Tuesday, September 17, 2024
spot_img
spot_img
spot_img
spot_img
spot_img
spot_img
spot_img

ಬಾಲಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಪಿಟ್​ಬುಲ್​ ನಾಯಿ : ಸಹಾಯಕ್ಕೆ ಬಂದವರ್ಯಾರು ; Video Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಕನೋರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಿಟ್​ಬುಲ್​ ಥಳಿಯ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ (serious injuries) ಘಟನೆ ಉತ್ತರಪ್ರದೇಶ ಗಾಜಿಯಾಬಾದ್​ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ಕುರಿತು ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಇದನ್ನು ಓದಿ : ಇಂಥಾ ವ್ಯಕ್ತಿಗಳ ಪ್ರೀತಿಯಲ್ಲಿ ಹುಡ್ಗೀರು ಮೊದಲ ನೋಟದಲ್ಲೇ ಬೀಳ್ತಾರೆ ; ಯಾವ ಗುಣ ಅವರನ್ನು ಆಕರ್ಷಿಸುತ್ತೆ ಗೊತ್ತಾ.?

ವಿಡಿಯೋದಲ್ಲಿರುವ ದೃಶ್ಯ :

ರಸ್ತೆಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕ ಅಲ್ತಾಫ್​ ಎಂಬಾತನ ಮೇಲೆ ಪಿಟ್​ಬುಲ್​ ನಾಯಿ ಏಕಾಏಕಿ (suddenly) ದಾಳಿ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವೇಳೆ ಅಲ್ಲೇ ಇದ್ದ ಜನರು ಅದನ್ನು ನೋಡಿಕೊಂಡು ಸುಮ್ಮನೇ ನಿಂತಿರುತ್ತಾರೆ. ಮೇಲಿನಿಂದ ಇಬ್ಬರು ನೀರು (water) ಎರಚಿದ್ದು, ಬಾಲಕ ಹೇಗೋ ತಪ್ಪಿಸಿಕೊಳ್ಳುತ್ತಾನೆ. ಈ ವೇಳೆ ಕೆಲ ಬೀದಿನಾಯಿಗಳು ಆತನ ರಕ್ಷಣೆಗೆ ಧಾವಿಸಿದ್ದು, ಬಾಲಕನನ್ನು ಅಪಾಯದಿಂದ ಪಾರು ಮಾಡಿವೆ ಎನ್ನಬಹುದು.

ಇತ್ತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್ ​(Ghaziabad) ಪಾಲಿಕೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ನಾಯಿಯನ್ನು ವಶಕ್ಕೆ ಪಡೆದಿದೆ.

ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Video : ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪೇ ; ಮಾಡೆಲ್ ಫೋಟೋಗೆ ಮುತ್ತಿಟ್ಟ ಪೋಲಿ ತಾತ.!

ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಬಾಲಕನ ರಕ್ಷಣೆಗೆ ಮನುಷ್ಯರ ಬದಲು ಬೀದಿನಾಯಿಗಳು ಧಾವಿಸಿದ್ದು, ಈ ದೃಶ್ಯ ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img