ಜನಸ್ಪಂದನ ನ್ಯೂಸ್, ಗೋವಾ : ಉತ್ತರ ಗೋವಾದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾರ್ (Car) ಪಾರ್ಕ್ ಮಾಡಲಾಗಿದ್ದ ಸ್ಥಳದಲ್ಲಿ ಇದ್ದ ನಾಯಿ ತನ್ನ ಸ್ವಭಾವದಂತೆ ಅಚ್ಚರಿಯಲ್ಲಿದ್ದುದನ್ನು ತೋರಿಸುತ್ತದೆ.
ನಾಯಿ ಏನೋ ಹುಡುಕುತ್ತ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ಕಾರಿನ (Car) ಸಮೀಪ ಬರುತ್ತದೆ. ಮೊದಲು ಕಾರಿನ ಹೆಡ್‌ಲೈಟ್ ಕಡೆ ನೋಡುವ ಮೂಲಕ ನಾಯಿ ಏನೋ ಹುಡುಕುತ್ತಿದೆ ಎನ್ನುವುದು ಸ್ಪಷವಾಗುತ್ತದೆ. ಬಳಿಕ ಕಾರಿನ ಡ್‌ಲೈಟ್ ಭಾಗವನ್ನು ಕಚ್ಚಿ ಎಳೆಯಲು ಪ್ರಾರಂಭಿಸುತ್ತದೆ.
ಇದನ್ನು ಓದಿ : School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ಈ ವೇಳೆ ಹೆಡ್‌ಲೈಟ್ ಭಾಗವನ್ನು ಕಿತ್ತು ತೆಗೆಯುವ ಮೂಲಕ ನಾಯಿ ತನ್ನ ಹಲ್ಲಿನಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ತೋರಿಸಲು ಇಲ್ಲಿ ಹಿಂಜರಿಯಿಲ್ಲ. ಕಿತ್ತು ತೆಗೆದ ನಂತರ ಹೆಡ್‌ಲೈಟ್ ಭಾಗದಲ್ಲಿ ತನ್ನ ಮುಖ ತೂರಿಸಿ ಏನೋ ಹಿಡಿಲು ಪ್ರಯತ್ನಿಸಿದೆ. ಆದರೆ ಸಾದ್ಯವಾಗಲಿಲ್ಲ.
ಆದರಡ ಇಷ್ಟಕ್ಕೆ ಸುಮ್ಮನಾದದ ಈ ಶಕ್ತಿಶಾಲಿ ನಾಯಿ ಕಾರ್ (Car) ನ ಬಂಪರ್ ಅನ್ನು ಹಿಡಿದು ಎಳೆಯಲು ತನ್ನ ಶಕ್ತಿಯಲ್ಲಾ ಹಾಕುತ್ತದೆ. ತನ್ನ ಶಕ್ತಿ ಪ್ರದರ್ಶಿಸುತ್ತಾ ಕಚ್ಚಿ ಎಳೆಯುತ್ತ ಕಾರಿ ಬಂಪರ್‌ನ್ನು ಕೊನೆಗೆ ಎಳೆದು ಹಾಳು ಮಾಡುತ್ತದೆ.
ಕಾರಿನ (Car) ಹೆಡ್‌ಲೈಟ್ ಭಾಗ ಮತ್ತು ಬಂಪರ್ ಹಾಳು ಮಾಡಿ ಹುಡುಕಿದ್ದಾರೂ ಏನು ಗೊತ್ತೇ.? ನೋಡಿ ಈ ವಿಡಿಯೋ.
ಇದನ್ನು ಓದಿ : ಆಕಸ್ಮಿಕ Snake ಮೇಲೆ ಹರಿದ ಬೈಕ್ – ಮುಂದೆನಾಯ್ತು? ವಿಡಿಯೋ ನೋಡಿ.!
ವಿಡಿಯೋ :
https://twitter.com/i/status/1991069679545143486
ನಾಯಿ ಎಷ್ಟು ಶಕ್ತಿಶಾಲಿ ಹಾಗೂ ನಿರ್ಲಕ್ಷ್ಯರಹಿತವಾಗಿರಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜನರು ಈ ದೃಶ್ಯವನ್ನು ನೋಡಿ ನಗುತ್ತಾರೆ ಮತ್ತು ನಾಯಿ ಶಕ್ತಿಯ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾರ್ (Car) ಮಾಲೀಕ ಮಾತ್ರ .. .. ..!
ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.
ಸಂಕ್ಷಿಪ್ತ ಟಿಪ್ಪಣಿ :
ನಾಯಿಗಳು ಕೆಲವೇಳೆ ತಮ್ಮ ಉತ್ಸಾಹದಿಂದ ಎಂಥಾ ಕೃತ್ಯಗಳನ್ನು ಮಾಡಬಲ್ಲವೆಂದು ಈ ವಿಡಿಯೋ ಸ್ಪಷ್ಟಪಡಿಸುತ್ತದೆ. ಮನೋರಂಜನೆಯ ಜೊತೆಗೆ, ತಮ್ಮ ಸಿಟ್ಟನ್ನು ತೋರಿಸುವ ಈ ನಾಯಿ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ.
IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ಜನಸ್ಪಂದನ ನ್ಯೂಸ್, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
- ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
- ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
- ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
- ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
- ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
- ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
- ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
- “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
- ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
- Already Registered ನಲ್ಲಿ ಲಾಗಿನ್ ಮಾಡಿ
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
- ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







