Sunday, September 8, 2024
spot_img
spot_img
spot_img
spot_img
spot_img
spot_img
spot_img

ಶಾಸಕಿ ಬೆಂಬಲಿಗರಿಂದ ರಕ್ಷಣೆ ಕೋರಿ SP ಮೊರೆ ಹೋದ ಪೊಲೀಸರು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ (Devadurg) ತಾಲ್ಲೂಕಿನ ಕಾನ್ಸ್‌ಟೇಬಲ್ ಮೇಲೆ ಜೆಡಿಎಸ್ ಶಾಸಕಿ ಅವರ ಪುತ್ರ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕರ್ತವ್ಯ ನಿರ್ವಹಿಸಲು ಶಾಸಕಿಯ ಬೆಂಬಲಿಗರು (supporters) ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ದೇವದುರ್ಗದ 59 ಪೊಲೀಸರು, ನಮಗೆ ರಕ್ಷಣೆ ಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರಿಗೆ ಪತ್ರ ಬರೆದು ಮನವಿ (request) ಮಾಡಿದ್ದಾರೆ.

ಇದನ್ನು ಓದಿ : ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ ; state ಸರ್ಕಾರದ ಆದೇಶ.!

ದೇವದುರ್ಗ ತಾಲ್ಲೂಕಿನಲ್ಲಿ ಇಸ್ಪೀಟ್, ಮಟಕಾ, ಮರಳು ದಂಧೆ, ಜೂಜಾಟ, ಡಿಡಿ ಐಎಂವಿ ಪ್ರಕರಣಗಳಲ್ಲಿ ದಾಳಿ (raid) ನಡೆಸಿದ ವೇಳೆ ಯಾರನ್ನೇ ಹಿಡಿದುಕೊಂಡು ಬಂದರೂ ನಮ್ಮನ್ನು ಕೇಳಿ ಕ್ರಮಕ್ಕೆ ಮುಂದಾಗಬೇಕು.

ಪ್ರಕರಣ ದಾಖಲಿಸುವಾಗ ಶಾಸಕರ ಬೆಂಬಲಿಗರೋ ಅಥವಾ ಇಲ್ಲವೊ ಅಂತ ಕನ್ಪರ್ಮ್ ಮಾಡಿಕೊಳ್ಳಬೇಕು ಎಂದು ಒತ್ತಡ (pressure) ಹಾಕುತ್ತಿದ್ದಾರೆ.

ನಮ್ಮ ಕರ್ತವ್ಯದಲ್ಲಿ ಹಸ್ತಕ್ಷೇಪ (Intervention) ಮಾಡುತ್ತಿದ್ದಾರೆ. ಹೀಗಾಗಿ ರಕ್ಷಣೆ ನೀಡಿ, ಇಲ್ಲವೇ ಸಾಮೂಹಿಕವಾಗಿ ವರ್ಗಾವಣೆ ಮಾಡಿ ಅಂತ ಕಾನೂನು ಸುವ್ಯವಸ್ಥೆ ವಿಭಾಗ ಹಾಗೂ ಸಂಚಾರ ಠಾಣೆಯ 59 ಪೊಲೀಸರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕಾರಿನೊಳಗೆ ಜಿಗಿದ ಕೋತಿ ; ಮುಂದಾಗಿದ್ದೇನು? Video ವೀಕ್ಷಿಸಿ.!

ಅಲ್ಲದೇ ಕಾನೂನು ರೀತಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋದರೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಅಧಿಕಾರದ ದರ್ಪ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img