Tuesday, September 17, 2024
spot_img
spot_img
spot_img
spot_img
spot_img
spot_img
spot_img

PM Awas Yojana : ಉಚಿತ ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ “ಪ್ರಧಾನ ಮಂತ್ರಿ ಅವಾಸ ಯೋಜನೆ” (Pradhan ,Mantri Awas Yojana) ಪ್ರಾರಂಭಿಸಿದೆ.

ಕೇಂದ್ರ ಸರ್ಕಾರ ಈ ಯೋಜನೆ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗಾಗಿ ಮನೆ ನಿರ್ಮಿಸಿ ಕೊಡುತ್ತಿದೆ. ಹಾಗಾದರೆ ಏನಿದು ಯೋಜನೆ? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಮುಂತಾದ ವಿವರ ಇಲ್ಲಿದೆ.

ಇದನ್ನು ಓದಿ : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯಡಿ 300 ಯುನಿಟ್‌ ವಿದ್ಯುತ್‌ ಫ್ರೀ ; ಡೈರೆಕ್ಟ್ Link ಇಲ್ಲಿದೆ.!

ಇನ್ನೂ ಸರ್ಕಾರ ನಿರ್ಮಿಸಿ ಕೊಡುವ ಈ ಮನೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಶೌಚಾಲಯ, ಎಲ್‌ಪಿಜಿ ಕನೆಕ್ಷನ್‌, ವಿದ್ಯುತ್‌ ಸಂಪರ್ಕ ಮತ್ತು ನೀರಿನ ಸೌಲಭ್ಯ ಹೊಂದಿರುತ್ತದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಗರ ಮತ್ತು ಗ್ರಾಮೀಣ ಎನ್ನುವ ಎರಡು ವಿಧವಿದೆ.

ಈ ಯೋಜನೆಯನ್ನು ಫಲಾನುಭವಿಗಳ ವಾರ್ಷಿಕ ಆದಾಯದ ಆಧಾರದಲ್ಲಿ 4 ವರ್ಗಗಳನ್ನಾಗಿ ವಿಂಗಡಿಸಲಾಗಿದೆ.
ಮಧ್ಯಮ ಆದಾಯದ ಗುಂಪು-1 (MIG-2): 12 ಲಕ್ಷ ರೂ.- 18 ರೂ. ಆದಾಯ

ಮಧ್ಯಮ ಆದಾಯದ ಗುಂಪು-1 (MIG-1): 6 ಲಕ್ಷ ರೂ.- 12 ರೂ. ಆದಾಯ

ಕಡಿಮೆ ಆದಾಯದ ಗುಂಪು (LIG): 3 ಲಕ್ಷ ರೂ.- 6 ರೂ. ಆದಾಯ

ಆರ್ಥಿಕವಾಗಿ ಹಿಂದುಳಿದ ವರ್ಗ (EWS)- 3 ಲಕ್ಷ ರೂ.ವರೆಗೆ ಆದಾಯ

ಮಾನದಂಡಗಳು :
* ಫಲಾನುಭವಿ ಭಾರತದ ನಿವಾಸಿಯಾಗಿರಬೇಕು.
* ಫಲಾನುಭವಿ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
* ಫಲಾನುಭವಿ ಶಾಶ್ವತ ಮನೆ ಹೊಂದಿರಬಾರದು.
* ಫಲಾನುಭವಿಯ ಕುಟುಂಬದವರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
*ಫಲಾನುಭವಿಯ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
* ಫಲಾನುಭವಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರಬೇಕು. ಅಲ್ಲದೆ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು (ಅಧಾರ್‌ ಕಾರ್ಡ್‌, ಲೈಸನ್ಸ್‌ ಇತ್ಯಾದಿ).

ಇದನ್ನು ಓದಿ : 3 ತಿಂಗಳ ಫ್ರೀ ರಿಚಾರ್ಜ್ ಲಭ್ಯ.! ಈ ಮೆಸೇಜ್ ನಿಮ್ಗೂ ಬಂತಾ.? Click ಮಾಡೋದಕ್ಕಿಂತ ಮುಂಚೆ ಈ ಸುದ್ದಿ ಓದಿ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ.
* ಅರ್ಜಿದಾರರ ಫೋಟೊ
* ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ.
* ಬ್ಯಾಂಕ್ ಪಾಸ್‌ಬುಕ್.
* ಸ್ವಚ್ಛ ಭಾರತ್ ಮಿಷನ್ (SBM) ನೋಂದಣಿ ಸಂಖ್ಯೆ.
* ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವ ವಿಧಾನ :
* ಅಧಿಕೃತ ವೆಬ್‌ಸೈಟ್‌ https://pmaymis.gov.in/ಗೆ ಭೇಟಿ ನೀಡಿ
ಅಥವಾ ಇಲ್ಲಿ ಕ್ಲಿಕ್‌ ಮಾಡಿ.
* ಹೋಮ್‌ಪೇಜ್‌ನಲ್ಲಿ ಕಂಡು ಬರುವ PM Awas Yojana ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
* ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
* ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
* ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್‌ ಕ್ಲಿಕ್‌ ಮಾಡಿ.

* ಆಫ್‌ಲೈನ್‌ ಮೂಲಕವೂ ನೀವು ಅರ್ಜಿ ಸಲ್ಲಿಬಹುದು. ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (Common Service Center) ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ 1800-11-3377, 1800-11-3388 ನಂಬರ್‌ಗೆ ಕರೆ ಮಾಡಿ.

ಇದನ್ನು ಓದಿ : ಮಗುವಿನ ಮೇಲೆ ಬೀದಿ ನಾಯಿಯಿಂದ ದಾಳಿ : ಹಿರೋನಂತೆ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು ನಾಯಿ, ವಿಡಿಯೋ Viral.!

2015ರ ಜೂನ್‌ನಲ್ಲಿ ಪ್ರಾರಂಭವಾದ ಈ ಯೋಜನೆ ಎಲ್ಲ ಅರ್ಹ ನಗರ ಫ‌ಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವ ಗುರಿ ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲೂ ಪಿಎಂಎವೈಗೆ 80,671 ಕೋಟಿ ರೂ. ನಿಗದಿಪಡಿಸಲಾಗಿತ್ತು.

ಅದಕ್ಕೂ ಹಿಂದಿನ ಬಜೆಟ್‌ಲ್ಲಿ 54,103 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಸತಿ ಕೊರತೆ ನೀಗಿಸಲು ಹೆಚ್ಚಿನ ಅನುದಾನ ನೀಡಿರುವುದು ನಗರವಾಸಿಗಳ ಅರ್ಹ ಫ‌ಲಾನುಭವಿಗಳಿಗೆ ನೆರವಾಗಲಿದೆ. ಕಳೆದ 10 ವರ್ಷಗಳಲ್ಲಿ 4.21 ಕೋಟಿ ಮನೆಗಳನ್ನು ನಿರ್ಮಿಸಿ ಫ‌ಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img