Thursday, April 24, 2025
spot_img
HomeNational Newsಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಬಂಧಿಸಿದ ಪಾಕ್‌ ಸೇನೆ.!
spot_img
spot_img
spot_img

ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಬಂಧಿಸಿದ ಪಾಕ್‌ ಸೇನೆ.!

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನವದೆಹಲಿ : ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಪಾಕ್‌ ಸೇನೆ ಬಂಧಿಸಇರುವ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ (Pahalgam) ನಲ್ಲಿ ನಡೆದ ಕ್ರೂರ ಕೃತ್ಯದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿದೆ.

ಇದನ್ನು ಓದಿ : Video : ಲಿಫ್ಟ್‌ನಲ್ಲಿ ಲಿಪ್ -‌ ಲಾಕ್ ಮಾಡಿದ ಪ್ರೇಮಿಗಳು ; ಛೀ ಅಂದ ನೆಟ್ಟಿಗರು.!

ಏತನ್ಮಧ್ಯೆ, ಪಂಜಾಬ್ ಗಡಿಯಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯನ್ನು ದಾಟಿದ BSF ಸೈನಿಕನನ್ನು ಪಾಕಿಸ್ತಾನದ ಗಡಿ ಭದ್ರತಾ ಪಡೆ (BSF) ರೇಂಜರ್‌ಗಳು ಬಂಧಿಸಿದ್ದಾರೆ.

ಭಾರತೀಯ ಗಡಿ ಭದ್ರತಾ ಪಡೆ (BSF) ಸೈನಿಕ ಪಿಕೆ ಸಿಂಗ್ ಅವರು ಬಿಎಸ್‌ಎಫ್ ಪೋಸ್ಟ್ ಜಲೋಕೆ ಡೋನಾ ಬಳಿಯ ಶೂನ್ಯ ರೇಖೆಯನ್ನು ಆಕಸ್ಮಿಕವಾಗಿ ದಾಟಿ ಪಾಕಿಸ್ತಾನಿ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಪಾಕಿಸ್ತಾನಿ ರೇಂಜರ್‌ಗಳು ಗಡಿಯಲ್ಲಿ ಅವರನ್ನು ಬಂಧಿಸಿದ್ದಾರೆ.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

ಪಾಕಿಸ್ತಾನಿ ಮಾಧ್ಯಮಗಳು ಸೈನಿಕನನ್ನು ಬಂಧಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿವೆ. ಏತನ್ಮಧ್ಯೆ, ಸೈನಿಕನನ್ನು ಬಿಡುಗಡೆ ಮಾಡಲು ಬಿಎಸ್‌ಎಫ್ ಮತ್ತು ಪಾಕಿಸ್ತಾನಿ ರೇಂಜರ್ಸ್ (Pakistani Rangers) ಅಧಿಕಾರಿಗಳ ನಡುವೆ ಸಭೆ ನಡೆಯುತ್ತಿದೆ.

ಬುಧವಾರ, ಏಪ್ರಿಲ್ 23 ರಂದು, ಪಂಜಾಬ್‌ನ ಫಿರೋಜ್‌ಪುರದಲ್ಲಿ ಕರ್ತವ್ಯದಲ್ಲಿರುವಾಗ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು (International border) ದಾಟಿದ ನಂತರ ಗಡಿ ಭದ್ರತಾ ಪಡೆ (BSF) ಜವಾನನನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ.

ಇದನ್ನು ಓದಿ : Video : ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ವೈದ್ಯ ವಿದ್ಯಾರ್ಥಿ.!

ಜವಾನನ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಧ್ವಜ ಸಭೆ ಕರೆಯಲಾಗಿದೆ ಎಂದು ಹಿರಿಯ BSF ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.

ಬಿಎಸ್‌ಎಫ್‌ನಲ್ಲಿ ಕಾನ್‌ಸ್ಟೆಬಲ್ (Constable) ಆಗಿರುವ ಪಿ.ಕೆ.ಸಿಂಗ್ (P.K. Singh) ಅವರನ್ನು ಬಂಧಿಸಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಮಿಲಿಟರಿ ಉಪಕರಣಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ. ಅವರು ಈಗ ಪಾಕಿಸ್ತಾನಿ ಸೇನೆಯ ವಶದಲ್ಲಿದ್ದಾರೆ.

ಇದನ್ನು ಓದಿ : Health : ಕಪ್ಪು ಕಲೆ ಇರುವ ಈರುಳ್ಳಿಯನ್ನು ತಿನ್ನಬಹುದೇ.?

ಈ ಘಟನೆಯನ್ನು ಖಂಡಿಸಿರುವ ಭಾರತ ತಕ್ಷಣವೇ ಯೋಧನನ್ನ ಬಿಡುಗಡೆ ಮಾಡಲು ಎಚ್ಚರಿಕೆ ನೀಡಿದೆ. ಈ ಬಗ್ಗೆ ಪಾಕಿಸ್ತಾನ ರೇಂಜರ್ಸ್​ ಮುಖ್ಯಸ್ಥರ ಜೊತೆ BSF ಮುಖ್ಯಸ್ಥರು ತುರ್ತು ಸಭೆ ನಡೆಸಿದ್ದಾರೆ. ತಕ್ಷಣವೇ ಭಾರತೀಯ ಯೋಧನನ್ನ ಬಿಡುವಂತೆ ಭಾರತ ತಾಕೀತು ಮಾಡಿದೆ.

ಹಿಂದಿನ ಸುದ್ದಿ : Health : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಆಹಾರವು ಮಾನವನ ಮೂಲಭೂತ ಅಗತ್ಯ. ಆದರೆ ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.

ನಾವು ಸರಿಯಾದ ವೇಳೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ವಹಿಸಬೇಕು.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ಅತಿಯಾದರೆ ಅಮೃತವು ವಿಷ (If too much nectar is poison) ಎನ್ನುವ ಗಾದೆ ಮಾತಿನಂತೆ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಈ ಹತ್ತು ಆಹಾರ ಪದಾರ್ಥಗಳನ್ನು ಅತಿಯಾಗಿ ಅಥವಾ ಹೆಚ್ಚು ಸೇವಿಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.

ಹಾಗಾದರೆ ಆ ಹತ್ತು ಆಹಾರ ಪದಾರ್ಥಗಳು ಯಾವುವು ಅಂತ ತಿಳಿಯೋಣ

* ಉಪ್ಪಿಗಿಂತ (Salt) ರುಚಿಯಿಲ್ಲ ಎಂದು ಉಪ್ಪನ್ನು ಹೆಚ್ಚು ಸೇವಿಸಿದರೆ ಅದರಿಂದ ಅನಾರೋಗ್ಯವೇ ಜಾಸ್ತಿ. ಉಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನು ಓದಿ : Video : ವಾಷಿಂಗ್ ಮಷಿನ್‍ನೊಳಗೆ ಕಲ್ಲು ಹಾಕಿದ ಯುವಕ ; ಆಮೇಲೆನಾಯ್ತು ಗೊತ್ತಾ?

* ಆಲೂಗಡ್ಡೆ ಚಿಪ್ಸ್ ನಂತಹ (Potato chips) ಹಾನಿಕಾರಕ ತಿಂಡಿಗಳನ್ನು ಅತಿಯಾಗಿ ತಿನ್ನುವುದರಿಂದ ಹೆಚ್ಚಿನ ಮಟ್ಟದ ಕೊಬ್ಬಿನ ಅಂಶ ಶೇಖರಣೆಗೊಂಡು (Fat storage) ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಉಂಟಾಗಲು ಕಾರಣವಾಗಬಹುದು.

* ಬೆಳಿಗ್ಗೆ ಎದ್ದು ಕುಡಿಯುವ ಕಾಫಿಯನ್ನು (Coffee) ಪದೇ ಪದೇ ಸೇವಿಸಬಾರದು ಎಂದು WHO ತಿಳಿಸಿದೆ. ಕಾಫಿಯಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ಅಧಿಕ ರಕ್ತದೊತ್ತಡ, ತಲೆನೋವು, ಖಿನ್ನತೆ ಮತ್ತು ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕಾಫಿಯನ್ನು ಸಹ ಮಿತಿಯಾಗಿ ಸೇವಿಸಬೇಕು.

ಇದನ್ನು ಓದಿ : Health : ಕಪ್ಪು ಕಲೆ ಇರುವ ಈರುಳ್ಳಿಯನ್ನು ತಿನ್ನಬಹುದೇ.?

* ಕರಿದ ಆಹಾರಗಳು (Fried foods) ಕ್ಯಾಲೋರಿಗಳು, ಉಪ್ಪು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಇದರಿಂದ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು.

* ತಾಳೆ ಎಣ್ಣೆ (Palm oil) ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಕೊಲೆಸ್ಟ್ರಾಲ್ (High cholesterol) ದೀರ್ಘಕಾಲೀನ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

* ಪಿಜ್ಜಾ ಮತ್ತು ಬರ್ಗರ್ ಗಳನ್ನು (Pizza and Burger) ಸಹ ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು. ಅಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

* ಚೀಸ್ (Cheese) ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಗಳು ಉಂಟಾಗಬಹುದು. ಇದು ಬೊಜ್ಜಿಗೆ ಕಾರಣವಾಗುವುದರಿಂದ ಇವುಗಳನ್ನು ತಪ್ಪಿಸಬೇಕು.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

* ಸಕ್ಕರೆ (Sugar) ಬೊಜ್ಜಿಗೆ ಕಾರಣವಾಗಬಹುದು. ಅತಿಯಾದ ಸಕ್ಕರೆಯ ಬಳಕೆಯಿಂದ ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು. ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಂತಲ್ಲ. ಸ್ವಲ್ಪ ತೆಗೆದುಕೊಂಡರೆ ಸಾಕು.

* ಪಾಸ್ತಾ ಮತ್ತು ಬ್ರೆಡ್ ನಲ್ಲಿರುವ (Pasta and Bread) ಪದಾರ್ಥಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಅವು ಇನ್ಸುಲಿನ್ ಮಟ್ಟವನ್ನು ಸಹ ಹೆಚ್ಚಿಸುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
- Advertisement -
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments