Thursday, April 25, 2024
spot_img
spot_img
spot_img
spot_img
spot_img
spot_img

PU Exam : ತಂಗಿಗೆ ನಕಲು ಮಾಡಲು ಬಿಡಲಿಲ್ಲ ಅಂತ ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ ಅಣ್ಣ.!

spot_img

ಜನಸ್ಪಂದನ ನ್ಯೂಸ್‌,  ಕಲಬುರಗಿ : ಯುವಕನೊಬ್ಬ ತನ್ನ ತಂಗಿಗೆ ಪಿಯುಸಿ ಪರೀಕ್ಷೆಯಲ್ಲಿ (PUC Exams) ನಕಲು ಮಾಡಲು ಬಿಡದಕ್ಕೆ ಆಕ್ರೋಶಗೊಂಡು ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ಮಾಡಿರವ ಘಟನೆ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ರಾಜ್ಯಾಧ್ಯಂತ ಪಿಯುಸಿ ಪರೀಕ್ಷೆಗಳು ನಿನ್ನೆ ಮುಗಿಯುತ್ತಿದ್ದು, ಇದೇ ವೇಳೆ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಯುವಕನೋರ್ವ ಹಲ್ಲೆ ನಡೆಸಿರುವುದು ವರದಿಯಾಗಿದೆ. ಈ ಘಟನೆ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ.

Arrest : ಬಿಗ್ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅರೆಸ್ಟ್.!

ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಪಿಯು ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಕರ್ತವ್ಯಕ್ಕೆ ಕಾನ್ಸ್‌ಟೇಬಲ್​ ಪಂಡಿತ್ ಪಾಂಡ್ರೆ ನೇಮಿಸಲಾಗಿತ್ತು, ಆದರೆ ಪರೀಕ್ಷೆಯಲ್ಲಿ ತನ್ನ ತಂಗಿಗೆ ನಕಲು ಮಾಡಲು ಸಹಕರಿಸಲಿಲ್ಲ ಅಂತ ಕಾನ್ಸ್‌ಟೇಬಲ್ ಮೇಲೆ ವಿದ್ಯಾರ್ಥಿನಿಯ ಅಣ್ಣ ಕೈಲಾಸ್ ಕೋಪಗೊಂಡು ಬೈಯಲು ಪ್ರಾರಂಭಿಸಿದ್ದಾನೆ.

ಅಷ್ಟಕ್ಕೂ ಸುಮ್ಮನಾಗದ ಕೈಲಾಸ್, ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಘಟನೆಯ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಇನ್ನು ಹಲ್ಲೆ ಮಾಡಿದ ಯುವಕ ಕೈಲಾಸ್ ಈತನಿಗೆ ಸ್ನೇಹಿತ ಸಮೀರ್ ಕೂಡ ಸಾಥ್ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ : ಕಾಂಗ್ರೆಸ್‌ ಪಕ್ಷದ 3ನೇ ಪಟ್ಟಿ ಬಿಡುಗಡೆ ; ಕರ್ನಾಟಕದವರೆಷ್ಟು.?

ಪ್ರಕರಣ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈಲಾಸ್ ಮತ್ತು ಸಮೀರ್​ನನ್ನು ಪೊಲೀಸರು ಬಂಧಿಸಿದ್ದಾರೆ.

spot_img
spot_img
spot_img
- Advertisment -spot_img