Thursday, April 25, 2024
spot_img
spot_img
spot_img
spot_img
spot_img
spot_img

ಶವದ ಕಾಲು ತಿಂದ ವ್ಯಕ್ತಿ : ಅಸಹ್ಯಕ್ಕೆ ಜನರ ಆಕ್ರೋಶ ; ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಪಂಚದಲ್ಲಿ ಎಂಥೆಂತಾ ಮನುಷ್ಯರಿರುತ್ತಾರೆ ನೋಡಿ. ಈ ಮನುಷ್ಯ ತನ್ನ ತಿನಿಸಿಗಾಗಿ ಎನೇನೋ ತಿನ್ನುತ್ತಾನೆ. ಕೆಲವರು ಮಾಂಸಾಹಾರಿಗಳಾದರೆ ಇನ್ನು ಕೆಲವರು ಶುದ್ಧ ಶಾಖಾಹಾರಿಗಳಾಗಿದ್ದಾರೆ. ಇನ್ನ ಕೆಲ ದೇಶಗಳಲ್ಲಿ ಹುಳಗಳನ್ನೂ ತಿನ್ನುವವರು ಇದ್ದಾರೆ. ಆದರೆ ಮನುಷ್ಯ ಮನುಷ್ಯನನ್ನು ತಿನ್ನುವುದೆನಾದರೂ ಕೇಳಿದ್ದೀರಾ.?

ಇಲ್ವಾ, ಈ ಸುದ್ದಿ ಓದಿ….

ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿ (California) ವ್ಯಕ್ತಿಯೊಬ್ಬ ಶವದ ಕಾಲು ತಿನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ. ಕಳೆದ ಶುಕ್ರವಾರ (ಮಾರ್ಚ್‌ 22) ಇಂತಹ ವಿಲಕ್ಷಣ ಘಟನೆ ನಡೆದಿದ್ದು, ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ನೋಡಿದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕರುಳಬಳ್ಳಿಯ ಪ್ರಾಣ ಉಳಿಸಲು ಮೊಸಳೆ ಜೊತೆ ಕಾದಾಡಿದ ತಾಯಿ ಕೋತಿ ವಿಡಿಯೋ Virul.!

ಇದನ್ನೂ ಓದಿ : 

ಇನ್ನು ಈ ರೀತಿ ಸತ್ತ ಮನುಷ್ಯನ ಕಾಲು ತಿಂದ ವ್ಯಕ್ತಿಯನ್ನು 27 ವರ್ಷದ ರೆಸೆಂಡೋ ಟೆಲ್ಲೆಜ್‌ ಎಂದು ಹೇಳಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಯಾಲಿಫೋರ್ನಿಯಾದ ವಾಸ್ಕೋ ಆಮ್‌ಟ್ರ್ಯಾಕ್‌ ರೈಲು ನಿಲ್ದಾಣದ ಬಳಿ ರೈಲು ಹರಿದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ. ಆಗ 27 ವರ್ಷದ ರೆಸೆಂಡೋ ಟೆಲ್ಲೆಜ್‌ ಎಂಬ ಯುವಕ (ವ್ಯಕ್ತಿ) ಅದರ ಬಳಿ ಹೋಗಿ ತುಂಡಾಗಿ ಬಿದ್ದ ಶವದ ಕಾಲನ್ನು ಕೈಯಲ್ಲಿ ಹಿಡಿದುಕೊಂಡ ತಿನ್ನುತ್ತ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾನೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಕೆಲ ಹೊತ್ತಿನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನು ಓದಿ : PU Exam : ತಂಗಿಗೆ ನಕಲು ಮಾಡಲು ಬಿಡಲಿಲ್ಲ ಅಂತ ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ ಅಣ್ಣ.!

ಇದನ್ನೂ ಓದಿ : 

ಬಂಧಿತ ಆರೋಪಿಯು ಮಾನಸಿಕ ಅಸ್ವಸ್ಥನೋ, ಹಸಿವು ತಾಳದೆ ಮನುಷ್ಯನ ಕಾಲು ತಿಂದಿದ್ದಾನೋ, ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದಾನೋ ಎಂಬುದು ನಿಖರವಾಗಿಲ್ಲ. ಪೊಲೀಸರು ಈತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

spot_img
spot_img
spot_img
- Advertisment -spot_img