ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರಿಗೆ ಒಮ್ಮೆ ನಿದ್ರೆ ಆವರಿಸಿದರೆ ಮತ್ತೆ ಎಚ್ಚರವಾಗುವುದು ಬೆಳಗ್ಗೆಯೇ. ನಿಜವಾಗಿಯೂ ಇದು ತುಂಬಾ ಒಳ್ಳೆಯ ನಿದ್ರೆಯ ಲಕ್ಷಣ.
ಆದ್ರೆ ಇನ್ನು ಕೆಲವರು ಮೂತ್ರ ವಿಸರ್ಜನೆಗೆಂದು ಪದೇ ಪದೇ ಎದ್ದೇಳುತ್ತಿರುತ್ತಾರೆ, ಆಗ ಏನಾದರೂ ಗಂಭೀರ ಸಮಸ್ಯೆಗಳು ಇವೆ ಎಂದು ಹೇಳಬಹುದು.
ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!
ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಒಂದು ಬಾರಿ ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಒಂದಕ್ಕಿಂತ ಹೆಚ್ಚು ಬಾರಿ ಅಥವಾ ಆಗಾಗ್ಗೆ ಏಳುತ್ತಿದ್ದರೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಆರೋಗ್ಯ ತಜ್ಞರು, ರಾತ್ರಿಯ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂದು ಒಪ್ಪುತ್ತಾರೆ. ಆದರೆ ಎರಡು ಅಥವಾ ಹೆಚ್ಚು ಬಾರಿ ಮೂತ್ರ ವಿಸರ್ಜಿಸುವುದು ನಿಮಗೆ ತಪಾಸಣೆ ಅಗತ್ಯವಿದೆ ಎಂದು ಸೂಚಿಸುತ್ತದೆ.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
ಈ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಇದನ್ನು ನೋಕ್ಟುರಿಯಾ ಸಮಸ್ಯೆ ಎಂದು ಕರೆಯಲಾಗುತ್ತದೆ.
ಅನೇಕ ಕಾರಣಗಳಿಂದ ಜನರಲ್ಲಿ ಮೂತ್ರಕೋಶದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂತ್ರ ವಿಸರ್ಜನೆಯಲ್ಲಿ ಯಾವುದೇ ಸಮಸ್ಯೆ ಗಂಭೀರವಾದಾಗ ಅದರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ನೊಕ್ಟುರಿಯಾ ಎಂಬುದು ವೈದ್ಯಕೀಯ ಪದವಾಗಿದ್ದು ಅದು ಅನೇಕ ಕಾರಣಗಳನ್ನು ಹೊಂದಿರುತ್ತದೆ. ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಈ ಸಮಸ್ಯೆಯನ್ನು ಎದುರಿಸಬಹುದು.
ಹೃದಯ ವೈಫಲ್ಯ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಲ್ಲಿ ವಿಶೇಷವಾಗಿ ಮೂತ್ರವರ್ಧಕ ಔಷಧಗಳನ್ನು ನೀಡಲಾಗುತ್ತದೆ.
ಇದನ್ನು ಓದಿ : Video : ಮಹಿಳಾ ಎಸ್ಐ ಜೊತೆ SI ಸರಸ ಸಲ್ಲಾಪ : ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ.!
ಕೆಫೀನ್ ಹೊಂದಿರುವ ಪಾನೀಯಗಳು ಮತ್ತು ಆಲ್ಕೋಹಾಲ್ ಮೂತ್ರ ವರ್ಧಕ ಗಳಾಗಿವೆ. ಅಂದರೆ ಅವುಗಳನ್ನು ಕುಡಿಯುವುದರಿಂದ ನಿಮ್ಮ ದೇಹವು ಹೆಚ್ಚು ಮೂತ್ರವನ್ನು ಉತ್ಪಾದಿಸುತ್ತದೆ.
ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅಥವಾ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವುದರಿಂದ ರಾತ್ರಿಯಲ್ಲಿ ಎಚ್ಚರಗೊಂಡು ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ.
ಮೂತ್ರಕೋಶದ ಕ್ಯಾನ್ಸರ್ ಕೂಡ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಮೂತ್ರಕೋಶದ ಅಂಗಾಂಶಗಳಲ್ಲಿ ಕ್ಯಾನ್ಸರ್ ಬೆಳವಣಿಗೆಯು ಪದೇ ಪದೇ ಮೂತ್ರ ವಿಸರ್ಜನೆಯ ಅವಸರವನ್ನುಂಟು ಮಾಡುತ್ತದೆ. ಇದರ ಜೊತೆಗೆ ಮೂತ್ರದಲ್ಲಿ ರಕ್ತ ಹೋಗುವುದು ಮತ್ತು ಕಿಬ್ಬೊಟ್ಟೆಯಲ್ಲಿ ನೋವು ಕೂಡ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಂಡುಬಂದರೆ ಕಡೆಗಣಿಸದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು