ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral Newsರಕ್ಷಣಾ ಕಾರ್ಯಾಚರಣೆಯಲ್ಲಿ Leopard ದಾಳಿಯಿಂದ ಪಾರಾದ ಪೊಲೀಸ್ ಅಧಿಕಾರಿ.!
spot_img
spot_img
spot_img

ರಕ್ಷಣಾ ಕಾರ್ಯಾಚರಣೆಯಲ್ಲಿ Leopard ದಾಳಿಯಿಂದ ಪಾರಾದ ಪೊಲೀಸ್ ಅಧಿಕಾರಿ.!

- Advertisement -

ಜನಸ್ಪಂದನ ನ್ಯೂಸ್‌, ಕೊಲ್ಹಾಪುರ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ರೋಮಾಂಚಕ ಘಟನೆಯೊಂದು ಎಲ್ಲರೂ ನಡುಗುವಂತೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಚಿರತೆಯ (Leopard) ಭೀಕರ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ವರದಿಯ ಪ್ರಕಾರ, ಈ ಘಟನೆ ನಗರದ ಮಧ್ಯಭಾಗದಲ್ಲಿರುವ ಮಹಾವಿತರಣ್ MSEB ಮುಖ್ಯ ಕಚೇರಿಯ ಬಳಿ ನಡೆದಿದೆ. ವಸತಿ ಪ್ರದೇಶದ ಸುತ್ತಮುತ್ತ ಚಿರತೆ (Leopard) ಅಲೆದಾಡುತ್ತಿತ್ತು ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯಲು ಸ್ಥಳಕ್ಕೆ ಧಾವಿಸಿದ್ದರು.

ಆದರೆ ಚಿರತೆ (Leopard) ಯನ್ನು ಹಿಡಿಯಲು ಮುಂದಾದ ಕ್ಷಣದಲ್ಲೇ ಅದು ತಂಡದ ಮೇಲೆ ಉಗ್ರ ಸ್ವರೂಪ ತೋರಿಸಿತು. ಪೊಲೀಸರು ಕೋಲು ಮತ್ತು ಕಬ್ಬಿಣದ ರಾಡ್ ಹಿಡಿದು ಮುನ್ನಡೆಯುತ್ತಿದ್ದಂತೆಯೇ, ಆಕಸ್ಮಿಕವಾಗಿ ಚಿರತೆ ಅವರತ್ತ ದಾಳಿ ನಡೆಸಿತು.

ಇದನ್ನೂ ಓದಿ 👉 :  ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಕಡಿದಾದ ಹಾದಿಗಳಲ್ಲಿ ಓಡಾಟ ಆರಂಭವಾದರೂ, ಒಬ್ಬ ಪೊಲೀಸ್ ಅಧಿಕಾರಿ ಸಮತೋಲನ ಕಳೆದುಕೊಂಡು ನೆಲದ ಮೇಲೆ ಬಿದ್ದರು. ತಕ್ಷಣವೇ ಚಿರತೆ (Leopard) ಅವರ ಮೇಲೆ ಹಾರಿ ಬಿದ್ದ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತವೆ.

ಅದೃಷ್ಟವಶಾತ್, ಇತರ ಅಧಿಕಾರಿಗಳು ತಕ್ಷಣ ಕೂಗಿ ಕಬ್ಬಿಣದ ವಸ್ತುಗಳನ್ನು ಎಸೆದ ಪರಿಣಾಮ, ಚಿರತೆ ಹೆದರಿಕೊಂಡು ಸ್ಥಳದಿಂದ ಓಡಿ ಹೋಯಿತು. ಈ ಘಟನೆಯಿಂದ ಪೊಲೀಸರಿಗೆ ತೀವ್ರ ಆಘಾತವಾದರೂ, ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಅರಣ್ಯ ಅಧಿಕಾರಿಗಳ ಪ್ರಕಾರ, ಚಿರತೆ (Leopard) ದಾಳಿಯಿಂದ ಇಬ್ಬರು ವ್ಯಕ್ತಿಗಳು ಅದರಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಇನ್ನೋಬ್ಬರು ಗಾಯಗೊಂಡಿದ್ದಾರೆ. ಸದ್ಯ ಅವರ ಸ್ಥಿತಿ ಅಪಾಯದಿಂದ ಹೊರಗಿದೆ. ಘಟನೆ ಬಳಿಕ ಆ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಮತ್ತು ಸ್ಥಳೀಯರಿಗೆ ಮನೆಗಳ ಒಳಗೇ ಇರಲು ಸೂಚಿಸಲಾಗಿದೆ.

ಅಧಿಕಾರಿಗಳು ಆ ಪ್ರದೇಶವನ್ನು ಹಗ್ಗದಿಂದ ಸುತ್ತುವರೆದಿದ್ದಾರೆ ಮತ್ತು ಚಿರತೆ (Leopard) ಯನ್ನು ಶಾಂತಗೊಳಿಸಲು ಹಾಗೂ ಅದನ್ನು ಹಿಡಿಯಲು ಪ್ರತಯ್ನಿಸುತ್ತಿದ್ದಾರೆ. ಸದ್ಯ ಸ್ಥಳೀಯರು ಮನೆಯ ಒಳಗೆ ಇರುವಂತೆ ಸೂಚಿಸಿದ್ದಾರೆ.

ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೇಗವಾಗಿ ಹರಡಿದೆ. ವಿಡಿಯೋದಲ್ಲಿ ಚಿರತೆ (Leopard) ಯ ದಾಳಿ ಮತ್ತು ಪೊಲೀಸರ ಓಡಾಟದ ಕ್ಷಣಗಳು ಎಲ್ಲರಿಗೂ ನಡುಗುವಂತೆ ಮಾಡಿವೆ.

ಇದನ್ನೂ ಓದಿ 👉 : Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!
ಚಿರತೆ (Leopard) ದಾಳಿಯ ವಿಡಿಯೋ :

https://twitter.com/i/status/1988173314817507790

ಸಂಪಾದಕೀಯ  :

ಈ ಘಟನೆ ನಗರ ಪ್ರದೇಶಗಳಲ್ಲಿ ವನ್ಯಜೀವಿಗಳ ಅತಿಕ್ರಮಣದ ಅಪಾಯವನ್ನು ಮತ್ತೊಮ್ಮೆ ಸ್ಮರಿಸುತ್ತದೆ. ಪರಿಸರ ನಾಶ, ಅರಣ್ಯ ಪ್ರದೇಶಗಳ ಕಡಿತ ಮತ್ತು ಆಹಾರ ಕೊರತೆಯಿಂದಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಜನರು ಶಾಂತವಾಗಿ ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಪಾಲಿಸಬೇಕು ಮತ್ತು ಪ್ರಾಣಿಗಳತ್ತ ಕರುಣೆ ಹಾಗೂ ಎಚ್ಚರದಿಂದ ನಡೆದುಕೊಳ್ಳಬೇಕು.


“Ants ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸರಳ ಮನೆಮದ್ದುಗಳ ಪರಿಹಾರ”.!

Ants

ಜನಸ್ಪಂದನ ನ್ಯೂಸ್‌, ಆರೋಗ್ಯ : ಮನೆಯೊಳಗೆ ಇರುವೆಗಳು (Ants) ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯ. ವಿಶೇಷವಾಗಿ ಅಡುಗೆ ಕೋಣೆಯ ಬಳಿ ಅಥವಾ ಆಹಾರ ಇಡುವ ಸ್ಥಳಗಳಲ್ಲಿ ಇವುಗಳ ಹಾವಳಿ ಇನ್ನು ಹೆಚ್ಚಿರುತ್ತದೆ.

ಪುಟ್ಟ ಜೀವಿಗಳಾದರೂ ಇವುಗಳ ಕಾಟ ಮನೆಯನ್ನು ಕಿರಿಕಿರಿಯಿಂದ ತುಂಬಿಸಿ ಬಿಡುತ್ತದೆ. ಅನೇಕರು ಇರುವೆಗಳನ್ನು ತೊಡೆದುಹಾಕಲು ಮಾರುಕಟ್ಟೆಯ ರಾಸಾಯನಿಕ ಸ್ಪ್ರೇ ಅಥವಾ ಪೌಡರ್‌ಗಳನ್ನು ಬಳಸುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಮತ್ತು ಮಕ್ಕಳಿಗೆ, ಪಶುಪಕ್ಷಿಗಳಿಗೆ ಅಪಾಯ ಉಂಟುಮಾಡಬಹುದು.

ಆದರೆ ಮನೆಯಲ್ಲಿಯೇ ಲಭ್ಯವಿರುವ ಕೆಲವು ನೈಸರ್ಗಿಕ ವಸ್ತುಗಳಿಂದ ಇರುವೆಗಳ ಕಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಇಲ್ಲಿವೆ ಇರುವೆಗಳ ಕಾಟ ತಪ್ಪಿಸಲು ಸರಳ ಹಾಗೂ ಸುರಕ್ಷಿತ ಮನೆಮದ್ದುಗಳು :
ಇದನ್ನು ಓದಿ :  Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ನಿಂಬೆ ಮತ್ತು ವಿನೆಗರ್ ಮಿಶ್ರಣ :

ಇರುವೆಗಳು ಹುಳಿ ಮತ್ತು ಬಲವಾದ ವಾಸನೆಯನ್ನು ದ್ವೇಷಿಸುತ್ತವೆ. ನಿಂಬೆ ರಸ, ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿ. ಈ ಮಿಶ್ರಣವನ್ನು ಬಾಗಿಲು, ಕಿಟಕಿ, ಗೋಡೆ ಬಿರುಕುಗಳ ಬಳಿ ಸಿಂಪಡಿಸಿ. ನಿಂಬೆ-ವಿನೆಗರ್‌ನ ತೀವ್ರ ವಾಸನೆ ಇರುವೆಗಳು ಒಳಗೆ ಪ್ರವೇಶಿಸದಂತೆ ತಡೆಯುತ್ತದೆ ಮತ್ತು ಅಡುಗೆ ಮನೆಯನ್ನು ಶುದ್ಧಗೊಳಿಸುತ್ತದೆ.

ಉಪ್ಪಿನ ದ್ರಾವಣ :

ಉಪ್ಪು ಇರುವೆಗಳನ್ನು ಓಡಿಸಲು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವಿಧಾನವಾಗಿದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಎರಡು ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕರಗಿಸಿ. ಈ ದ್ರಾವಣವನ್ನು ಇರುವೆಗಳ ಹಾದಿಗಳ ಮೇಲೆ ಸಿಂಪಡಿಸಿ. ಕೆಲವೇ ನಿಮಿಷಗಳಲ್ಲಿ ಇರುವೆಗಳು ಅಲ್ಲಿಂದ ಓಡಿ ಹೋಗುತ್ತವೆ.

ದಾಲ್ಚಿನ್ನಿ ಮತ್ತು ಲವಂಗದ ವಾಸನೆ :

ದಾಲ್ಚಿನ್ನಿಯ ಬಲವಾದ ಪರಿಮಳವು ಇರುವೆಗಳಿಗೆ ಅಸಹನೀಯ. ಇರುವೆಗಳು ಓಡಾಡುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿ ಅಥವಾ ದಾಲ್ಚಿನ್ನಿ ಎಣ್ಣೆ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಜೊತೆಗೆ ಲವಂಗವನ್ನು ಕೂಡ ಇರುವೆ ಹಾದಿಗಳ ಬಳಿ ಇಡುವುದರಿಂದ ಇವು ಹತ್ತಿರ ಬರೋದಿಲ್ಲ. ಈ ವಿಧಾನ ನೈಸರ್ಗಿಕವಾಗಿದ್ದು, ಸುಗಂಧದಿಂದ ಮನೆಯ ವಾತಾವರಣವನ್ನೂ ತಾಜಾಗೊಳಿಸುತ್ತದೆ.

ಪುದೀನಾ ಎಣ್ಣೆ :

ಪುದೀನಾ ಎಣ್ಣೆಯ ತಾಜಾ ವಾಸನೆ ಇರುವೆಗಳನ್ನು ದೂರವಿಡಲು ಬಹಳ ಪರಿಣಾಮಕಾರಿ. ಒಂದು ಕಪ್ ನೀರಿಗೆ 10 ಹನಿ ಪುದೀನಾ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮನೆಯ ಮೂಲೆಗಳು, ಅಡುಗೆಮನೆ ತಳಹದಿ ಮತ್ತು ಇರುವೆಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಸಿಂಪಡಿಸಿ. ಇವು ಇರುವೆಗಳನ್ನು ಮಾತ್ರವಲ್ಲ, ಇತರ ಕೀಟಗಳನ್ನೂ ತಡೆಯುತ್ತದೆ.

ಇದನ್ನು ಓದಿ : “Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.
ಈರುಳ್ಳಿ ತುಂಡುಗಳು :

ಈರುಳ್ಳಿಯ ಬಲವಾದ ವಾಸನೆಯನ್ನು ಇರುವೆಗಳು ಸಹಿಸಿಕೊಳ್ಳಲಾರವು. ಇರುವೆಗಳು ಓಡಾಡುವ ಸ್ಥಳಗಳಲ್ಲಿ ಈರುಳ್ಳಿ ತುಂಡುಗಳನ್ನು ಇರಿಸಿ. ಕೆಲವೇ ಗಂಟೆಗಳಲ್ಲಿ ಇವು ಅಲ್ಲಿಂದ ಮಾಯವಾಗುತ್ತವೆ. ನಿಯಮಿತವಾಗಿ ಈರುಳ್ಳಿಯ ತುಂಡುಗಳನ್ನು ಬದಲಾಯಿಸುವುದರಿಂದ ಪರಿಣಾಮ ಹೆಚ್ಚು ಕಾಲ ಉಳಿಯುತ್ತದೆ.

ನಿಯಮಿತ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆಗಳು :

ಮನೆಯ ಸ್ವಚ್ಛತೆ ಇರುವೆ ನಿಯಂತ್ರಣದ ಮುಖ್ಯ ಭಾಗವಾಗಿದೆ. ಅಡುಗೆಮನೆಯಲ್ಲಿ ಸಕ್ಕರೆ, ಸಿಹಿತಿಂಡಿ ಅಥವಾ ಆಹಾರ ಕಣಗಳು ಚೆಲ್ಲದಂತೆ ನೋಡಿಕೊಳ್ಳಿ. ಆಹಾರ ವಸ್ತುಗಳನ್ನು ಭದ್ರವಾಗಿ ಮುಚ್ಚಿ ಇಡಿ. ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚುವುದರಿಂದ ಇರುವೆಗಳು ಒಳಗೆ ನುಗ್ಗುವ ದಾರಿ ಕಡಿಮೆಯಾಗುತ್ತದೆ. ತೇವಭರಿತ ಸ್ಥಳಗಳು ಇರುವೆಗಳಿಗೆ ಆಕರ್ಷಕವಾಗಿರುವುದರಿಂದ ಮನೆ ಒಣದಾಗಿರಲಿ.

ಸಂಪಾದಕೀಯ :

ಮಾರುಕಟ್ಟೆಯ ರಾಸಾಯನಿಕಗಳನ್ನು ಬಿಟ್ಟು ನೈಸರ್ಗಿಕ ಮನೆಮದ್ದುಗಳನ್ನು ಬಳಸಿ ನಿಮ್ಮ ಮನೆ ಮತ್ತು ಅಡುಗೆಮನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ನಿಂಬೆ, ವಿನೆಗರ್, ಪುದೀನಾ ಎಣ್ಣೆ, ದಾಲ್ಚಿನ್ನಿ, ಈರುಳ್ಳಿ ಮುಂತಾದ ಸರಳ ವಸ್ತುಗಳಿಂದ ಇರುವೆಗಳ ಕಾಟದಿಂದ ಶಾಶ್ವತ ಪರಿಹಾರ ಪಡೆಯಬಹುದು.

 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments