Saturday, July 27, 2024
spot_img
spot_img
spot_img
spot_img
spot_img
spot_img

ಲೋಕಸಭಾ ಚುನಾವಣೆ : ಕಾಂಗ್ರೆಸ್‌ ಪಕ್ಷದ 3ನೇ ಪಟ್ಟಿ ಬಿಡುಗಡೆ ; ಕರ್ನಾಟಕದವರೆಷ್ಟು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭಾ ಚುನಾವಣೆಗೆ ಈಗಾಗಲೇ 39 ಅಭ್ಯರ್ಥಿಗಳ ಮೊದಲ ಪಟ್ಟಿ ಮತ್ತು 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್​ ಪ್ರಕಟಿಸಿತ್ತು. ಒಟ್ಟು ಇದುವರೆಗೆ 82 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ಇಂದು 3ನೇ ಪಟ್ಟಿ ಬಿಡುಗಡೆಯಾಗಿದೆ.

ಈ ಪಟ್ಟಿಯಲ್ಲಿ ಒಟ್ಟು 134 ಅಭ್ಯರ್ಥಿಗಳ ಹೆಸರಿದ್ದು ಅದರಲ್ಲಿ ಕರ್ನಾಟಕದ 20 ಹೆಸರನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಕೆಳಗಿದೆ.

ಕರ್ನಾಟಕ ಅಭ್ಯರ್ಥಿಗಳ ಪಟ್ಟಿ :

► ಉಡುಪಿ : ಜಯಪ್ರಕಾಶ್‌ ಹೆಗ್ಡೆ.

► ಕೊಪ್ಪಳ : ರಾಘವೇಂದ್ರ ಹಿಟ್ನಾಳ್.

► ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್.

► ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ.

► ಚಿತ್ರದುರ್ಗ : ಚಂದ್ರಪ್ಪ.

► ಬೆಳಗಾವಿ : ಮೃಣಾಲ ಹೆಬ್ಬಾಳ್ಕರ್.

► ಬಾಗಲಕೋಟೆ : ಸಂಯುಕ್ತಾ ಪಾಟೀಲ್.

► ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ.

► ಹುಬ್ಬಳ್ಳಿ-ಧಾರವಾಡ : ವಿನೋದ್‌ ಅಸೂಟಿ.

► ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್.

► ಕಲಬುರಗಿ : ರಾಧಾಕೃಷ್ಣ ದೊಡಮನಿ.

► ದಕ್ಷಿಣ ಕನ್ನಡ : ಪದ್ಮರಾಜ್.

► ಬೀದರ್ : ಸಾಗರ್‌ ಖಂಡ್ರೆ.

► ರಾಯಚೂರು : ಕುಮಾರ್‌ ನಾಯ್ಕ್.

► ಮೈಸೂರು : ಎಂ.ಲಕ್ಷ್ಮಣ್.

► ಬೆಂಗಳೂರು ಉತ್ತರ ಕ್ಷೇತ್ರ : ಎಂ.ವಿ.ರಾಜೀವ್ ಗೌಡ.

►ಬೆಂಗಳೂರು ಸೆಂಟ್ರಲ್‌ ಕ್ಷೇತ್ರ : ಮನ್ಸೂರ್ ಅಲಿಖಾನ್‌

ಇದಕ್ಕೂ ಮೊದಲು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಡಬ್ಲ್ಯುಸಿ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಮತ್ತು ಸಮಿತಿಯ ಇತರ ಸದಸ್ಯರು ಭಾಗವಹಿಸಿದ್ದರು.

ಈ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ದೇಶವು ಬದಲಾವಣೆ ಬಯಸುತ್ತಿದೆ. ಸದ್ಯ ಕೇಂದ್ರ ಸರ್ಕಾರವು ಪ್ರಸ್ತುತಪಡಿಸುತ್ತಿರುವ ಗ್ಯಾರಂಟಿಗಳು 2004ರ ‘ಪ್ರಕಾಶಿಸುತ್ತಿದೆ ಭಾರತ’ ಘೋಷಣೆಯನ್ನೇ ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

spot_img
spot_img
- Advertisment -spot_img