Sunday, September 8, 2024
spot_img
spot_img
spot_img
spot_img
spot_img
spot_img
spot_img

2 ಮಕ್ಕಳ ತಂದೆಯಾಗಿರುವ lover ಗಾಗಿ ಭಾರತಕ್ಕೆ ಬಂದ ಪಾಕಿಸ್ತಾನದ ಚೆಲುವೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳು ಎರಡು ಮಕ್ಕಳಿರುವ ವ್ಯಕ್ತಿಯ ಪ್ರೇಮ ಪಾಶಕ್ಕೆ ಸಿಲುಕಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಘಟನೆ ನಡೆದಿದೆ.

25 ವರ್ಷದ ಮೆಹ್ವಿಶ್ ಎಂಬ ಯುವತಿ, ರಾಜಸ್ಥಾದ ಚೂರೂ ಜಿಲ್ಲೆಯ ನಿವಾಸಿಯಾಗಿರುವ ರೆಹಮಾನ್ ಎಂಬಾತನಿಗೋಸ್ಕರ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾಳೆ.

ಇದನ್ನು ಓದಿ : Special news : ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆಯಂತೆ ಈ ರಕ್ತದ ಗುಂಪು ಹೊಂದಿರುವವರಿಗೆ.!

ಮೆಹ್ವೀಶ್‌ ಮತ್ತು ರೆಹಮಾನ್‌ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದಾರೆ. ಈ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಪ್ರಿಯಕರ ರೆಹಮಾನ್‌ನನ್ನ ಹುಡುಕಿಕೊಂಡು ಬಂದಿರುವ ಯುವತಿ ಮೆಹ್ವೀಸ್ ಚೂರೂ ನಗರ ತಲುಪಿದ್ದಾಳೆ.

ಮೆಹ್ವಿಶ್ ಬರುತ್ತಿದ್ದಂತೆ ರೆಹಮಾನ್ ಪತ್ನಿ ಫರೀದಾ ಸ್ಥಳೀಯ ಪೊಲೀಸರಿಗೆ ಪಾಕಿಸ್ತಾನದ ಯುವತಿ ಬಂದಿರುವ ಮಾಹಿತಿಯನ್ನು ನೀಡಿದ್ದಾರೆ.

ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೆಹಮಾನ್ ಪತ್ನಿ, ಆಕೆಯ ಮೂಲದ ಬಗ್ಗೆ ಪತ್ತೆ ಮಾಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ : LIC ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ನಲ್ಲಿ ಜೂನಿಯರ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಗ್ರಾಮದ ಮುಖಂಡ ಜಂಗಶೇರ್ ಖಾನ್ ಎಂಬ ವ್ಯಕ್ತಿಯೇ ಅಟಾರಿ ಗಡಿಗೆ ತೆರಳಿ ಯುವತಿಯನ್ನು ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೆಲ್ವಿಶ್ ಮತ್ತು ರೆಹಮಾನ್ ಇಬ್ಬರಿಗೂ ಸೋಶಿಯಲ್ ಮೀಡಿಯಾ ಮೂಲಕ ಲವ್ವಲ್ಲಿ ಬಿದ್ದಿದ್ರು ಎಂದು ವರದಿ ತಿಳಿಸಿದೆ.

ಮಹ್ವೀಶ ಪಾಕಿಸ್ತಾನ ಗೂಢಚಾರಿ ಆಗಿರಬಹುದು ಎಂದು ರೆಹಮಾನ್ ಪತ್ನಿ ಫರೀದಾ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರೆಹಮಾನ್ ಕುವೈತ್‌ನಲ್ಲಿ (Kuwait) ಕೆಲಸ ಮಾಡಿಕೊಂಡಿದ್ದು, ಆತನ ಬಂದ ಬಳಿಕವಷ್ಟೇ ಸತ್ಯ ಏನೆಂಬುದು ಬಯಲಾಗಲಿದೆ. ಇತ್ತ ಪಾಕಿಸ್ತಾನದಿಂದ ಬಂದಿರೋ ಮೆಹ್ವಿಶ್ ಹಿನ್ನೆಲೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : BSNLಗೆ ಪೋರ್ಟ್ ಆಗ್ತೀರಾ.? ನಿಮ್ಮ ಸುತ್ತಮುತ್ತ ಟವರ್ ಇದೆಯಾ ಅಥವಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ.

ಇದೇ ರೀತಿ ಅಲ್ವರ ನಗರದ ಮಂಜು ಎಂಬಾಕೆ ಪಾಕಿಸ್ತಾನದ ಪಖ್ತೂನ್ ಪ್ರಾಂತ್ಯದ ಮೂಲಕ ನಸರೂಲ್ಲಾಹ ಎಂಬವರ ಮನೆ ಸೇರಿದ್ದಳು. ಧರ್ಮ ಬದಲಿಸಿಕೊಂಡು ಮದುವೆ ಸಹ ಆಗಿದ್ದಳು. ನಂತರ ಈಕೆಯ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಮಂಜು ದೆಹಲಿಗೆ ಶಿಫ್ಟ್ ಆಗಿದ್ದಳು. ಇದೀಗ ತನ್ನ ಪಾಕಿಸ್ತಾನದ ಪತಿ ಜೊತೆ ಅಮೆರಿಕಾದಲ್ಲಿ ನೆಲೆಸಲು ತಯಾರಿ ನಡೆಸುತ್ತಿದ್ದಾಳೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img