Thursday, April 25, 2024
spot_img
spot_img
spot_img
spot_img
spot_img
spot_img

Arrest : ಬಿಗ್ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅರೆಸ್ಟ್.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬಿಗ್ ಬಾಸ್‌ ಒಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬ್ಯಾಡರಹಳ್ಳಿ ಪೊಲೀಸರು ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ (Adopted) ಆರೋಪ ಮೇಲೆ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿ (arrest), ಎಫ್‌ಐಆರ್ ದಾಖಲು ಮಾಡಿದ್ದಾರೆ.

ಇದನ್ನು ಓದಿ : ಮತ್ತೆ ಡೀಪ್‌ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ ; ಡೀಪ್‌ಫೇಕ್‌ ವಿಡಿಯೋ Viral.!

ಸೋನು ಗೌಡ ಉತ್ತರ ಕರ್ನಾಟಕದ 8 ವರ್ಷದ ಮಗುವನ್ನ ದತ್ತು ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ (Information cannot be shared). ಆದರೆ ಸೋನುಗೌಡ ವಿಡಿಯೋದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು.

ಹೀಗಾಗಿ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ (inquiry) ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ತಿಂಗಳುಗಳಿಂದ ಸೋನು ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ (lunch) ಹಾಕಿಸೋದು, ಮೂಗು ಚುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೋ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಇದನ್ನು ಓದಿ : Lokayukta : ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್.!

ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು.

ಮಗು ದತ್ತು ಸಂಬಂಧ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿತ್ತು.

spot_img
spot_img
spot_img
- Advertisment -spot_img