡಿದ್ದಾರೆ. ಅಲ್ಲದೆ, ಚಿಕ್ಕ ಮಕ್ಕಳಿಂದಲೇ ಮಸಾಜ್ ​(Massage) ಮಾಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಭಾನು ಪ್ರತಾಪ್ ಸಿಂಗ್ ಹೆಸರಿನ ಹೆಡ್ ಕಾನ್‌ಸ್ಟೆಬಲ್, ಮೂವರು ಮಕ್ಕಳನ್ನು ನೇಮಿಸಿಕೊಂಡು, ಅವರಿಂದ ಪ್ರತಿದಿನ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನು ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆ ; ಸುದ್ದಿ ತಿಳಿದು ನೋಡಲು ಬರದ ಕುಟುಂಬಸ್ಥರು.!

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಒಂದು ಮಗು ತಲೆಗೆ ಮಸಾಜ್ ಮಾಡುತ್ತಿದ್ದರೆ, ಇನ್ನೆರಡು ಮಕ್ಕಳು ಪಕ್ಕದಲ್ಲೇ ನಿಂತು ಕೈ ಒತ್ತುತ್ತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

ಮಕ್ಕಳನ್ನು ಇಂತಹ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೆಡ್‌ ಕಾನ್ಸ್‌ಟೆಬಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಉನ್ನತಾಧಿಕಾರಿಗಳು ಏರಿಯಾ ಅಧಿಕಾರಿಗೆ (area officer) ಸೂಚನೆ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
- Advertisment -spot_img