Tuesday, September 17, 2024
spot_img
spot_img
spot_img
spot_img
spot_img
spot_img
spot_img

5 KG ಆಲೂಗಡ್ಡೆ ಲಂಚ ಕೇಳಿದ ಪೊಲೀಸ್ ಸಸ್ಪೆಂಡ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಬ್‌ ಇನ್‌ಸ್ಪೆಕ್ಟರ್‌ ಲಂಚವಾಗಿ ಆಲೂಗಡ್ಡೆಗೆ ಬೇಡಿಕೆ ಇಟ್ಟು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಕನೌಜ್‌ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್‌ ಇನ್ಸ್‌ಪೆಕ್ಟರ್‌ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆ ರೂಪದಲ್ಲಿ ಲಂಚ ಕೇಳಿ ಸಸ್ಪೆಂಡ್ ಆಗಿದ್ದಾರೆ.

ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!

ಇನ್ನೂ ಸಬ್‌ ಇನ್‌ಸ್ಪೆಕ್ಟರ್‌ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!

ವೈರಲ್ ಆಡಿಯೋದಲ್ಲಿ, ಆರೋಪಿ ಪೊಲೀಸ್‌ ಅಧಿಕಾರಿ ರೈತರೊಬ್ಬರಿಗೆ 5 ಕೆಜಿ ಆಲೂಗಡ್ಡೆ ಲಂಚಗಾಗಿ ಕೇಳಿದ್ದಾರೆ. ಆದರೆ ರೈತ ಈ ಬೇಡಿಕೆಯನ್ನು ಪೂರೈಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಬದಲಿಗೆ 2 ಕೆಜಿ ನೀಡುತ್ತೇವೆ ಎಂದಾಗ ಪೊಲೀಸ್ ಅಧಿಕಾರಿ ಕೋಪಗೊಂಡು ತನ್ನ ಮೂಲ ಬೇಡಿಕೆಯನ್ನು ಒತ್ತಿ ಹೇಳುತ್ತಾನೆ. ನಂತರ ಒಪ್ಪಂದವನ್ನು 3 ಕೆಜಿಗೆ ಅಂತಿಮಗೊಳಿಸಲಾಗಿತ್ತು.

ಇದನ್ನು ಓದಿ : ಈ ಆಹಾರಗಳಿಂದ ದೂರವಿರಿ; ಅತಿಯಾಗಿ ತಿಂದ್ರೆ ಕೀಲುನೋವು ಗ್ಯಾರಂಟಿ.!

ಮೂಲಗಳ ಪ್ರಕಾರ ಇಲ್ಲಿ ಆಲೂಗಡ್ಡೆ ಎನ್ನುವ ಪದವನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಹಣ ಎನ್ನುವ ಪದದ ಬದಲಾಗಿ ಆಲೂಗಡ್ಡೆ ಎಂದು ಕೋಡ್‌ವರ್ಡ್‌ ಬಳಸಿದ್ದಾನೆ.

ಸದ್ಯ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಅವರು ರಾಮ್ ಕೃಪಾಲ್ ಸಿಂಗ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img