Monday, July 14, 2025

Janaspandhan News

Home Blog Page 41

ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!

ಜನಸ್ಪಂದನ ನ್ಯೂಸ್, ರಾಮನಗರ : ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ (Rikki Rai) ಮೇಲೆ ದುಷ್ಕರ್ಮಿಗಳು ಫೈರಿಂಗ್ (Firing) ಮಾಡಿರುವಂತಹ ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ. ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು.

ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್​ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ ಸೀಟ್​ನಲ್ಲಿದ್ದ ರಿಕ್ಕಿ ರೈಗೆ ಮೂಗು, ಕೈಗೆ ಗುಂಡು ತಾಕಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ : Lion : ರಣ ಹದ್ದುಗಳ ಜೊತೆ ಕಾಡಿನ ರಾಜನ ಕಾದಾಟ ; ವಿಡಿಯೋ ವೈರಲ್‌.!

2 ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ರಿಕ್ಕಿ ರಿಯಲ್ ಎಸ್ಟೇಟ್ ಬಿಸಿನೆಸ್​​​ನಲ್ಲಿ ಆಕ್ಟಿವ್ ಆಗಿದ್ದರು. ನಿನ್ನೆ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತನ್ನ ಫಾರ್ಚ್ಯೂನರ್​ ಕಾರಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರ್ತಿದ್ದಂತೆ ಗೇಟ್​​ ಬಳಿ ದುಷ್ಕರ್ಮಿ, ಎರಡು ಸುತ್ತಿನ ಫೈರಿಂಗ್​ ಮಾಡಿದ್ದಾನೆ. 70 ಎಂಎಂ ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ಮಾಡಲಾಗಿದೆ.

ಕಾರು ಡ್ರೈವ್​ ಮಾಡದೇ ಸೇಫ್​ ಆದ ರಿಕ್ಕಿ ರೈ :

ರಿಕ್ಕಿ ರೈ ಪ್ರತಿ ಬಾರಿ ತಾವೇ ಕಾರು ಡ್ರೈವ್​ ಮಾಡುತ್ತಿದ್ದರು. ಹೀಗಾಗಿ ಡ್ರೈವರ್​​ ಸೀಟ್​ ಟಾರ್ಗೆಟ್​ ಮಾಡಿ ಅಟ್ಯಾಕ್​ ಮಾಡಲಾಗಿತ್ತು. ಆದರೆ ತಡರಾತ್ರಿ ಅದ್ಯಾವ ಕಾರಣವೋ ಗೊತ್ತಿಲ್ಲ ತನ್ನ ಬದಲು ಡ್ರೈವರ್​ಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ, ಹಿಂಬದಿ ಸೀಟ್​ನಲ್ಲಿ ಗನ್​ ಮ್ಯಾನ್​ ಜತೆ ಕುಳಿತಿದ್ದರು. ಹೀಗಾಗಿ ಫೈರಿಂಗ್​ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಮುಂದೆ ಬಗ್ಗಿದ್ದು, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.​

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ಕಾಂಪೌಂಡ್ ರಂಧ್ರದಿಂದ ನಡೆದಿತ್ತು ಗುಂಡಿನ ದಾಳಿ :

ಖಾಸಗಿಯವರಿಗೆ ಸೇರಿದ, ರಸ್ತೆ ಪಕ್ಕದ ಕಾಂಪೌಡ್ ಗ್ಯಾಪ್​ ಮಧ್ಯೆ ಬಚ್ಚಿಟ್ಟುಕೊಂಡು ದುಷ್ಕರ್ಮಿ ದಾಳಿ ಮಾಡಿದ್ದಾನೆ. ಅಂದರೆ ಕಾರು ಬೆಂಗಳೂರಿಗೆ ಹೊರಡ್ತಿರಬೇಕಾದರೆ ಬಲಗಡೆ ಭಾಗದಲ್ಲಿ ಒಂದು ಕಾಂಪೌಂಡ್​ ಗ್ಯಾಪ್​ ಮಧ್ಯೆ ಅವಿತುಕೊಂಡು, ಅದರ ಒಂದು ರಂಧ್ರದಿಂದಲೇ ಫೈರಿಂಗ್​ ಆಗಿದೆ.

ಬಿಡದಿ ಮನೆಯಿಂದ KA 53 MC 7128 ನಂಬರ್​​​ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್​ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್​ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70mm ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ನಡೆಸಲಾಗಿದೆ. ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್​ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್​ನ ಎಡಭಾಗದ ಡೋರ್​ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಜನರನ್ನು ರಕ್ಷಸಬೇಕಾದ ಪೊಲೀಸರೇ ದಾರಿ ತಪ್ಪುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಕುಡಿದ ಮತ್ತಿನಲ್ಲಿ ರೈಫಲ್ ಹಿಡಿದುಕೊಂಡು ರಸ್ತೆಯಲ್ಲಿ ಒದ್ದಾಡುತ್ತ ರಸ್ತೆಯಲ್ಲಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : ಸಚಿವ ಪ್ರಿಯಂಕ ಖರ್ಗೆ ಕೋಟೆಯಲ್ಲಿ ಬಿವೈವಿ ಅಬ್ಬರ.!

ಇದನ್ನು ಗಮನಿಸಿದ ಸ್ಥಳೀಯರು ಮತ್ತು ವಾಹನ ಸವಾರರು ಕಾನ್‌ಸ್ಟೆಬಲ್‌ನನ್ನು ಮೇಲಕ್ಕೆತ್ತಿ ಪಕ್ಕದಲ್ಲಿ ಕೂರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದದ್ದು ಎಂದು ತಿಳಿದುಬಂದಿದೆ. ಪೂರ್ಣ ವಿವರಗಳನ್ನು ನೋಡುವುದಾದರೆ.

ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮದ್ಯದ ಅಮಲಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾರೆ. ರೈಫಲ್ ಹಿಡಿದುಕೊಂಡಿದ್ದ ಪೊಲೀಸರನ್ನು ನೋಡಿದ ಜನರು ಜೀವ ಭಯದಲ್ಲಿದ್ದರು. ಘಟನೆಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಸರ್ವಿಸ್ ರೈಫಲ್ ಹಿಡಿದುಕೊಂಡು ಮದ್ಯದ ಅಮಲಿನಲ್ಲಿ ಜನನಿಬಿಡ ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ.. ಅವನಿಗೆ ಎದ್ದೇಳಲು ಸಹ ಕಷ್ಟವಾಗುತ್ತಿತ್ತು. ಆಗ ತಕ್ಷಣ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆತನಿಂದ ರೈಫಲ್‌ ತೆಗೆದುಕೊಂಡು ರಸ್ತೆಯ ಪಕ್ಕಕ್ಕೆ ಕರೆದೊಯ್ದರು.. ವಿಡಿಯೋ ಮಾತ್ರ ಟ್ರೆಂಡ್‌ ಆಗಿದೆ.

ನೋಡಿ ವಿಡಿಯೋ :

ಯಾವ ಯಾವ ಕಾಯಿಲೆಗಳಿಗೆ `paracetamol’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ಯಾರೆಸಿಟಮಾಲ್ (paracetamol) ಸೇವನೆಯು ಸಾಮಾಜಿಕ ಮಾಧ್ಯಮದ ವಿಷಯವಾಗಿದೆ, ಇತ್ತೀಚೆಗೆ ಅಮೆರಿಕ ಮೂಲದ ವೈದ್ಯರೊಬ್ಬರು ಭಾರತೀಯರು ನೋವು ನಿವಾರಕವನ್ನು “ಕ್ಯಾಂಡಿಯಂತೆ” ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.

COVID-19 ಸಾಂಕ್ರಾಮಿಕ ರೋಗದಿಂದ, ಡೋಲೋ-650 ಎಂದೂ ಕರೆಯಲ್ಪಡುವ ಪ್ಯಾರೆಸಿಟಮಾಲ್, ಹೆಚ್ಚಿನ ಔಷಧಿ ಕ್ಯಾಬಿನೆಟ್‌ಗಳಲ್ಲಿ ಮನೆಮಾತಾಗಿದೆ ಮತ್ತು ಜ್ವರ ಮತ್ತು ದೇಹದ ನೋವುಗಳ ವಿರುದ್ಧ ರಕ್ಷಣೆಯ ಮೊದಲ ಸಾಲಿನೆಂದು ಪರಿಗಣಿಸಲಾಗಿದೆ.‌

ಇದನ್ನು ಓದಿ : Astrology : ಎಪ್ರಿಲ್‌ 21 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹೆಚ್ಚಾಗಿ, ಪ್ಯಾರೆಸಿಟಮಾಲ್ ಅನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಅಥವಾ ಸಮಾಲೋಚನೆ ಇಲ್ಲದೆ, ದಿನನಿತ್ಯದ ಪರಿಹಾರವಾಗಿ ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ಜನರು ಇದನ್ನು ನಿರುಪದ್ರವವೆಂದು ಪರಿಗಣಿಸಿದರೂ, ವೈದ್ಯರು ಪದೇ ಪದೇ ಓವರ್-ದಿ-ಕೌಂಟರ್ ಔಷಧಿಗಳ ವಿವೇಚನೆಯಿಲ್ಲದ ಮತ್ತು ಆಗಾಗ್ಗೆ ಬಳಕೆಯು ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ – ವಿಶೇಷವಾಗಿ ನಿಮ್ಮ ಯಕೃತ್ತಿನ ಮೇಲೆ.

ಇತ್ತೀಚೆಗೆ, ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಆರೋಗ್ಯ ಶಿಕ್ಷಕ ಡಾ. ಪಳನಿಯಪ್ಪನ್ ಮಾಣಿಕ್ಕಮ್, “ಭಾರತೀಯರು ಕ್ಯಾಡ್ಬರಿ ಜೆಮ್ಸ್‌ನಂತೆ ಡೋಲೋ 650 ಅನ್ನು ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದರು. ಅವರ ಪೋಸ್ಟ್ ದೇಶಾದ್ಯಂತ ಸಾವಿರಾರು ಪ್ರತಿಕ್ರಿಯೆಗಳನ್ನು ತಂದಿತು – ಅನೇಕರು ತಮ್ಮದೇ ಆದ ಡೋಲೋ ಬಳಕೆಯನ್ನು ಬರೆದಿದ್ದಾರೆ. ಅನೇಕ ಬಳಕೆದಾರರು ವೈದ್ಯರೊಂದಿಗೆ ಒಪ್ಪಿಕೊಂಡರೂ, ಇತರರು ಔಷಧದ ದುಷ್ಪರಿಣಾಮಗಳನ್ನು ಗಮನಿಸಿದರು.

ಇದನ್ನು ಓದಿ : Lion : ರಣ ಹದ್ದುಗಳ ಜೊತೆ ಕಾಡಿನ ರಾಜನ ಕಾದಾಟ ; ವಿಡಿಯೋ ವೈರಲ್‌.!

ಪ್ಯಾರೆಸಿಟಮಾಲ್ ಎಂದರೇನು?

ಪ್ಯಾರೆಸಿಟಮಾಲ್ ಒಂದು ನೋವು ನಿವಾರಕ ಮತ್ತು ಜ್ವರ ನಿವಾರಕ ಔಷಧವಾಗಿದ್ದು, ಇದನ್ನು ಸೌಮ್ಯದಿಂದ ಮಧ್ಯಮ ನೋವು ಮತ್ತು ಜ್ವರವನ್ನು ತಾತ್ಕಾಲಿಕವಾಗಿ ನಿವಾರಿಸಲು ಬಳಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಶೀತ ಮತ್ತು ಜ್ವರ ಔಷಧಿಗಳಲ್ಲಿ ಒಂದು ಘಟಕಾಂಶವಾಗಿ ಸೇರಿಸಲಾಗುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಾಪಕವಾಗಿ ಬಳಸಲಾಗುವ ಟೈಲೆನಾಲ್‌ನಂತೆಯೇ ಇರುತ್ತದೆ.

ತಜ್ಞರ ಪ್ರಕಾರ, 1878 ರಲ್ಲಿ ಮೊದಲು ತಯಾರಿಸಲಾದ ಈ ಔಷಧವು ನಿಮ್ಮ ಮೆದುಳಿನಲ್ಲಿ ರಾಸಾಯನಿಕ ಸಂದೇಶವಾಹಕಗಳನ್ನು ನಿರ್ಬಂಧಿಸುವ ಮೂಲಕ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವ ರಾಸಾಯನಿಕ ಸಂದೇಶವಾಹಕರ ಮೇಲೆ ಪರಿಣಾಮ ಬೀರುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಅನಾರೋಗ್ಯ ಮತ್ತು ಗಾಯವನ್ನು ನಿಭಾಯಿಸಲು ನಿಮ್ಮ ದೇಹವು ಉತ್ಪಾದಿಸುವ ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ.

ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್

ನೀವು ಯಾವ ಪರಿಸ್ಥಿತಿಗಳಿಗೆ ಪ್ಯಾರೆಸಿಟಮಾಲ್ ಅನ್ನು ಬಳಸಬಹುದು?

  • ತಲೆನೋವು.
  • ಉರಿಯೂತ ತಲೆನೋವು.
  • ಮೈಗ್ರೇನ್.
  • ಬೆನ್ನುನೋವು.
  • ಸಂಧಿವಾತ ಮತ್ತು ಸ್ನಾಯು ನೋವು.
  • ಸಂಧಿವಾತ ನೋವು ಮತ್ತು ಉರಿಯೂತ.
  • ಹಲ್ಲುನೋವು.
  • ಅವಧಿ ನೋವು.
  • ಶೀತ ಮತ್ತು ಜ್ವರ ಲಕ್ಷಣಗಳು.
  • ಗಂಟಲು ನೋವು.
  • ಸೈನಸ್ ನೋವು.
  • ಶಸ್ತ್ರಚಿಕಿತ್ಸೆ ನಂತರದ ನೋವು.
  • ಜ್ವರ.

ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!

ಎಷ್ಟು ಪ್ಯಾರೆಸಿಟಮಾಲ್ ಡೋಸೇಜ್ ಅನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ?

ತಜ್ಞರ ಪ್ರಕಾರ, ಸರಿಯಾಗಿ ಬಳಸಿದಾಗ ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಪ್ಯಾರಸಿಟಮಾಲ್ ಅನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇದು ಉರಿಯೂತ ನಿವಾರಕ ಔಷಧವಲ್ಲ. ಇದು ಸಾಮಾನ್ಯವಾಗಿ 500 ಮಿಗ್ರಾಂ ಮತ್ತು 650 ಮಿಗ್ರಾಂ ಮಾತ್ರೆಗಳು ಮತ್ತು 1000 ಮಿಗ್ರಾಂ ಚುಚ್ಚುಮದ್ದಿನ ರೂಪಗಳಲ್ಲಿ ಲಭ್ಯವಿದೆ. ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ, ವಯಸ್ಕರಿಗೆ ಗರಿಷ್ಠ ಅನುಮತಿಸುವ ಡೋಸ್ ದಿನಕ್ಕೆ 4 ಗ್ರಾಂ (ಅಥವಾ 4000 ಮಿಗ್ರಾಂ).

ಇದರರ್ಥ ನೀವು 500 ಮಿಗ್ರಾಂ ಮಾತ್ರೆಗಳನ್ನು ಶಿಫಾರಸು ಮಾಡಿದ್ದರೆ, ನೀವು 24 ಗಂಟೆಗಳ ಅವಧಿಯಲ್ಲಿ ಎಂಟು ಮಾತ್ರೆಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು, ಡೋಸೇಜ್‌ಗಳ ನಡುವೆ ಕನಿಷ್ಠ ನಾಲ್ಕು ಗಂಟೆಗಳ ಮಧ್ಯಂತರದೊಂದಿಗೆ. 10 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ದಿನಕ್ಕೆ ನಾಲ್ಕು ಬಾರಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ನೀಡಬೇಕು. ಕಿರಿಯ ಮಕ್ಕಳಿಗೆ, ವೈದ್ಯರು ಈ ಕೆಳಗಿನ ಮುನ್ನೆಚ್ಚರಿಕೆಗಳೊಂದಿಗೆ ಪ್ಯಾರಸಿಟಮಾಲ್ ಅನ್ನು ಅಮಾನತು ರೂಪದಲ್ಲಿ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ:

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ನೀವು ಪ್ಯಾರಸಿಟಮಾಲ್ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಏನು ಮಾಡಬೇಕು?

ನೀವು ಅಥವಾ ನಿಮ್ಮ ಮಗು ಹೆಚ್ಚು ಪ್ಯಾರಸಿಟಮಾಲ್ ಅನ್ನು ಸೇವಿಸಿದರೆ, ನೀವು ಚೆನ್ನಾಗಿದ್ದರೂ ಸಹ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಪ್ಯಾರಸಿಟಮಾಲ್ ವಿಳಂಬ ಮತ್ತು ಗಂಭೀರ ಯಕೃತ್ತಿನ ಹಾನಿಯನ್ನುಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮೊದಲ 24 ಗಂಟೆಗಳಲ್ಲಿ ಮಿತಿಮೀರಿದ ಸೇವನೆಯ ಯಾವುದೇ ಲಕ್ಷಣಗಳು ಇಲ್ಲದಿರಬಹುದು ಆದರೆ ನೀವು ಬಿಳಿಚುವಿಕೆ, ವಾಕರಿಕೆ, ಬೆವರುವುದು, ವಾಂತಿ, ಹಸಿವಿನ ನಷ್ಟ ಮತ್ತು ಹೊಟ್ಟೆ ನೋವನ್ನು ಅನುಭವಿಸಬಹುದು. (ಏಜೇನ್ಸಿಸ್)

RCB vs Panjab Kings ನಡುವೆ ನಾಳೆ ಮತ್ತೆ ಪಂದ್ಯ.!

ಜನಸ್ಪಂದನ ನ್ಯೂಸ್, ಕ್ರಿಕೆಟ್ : ಇಂಡಿಯನ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು 5 ವಿಕೆಟ್​ಗಳಿಂದ ಮಣಿಸುವಲ್ಲಿ ಶ್ರೇಯಸ್ ಅಯ್ಯರ್ ಪಡೆ ಯಶಸ್ವಿಯಾಗಿದೆ.
ಈ ಮ್ಯಾಚ್​ನೊಂದಿಗೆ ಉಭಯ ತಂಡಗಳು ಐಪಿಎಲ್​ನ ಮೊದಲಾರ್ಥ ಪೂರ್ಣಗೊಳಿಸಿದೆ. ಇದೀಗ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅದು ಕೂಡ ನಾಳೆ (ಏಪ್ರಿಲ್ 20) ಎಂಬುದು ವಿಶೇಷ.

ಐಪಿಎಲ್​ ಮ್ಯಾನೇಜ್ಮೆಂಟ್ ರೂಪಿಸಿರುವ ವೇಳಾಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ನಿಗದಿ ಮಾಡಲಾಗಿದೆ. ಅದರಂತೆ ಉಭಯ ತಂಡಗಳು ಭಾನುವಾರ ಮತ್ತೆ ಮುಖಾಮುಖಿಯಾಗಬೇಕಿದೆ.

ಇದನ್ನು ಓದಿ : ಕಾರಿಗೆ ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ.!

ಪಂದ್ಯ ಎಲ್ಲಿ, ಎಷ್ಟು ಗಂಟೆಗೆ?

ಈ ಪಂದ್ಯವು ಪಂಜಾಬ್ ಕಿಂಗ್ಸ್ ತಂಡದ ತವರು ಮೈದಾನದಲ್ಲಿ ನಡೆಯಲಿದೆ. ಅಂದರೆ ಚಂಡೀಗಢ್​ನ ಮುಲ್ಲನ್​ಪುರ್ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಲಿದೆ.

ಏಪ್ರಿಲ್ 20 ರಂದು, ಭಾನುವಾರ ಸಂಜೆ 3.30 ಕ್ಕೆ ಈ ಮ್ಯಾಚ್ ಶುರುವಾಗಲಿದ್ದು, ಇದಕ್ಕಾಗಿ ಉಭಯ ತಂಡಗಳು ಶನಿವಾರ ಬೆಂಗಳೂರಿನಿಂದ ಚಂಡೀಗಢ್​ನತ್ತ ಪ್ರಯಾಣ ಬೆಳೆಸಲಿದೆ. ಅಂದರೆ ಉಭಯ ತಂಡಗಳ ನಡುವಣ ಮುಖಾಮುಖಿಗೆ ಕೇವಲ ಒಂದು ದಿನಗಳ ಬಿಡುವು ಮಾತ್ರ ಇದೆ.

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ಇತ್ತ ಕಳೆದ ಪಂದ್ಯದಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಳಿನ (ಏ.20) ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ಪಂಜಾಬ್ ಪಡೆ ಜಯಭೇರಿ:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಮುಖಾಮುಖಿಯಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಮಳೆಯ ಕಾರಣ 14 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಅದರಲ್ಲೂ ಕೇವಲ 63 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸ್ಪೋಟಕ ಇನಿಂಗ್ಸ್ ಆಡಿದ ಟಿಮ್ ಡೇವಿಡ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಮೂಲಕ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.

ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 12.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಬಾರಿಸಿ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಮೊದಲಾರ್ಥವನ್ನು ಜಯದೊಂದಿಗೆ ಅಂತ್ಯಗೊಳಿಸಿದೆ. ಇದೀಗ ಭಾನುವಾರ ನಡೆಯಲಿರುವ ದ್ವಿತೀಯಾರ್ಧ ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಬೇಕಿದೆ.

ಕಾರಿಗೆ ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ (Uttar Pradesh) ಲಲಿತಪುರದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಬಸ್ಸಿನಿಂದ ಇಳಿದು ರಸ್ತೆ ದಾಟಲು ಓಡುತ್ತಿದ್ದ ಯುವಕನಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಆತ ಬಹುದೂರ ಹಾರಿ ಬಿದ್ದಿದ್ದಾನೆ.

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ಬಸ್ ಅಡ್ಡಬಂದಿದ್ದರಿಂದ ವೇಗವಾಗಿ ಬರುತ್ತಿದ್ದ ಕಾರು ಸಮೀಪಿಸುತ್ತಿರುವುದನ್ನು ಗಮನಿಸದೆ ಮುಂದೆ ಹೋದ ಆತ ಕಾರು ಡಿಕ್ಕಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದ್ದಾನೆ.

Kharge : ಸಚಿವ ಪ್ರಿಯಾಂಕ್ ಖರ್ಗೆ ಕೋಟೆಯಲ್ಲಿ ಬಿವೈವಿ ಅಬ್ಬರ.!

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿಯಲ್ಲಿ ಆದ್ಯಾರು ರಾಜಕೀಯ ಮಾಡುತ್ತಾರೆ. ನಾನು ನೋಡಿಯೇ ಬಿಡುತ್ತೇನೆ. ನಮ್ಮ ಕಾರ್ಯಕರ್ತರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಾನು ನಿಮ್ಮ ಹಿಂದಿದ್ದೇನೆ, ಬಿಜೆಪಿ ಪಕ್ಷವೂ ಇದೆ. ಇಲ್ಲಿ ಯಾರು ಯಾರಿಗೂ ಹೆದರುವ ಪ್ರಶ್ನೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Kharge) ಕೋಟೆಯಲ್ಲಿ ಗುಡುಗಿದ್ದಾರೆ. ಜೊತೆಗೆ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಭರವಸೆ ಕೊಟ್ಟಿದ್ದರೂ ಆದರೆ, ಯಾವುದನ್ನೂ ಙರವಸೆ ಈಡೇರಿಸಿಲ್ಲ. ಸಿದ್ದರಾಮಯ್ನವರು ಕುರ್ಚಿ ಮೇಲೆ ಕುಳಿತಾಗ ಎಲ್ಲವೂ ಮರೆತಿದ್ದಾರೆ. ರಾಜ್ಯದ ಜನರನ್ಮು ಬೀಕ್ಷುಕರಂತೆ ನೋಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದವೂ ವಾಗ್ದಾಳಿ ನಡೆಸಿದರು.

ಇದನ್ನು ಓದಿ : Lion : ರಣ ಹದ್ದುಗಳ ಜೊತೆ ಕಾಡಿನ ರಾಜನ ಕಾದಾಟ ; ವಿಡಿಯೋ ವೈರಲ್‌.!

ಮಹಿಳೆಯರಿಗೆ ಬಸ್ ಫ್ರೀ ಅಂತ ಹೇಳ್ತಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಬಸ್ ಗಳೇ ಇಲ್ಲ. ಇದಲ್ಲದೇ ಇವರು ಆರೂವರೇ ಸಾವಿರ ಕೋಟಿ ರೂ ಕೆಎಸ್ ಆರ್ ಟಿಸಿಗೆ ಕೊಡಬೇಕು. ಅದು ಕೊಡಲು ಆಗುತ್ತಿಲ್ಲ. ಮೊನ್ನೆ ಕಲಬುರಗಿಯಲ್ಲಿ ಉದ್ಯೋಗ ಮೇಳ ಮಾಡಿದ್ರು. ಕೋಟ್ಯಾಂತರ ರೂ ಖರ್ಚು ಮಾಡಿ,

1200 ಉದ್ಯೋಗ ಕೊಟ್ಟಿದ್ದಾರೆ. ಇದು ಅವರ ಸಾಧನೆ ನೋಡಿ ಎಂದು ವ್ಯಂಗ್ಯವಾಡಿದರು.

ಪ್ರತಿನಿತ್ಯ ಬೆಲೆ ಏರಿಕೆ ಮಾಡ್ತಿದ್ದಾರೆ. ಒಂದು ಕೈಯಿಂದ ಉಚಿತ ಕೊಟ್ಟು ಬೆಲೆ ಏರಿಕೆಯಿಂದ ದುಪ್ಪಟ್ಟು ಕಸಿದುಕೊಳ್ಳುತ್ತಿದ್ದಾರೆ ಎಂದು ಬೆಲೆ ಏರಿಕೆ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.

ಜೀವಕ್ಕೆ ಹತ್ತು ಲಕ್ಚ ಬೆಲೆ ಕಟ್ಟುತ್ತಿದ್ದಾರೆ ಎಂದ ಅವರು ಕಲಬುರಗಿ ಯಲ್ಲಿ ಮೂರ್ಖ, ನಾಲಾಯಕ ರಾಜಕಾರಣಿಗಳಿದ್ದಾರೆ.

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ದಲಿತರ ಓಟ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿಜವಾಗ್ಲೂ ಸಚಿವ ಪ್ರಿಯಾಂಕ್ ಖರ್ಗೆಗೆ ದಲಿತ ಪರ ಕಾಳಜಿ ಇಲ್ಲ ಎಂದರು.

ರಾಜ್ಯದ ಮುಖ್ಯಮಂತ್ರಿ ಸ್ಥಾನದ ಗೌರವ ಸಿದ್ದರಾಮಯ್ಯ ಕಳೆದಿದ್ದಾರೆ. ವೀರಶೈವ ಲಿಂಗಾಯತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಿರಾ ಎಂದರು.

ಕಲಬುರಗಿ ಬಿಜೆಪಿ ನಾಯಕರಿಗೆ ಬುದ್ದಿ ಮಾತು ಹೇಳಿದ ವಿಜಯೇಂದ್ರ, ಚುನಾವಣೆಗೆ ಹೊಂದಾಣಿಕೆ ರಾಜಕಾರಣಿ ಮಾಡಬಾರದು. ಎಲ್ಲರೂ ಸವಾಲಾಗಿ ಸ್ವೀಕರಿಸಬೇಕು. ನಾನಿದ್ದೆನೆ. ಕಲಬುರಗಿಯಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ ಎಂದು ಧೈರ್ಯ ತುಂಬಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ನಿನೇನು? ಅಭಿವೃದ್ಧಿ ಮಾಡಿದ್ದಿ ತೋರಿಸು ಎಂದು ಪ್ರಶ್ನೆ ಮಾಡಿದರು.

Lion : ರಣ ಹದ್ದುಗಳ ಜೊತೆ ಕಾಡಿನ ರಾಜನ ಕಾದಾಟ ; ವಿಡಿಯೋ ವೈರಲ್‌.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಕಾಡು ಪ್ರಾಣಿಗಳ (Ex: Lion) ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ರಣಹದ್ದು, ಕಾಡಿನ ರಾಜ ಸಿಂಹದ ಮೇಲೆಯೇ ದಾಳಿ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!

ಸಿಂಹ (Lion) ಸುಮ್ಮನೆ ಯಾವ ಪ್ರಾಣಿಯ ಮೇಲೂ ದಾಳಿ ಮಾಡುವುದಿಲ್ಲ. ಆಹಾರ ಬೇಕಾದಾಗ ಮಾತ್ರ ಬೇಟೆಯಾಡಿ ತಿನ್ನುವ ಸ್ವಭಾವ ಸಿಂಹ ಹೊಂದಿದೆ.

ಆದರೆ ರಣಹದ್ದು (vulture) ಏಕಾಏಕಿ ದೈತ್ಯ ಸಿಂಹದ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಿಂಹ ಮುಂದೆ ಸಾಗದಂತೆ ಸಮಯ ನೀಡದೆ ದಾಳಿ ನಡೆಸಿವೆ. ಆದರೆ ಹೆದರದ ಸಿಂಹ ಭಯಾನಕವಾಗಿ ಪ್ರತಿದಾಳಿ (counter attack) ನಡೆಸಿದೆ.

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಯಾವುದೇ ವಿವರಗಳಿಲ್ಲ. ಕೆಲವರಿಗೆ ಇದು ಅಚ್ಚರಿ ಮೂಡಿಸಿದರೆ, ಇನ್ನು ಕೆಲವರು ಇದು AI ವಿಡಿಯೋ ಆಗಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.

Loin ಇಲ್ಲಿದೆ ನೋಡಿ ವಿಡಿಯೋ :

Uric Acid : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಏನ Magic ಆಗುತ್ತೇ ನೋಡಿ, ಯೂರಿಕ್ ಆಮ್ಲ (uric acid) ವು ದೇಹದಲ್ಲಿ ಶೇಖರಣೆಯಾಗುವ ಒಂದು ರೀತಿಯ ರಾಸಾಯನಿಕವಾಗಿದೆ. ಇದು ದೇಹದಲ್ಲಿ ಪ್ಯೂರಿನ್‌ಗಳು ಎಂಬ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ.

ಯುರಿಕ್‌ ಆಮ್ಲ್/Uric acid :

Uric Acid

ಇದನ್ನು ಓದಿ : Crime : ಕರ್ನಾಟಕದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್​​​ ಅವರ ಕಗ್ಗೊಲೆ.!

ಯೂರಿಕ್ ಆಮ್ಲ (uric acid)‌ ಹೆಚ್ಚಾಗುವುದರಿಂದ ಕೀಲು ನೋವು, ಮೂಳೆ ಸಮಸ್ಯೆಗಳು ಮತ್ತು ನಡೆಯಲು ತೊಂದರೆ ಉಂಟಾಗುತ್ತದೆ.

ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ. ದೀರ್ಘಕಾಲದವರೆಗೆ ಹೆಚ್ಚಿನ ಯೂರಿಕ್ ಆಮ್ಲದಿಂದಾಗಿ, ಕಿಡ್ನಿ ಕಲ್ಲಿನ ಸಮಸ್ಯೆಗೆ ಬಲಿಯಾಗಬಹುದು.

ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!

ದೇಹದಲ್ಲಿ ಹೆಚ್ಚಿದ ಯೂರಿಕ್ ಆಮ್ಲ (uric acid) ದ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಈ ಗಂಭೀರ ಸಮಸ್ಯೆಗೆ ಬಲಿಯಾಗುವುದನ್ನು ತಪ್ಪಿಸಬಹುದು.

ದೇಹದಲ್ಲಿ ಹೆಚ್ಚಿದ ಯೂರಿಕ್ ಆಮ್ಲ (uric acid) ವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಸೇವಿಸಬಹುದು.

ಇದನ್ನು ಓದಿ : Astrology : ಎಪ್ರಿಲ್‌ 21 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಹೇಗೆ ಸೇವಿಸುವುದು ಮತ್ತು ಅದರ ಪ್ರಯೋಜನಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.

ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳದ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ಯೂರಿಸೆಮಿಯಾ ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ, ಅದು ಕೀಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.

ಇದನ್ನು ಓದಿ : Drink : ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕ ; ವಿಡಿಯೋ ವೈರಲ್.!

ಯೂರಿಕ್ ಆಮ್ಲ (uric acid) ದ ಹೆಚ್ಚಳವು ಕೀಲುಗಳಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುವುದಲ್ಲದೆ, ಅದರ ಮಟ್ಟವನ್ನು ಹೆಚ್ಚಿಸುವುದರಿಂದ ಸಂಧಿವಾತ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗಬಹುದು.

ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು, ಆಹಾರಕ್ರಮದ ಬಗ್ಗೆ ವಿಶೇಷ ಗಮನ ನೀಡಬೇಕು. ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳ ಬಳಕೆಯು ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!

ಕರಿಬೇವಿನ ಎಲೆಗಳಲ್ಲಿ ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಇದು ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕರಿಬೇವಿನ ಎಲೆಗಳಲ್ಲಿರುವ ಗುಣಗಳು ಪ್ಯೂರಿನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಯೂರಿಕ್ ಆಮ್ಲ (uric acid) ದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿಬೇವು ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ದೇಹದಲ್ಲಿನ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!

ದೇಹದಲ್ಲಿ ಹೆಚ್ಚಿದ ಯೂರಿಕ್ ಆಮ್ಲ (uric acid) ದ ಮಟ್ಟವನ್ನು ಕಡಿಮೆ ಮಾಡಲು, ಕರಿಬೇವಿನ ಎಲೆಗಳನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಕರಿಬೇವಿನ ಎಲೆ ಪುಡಿಯನಿ ಬಿಸಿ ನೀರಿಗೆ ಬೆರೆಸಿ ಸೇವಿಸಿದರೆ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಯುರಿಕ್ ಆಸಿಡ್ ಅತಿಯಾದಾಗ ಮೊಸರಿನ ಬದಲು ಮಜ್ಜಿಗೆ ಸೇವಿಸುವುದು ದೇಹಕ್ಕೆ ಒಳ್ಳೆಯದು. ಮಜ್ಜಿಗೆಯಿಂದ ದೇಹವು ಹೈಡ್ರೇಟ್‌ ಆಗಿರುತ್ತದೆ. ಆದರೆ ಮಜ್ಜಿಗೆಗೆ ಇದನ್ನು ಬೆರೆಸಿಯೇ ಕುಡಿಯಬೇಕು. ಒಂದು ಲೋಟ ಮಜ್ಜಿಗೆಯಲ್ಲಿ 10 ರಿಂದ 15 ಕರಿಬೇವಿನ ಎಲೆಗಳನ್ನು ಸೇರಿಸಿ ಮುಚ್ಚಿಡಿ.

ಇದನ್ನು ಓದಿ : ಕೈದಿಗಳಿಗಾಗಿ ಮೊದಲ ಬಾರಿಗೆ “Sex Room” ಪ್ರಾರಂಭ ; ಯಾವ ದೇಶದಲ್ಲಿ ಗೊತ್ತಾ.?

ಸುಮಾರು 1 ಗಂಟೆಗಳ ಕಾಲ ಬಿಡಿ. ನಂತರ ಈ ಮಜ್ಜಿಗೆ ಕುಡಿಯಿರಿ. ಕರಿಬೇವಿನ ಎಲೆಗಳು ನಿಮ್ಮ ರಕ್ತದಲ್ಲಿನ ಯುರಿಕ್ ಆಸಿಡ್ (uric acid) ಪ್ರಮಾಣವನ್ನು ಕಡಿಮೆ ಮಾಡಬಹುದು. ಕರಿಬೇವು ಕಿಡ್ನಿ ಸ್ಟೋನ್‌ ನಿವಾರಣೆಗೂ ಉತ್ತಮ ಮನೆಮದ್ದಾಗಿದೆ.

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

acne face mapping

ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತಜ್ಞರು ಫೇಸ್‌ ಮ್ಯಾಪಿಂಗ್‌ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್‌ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.

ಮುಖದ ವೈಶಿಷ್ಟ್ಯಗಳು ಮತ್ತು ನಮ್ಮ ದೇಹದ ಅಂಗಗಳ ನಡುವೆ ಆಕರ್ಷಕ ಸಂಪರ್ಕವಿದೆ, ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೇಸ್ ಮ್ಯಾಪಿಂಗ್ ಎಂದೂ ಕರೆಯುತ್ತಾರೆ.

ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!

ಫೇಸ್ ಮ್ಯಾಪಿಂಗ್ ಎನ್ನುವುದು ಚರ್ಮದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸಲು (To determine skin health) ವಿವಿಧ ಮುಖದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಒಂದು ರೀತಿಯ ಚರ್ಮದ ಪರೀಕ್ಷೆಯಾಗಿದೆ.

ಹಾರ್ಮೋನುಗಳ ಅಸಮತೋಲನ, ನಿರ್ಜಲೀಕರಣ, ಸೂಕ್ಷ್ಮತೆಗಳು ಮತ್ತು ನಿರ್ಬಂಧಿಸಲಾದ ರಂಧ್ರಗಳಂತಹ (Dehydration, sensitivities and blocked pores) ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಮುಖದ ಭಾಗಗಳನ್ನು ಗ್ರಿಡ್ ವಿಧಾನವನ್ನು ಬಳಸಿಕೊಂಡು ಗುರುತಿಸಲಾಗುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!

ವಿಶ್ಲೇಷಣೆಯನ್ನು ಬಳಸಿಕೊಂಡು, ಚರ್ಮದ ಆರೈಕೆ ತಜ್ಞರು ಸಾಮಾನ್ಯ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಸೂಚಿಸಬಹುದು.

* ಗಲ್ಲ ಮತ್ತು ದವಡೆ :
ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು (Hormonal imbalance) ಸೂಚಿಸಬಹುದು. ಇನ್ನೂ ಗಂಡು ಮಕ್ಕಳಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಅದೇ ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್‌ ಭೇಟಿ ಮಾಡಬೇಕು.

ಇದನ್ನು ಓದಿ : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!

* ಮೂಗು :
ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರತಿಬಿಂಬವೇ ಆಗಿದೆ ಈ ಪ್ರದೇಶ. ಅಲ್ಲದೇ ಹೃದಯ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದೆ. ಇಲ್ಲಿ ಯಾವುದೇ ಕೆಂಪು ಅಥವಾ ಕಲೆಗಳು ಅಧಿಕ ರಕ್ತದೊತ್ತಡ, ಕಳಪೆ ರಕ್ತಪರಿಚಲನೆ (Poor circulation) ಅಥವಾ ಹೃದಯ ರಕ್ತನಾಳದ ಒತ್ತಡದಂತಹ ಆಧಾರವಾಗಿರುವ ಸಮಸ್ಯೆಗಳ ಸಂಕೇತವಾಗಿರಬಹುದು, ನಮ್ಮ ಹೃದಯದ ಆರೋಗ್ಯವನ್ನು ಹತ್ತಿರದಿಂದ ನೋಡಲು ಪ್ರೋತ್ಸಾಹಿಸುತ್ತದೆ.

* ಹಣೆ :
ಹಣೆಯ ಮೇಲಿನ ಬಿರುಕುಗಳು ಕಳಪೆ ಜೀರ್ಣಕ್ರಿಯೆ, ಉಬ್ಬುವುದು ಅಥವಾ ಒತ್ತಡವನ್ನು ಸೂಚಿಸಬಹುದು, ಜೀರ್ಣಕ್ರಿಯೆ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದೆ. ಸ್ಪಷ್ಟವಾದ ಚರ್ಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಂತರಿಕ ಅಸಮತೋಲನವನ್ನು ಪರಿಹರಿಸುವ ಅಗತ್ಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

* ಕೆನ್ನೆಗಳು :
ಈ ಪ್ರದೇಶವು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದೆ, ಕಲೆಗಳು ಅಥವಾ ಅಸಮತೋಲನದ ಮೂಲಕ ಉಸಿರಾಟದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ಸಂಕೇತಿಸುತ್ತದೆ, ಉಸಿರಾಟ ಮತ್ತು ಶ್ವಾಸಕೋಶದ ಕಾರ್ಯವನ್ನು ಪರಿಹರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.

* ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ಕಣ್ಣಿನ ಕೆಳಗೆ ತುಂಬಾ ನೀರು ಸೇರಿದ ರೀತಿ ಇದ್ದರೆ ಅಥವಾ ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ (It means that the kidneys are not working properly). ಲೇಟ್‌ ನೈಟ್‌ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು.

ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!

* ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ, ಬಾಯಿಯ ಎರಡೂ ಕಡೆಗಳಲ್ಲಿಯೂ ಮೊಡವೆ ಉಂಟಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Tiger : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಪಿಲಿಭಿತ್ ಹುಲಿ (Tiger) ಅಭಯಾರಣ್ಯದಲ್ಲಿ ಹುಲಿಯೊಂದು ಹೆಬ್ಬಾವನ್ನು ತಿಂದ ವಿಡಿಯೋ (Video) ವೈರಲ್ ಆಗುತ್ತಿದೆ.

ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಲಿಯೊಂದು ಹೆಬ್ಬಾವನ್ನು ತಿಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಕಾಡಿನ ರಸ್ತೆಯಲ್ಲಿ ಬೇಟೆ ಅರಸಿ ಬಂದ ಹುಲಿಯೊಂದು ಆಹಾರಕ್ಕಾಗಿ ಅತ್ತ ಇತ್ತ ನೋಡಿದ್ದು ಈ ವೇಳೆ ರಸ್ತೆ ಬದಿಯಲ್ಲಿ ಹೆಬ್ಬಾವು ಕಂಡಿದೆ.

ಹತ್ತಿರ ಹೋಗಿ ನೋಡಿದ ಹುಲಿ ಅದನ್ನು ತನ್ನ ಕಾಲಿನಿಂದ ಸ್ಪರ್ಶ ಮಾಡಿದೆ.ಅಷ್ಟು ಹೊತ್ತಿಗಾಗಲೇ ಹಾವು ಸತ್ತಿತ್ತು. ಈ ವೇಳೆ ನೋಡ ನೋಡುತ್ತಲೇ ಹುಲಿ ಹಾವನ್ನು ತಿಂದಿದೆ. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ.

ಇದನ್ನು ಓದಿ : Crocodile : ನದಿಯಲ್ಲಿ ಜೀವಂತ ಮೊಸಳೆಯನ್ನು ಅಪ್ಪಿಕೊಂಡ ವ್ಯಕ್ತಿ.!

ಬಳಿಕ ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಇದರಿಂದ ಪ್ರವಾಸಿಗರು ಅಚ್ಚರಿಗೊಂಡಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿತು.

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಫಿಲಿಬಿಟ್ ಅರಣ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹುಲಿ ಆರೋಗ್ಯದ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Tiger ಇಲ್ಲಿದೆ ನೋಡಿ ವಿಡಿಯೋ :

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.! 

ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತ ಜ್ಞರು ಫೇಸ್‌ ಮ್ಯಾಪಿಂಗ್‌ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್‌ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.