ಜನಸ್ಪಂದನ ನ್ಯೂಸ್, ಡೆಸ್ಕ್ : ಗುಲಾಬಿ ದಳಗಳನ್ನು ಸೌಂದರ್ಯಕ್ಕೆ (beauty) ಮಾತ್ರವಲ್ಲದೆ ಔಷಧವಾಗಿಯೂ ಬಳಸಬಹುದು. ಗುಲಾಬಿ ಹೂವುಗಳು ಅನೇಕ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿವೆ. ಗುಲಾಬಿಗಳು ಆರೋಗ್ಯ ಮತ್ತು ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಹಳ ಉಪಯುಕ್ತವಾಗಿವೆ.
ಗುಲಾಬಿ ದಳಗಳಲ್ಲಿ (rose petals) ವಿಟಮಿನ್ ಎ, ಸಿ, ಇ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಗುಲಾಬಿ ಎಣ್ಣೆಯಿಂದ ತಯಾರಿಸಿದ ರೋಸ್ ವಾಟರ್ ಅನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಗುಲಾಬಿ ಹೂವುಗಳಿಂದ ತೆಗೆದ ಎಣ್ಣೆಯನ್ನು ಶತಮಾನಗಳಿಂದಲೂ ಸುಗಂಧ ದ್ರವ್ಯಗಳಲ್ಲಿ (perfumes) ಬಳಸಲಾಗುತ್ತಿದೆ.
ಇನ್ನೂ ಗುಲಾಬಿ ದಳಗಳನ್ನು ತಿಂದರೆ ಅನೇಕ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?
ಇದನ್ನು ಓದಿ : ಮತ್ತೆ ಡೀಪ್‌ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ ; ಡೀಪ್‌ಫೇಕ್ ವಿಡಿಯೋ Viral.!
ಮುಖದ ಮೇಲಿನ ಕಲೆಗಳು (spots in face) ದೂರವಾಗುತ್ತವೆ. ದಿನಂಪ್ರತಿ ಸೇವಿಸಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತೆ.
ದಿನವೂ ಗುಲಾಬಿ ದಳಗಳನ್ನು ತಿನ್ನುತ್ತಾ ಹೋದರೆ, ಹೃದಯದ ಸಮಸ್ಯೆ ನಿಯಂತ್ರಣವಾಗುತ್ತದೆ.
ಗುಲಾಬಿ ಹೂವಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ (anti bacterial) ಗುಣಲಕ್ಷಣಗಳು ಇದ್ದು, ಚರ್ಮವನ್ನು ಒಳಗಿನಿಂದ ಸ್ವಚ್ಛಪಡಿಸುತ್ತದೆ.
ಗುಲಾಬಿ ದಳದಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ದೇಹದ ಜೀರ್ಣಶಕ್ತಿಯನ್ನು (digest) ಹೆಚ್ಚು ಮಾಡುವ ಗುಣ ಕೂಡ ಇದೆ.
ನಿಮ್ಮ ದೇಹದ ತೂಕ ನಿಯಂತ್ರಣದಲ್ಲಿ ಮಾಡಲು ಗುಲಾಬಿ ಹೂವು ಸಹಾಯ ಮಾಡುತ್ತೆ.
ಸ್ನಾನ ಮಾಡುವಾಗ (bathing) ಬಿಸಿ ನೀರಿಗೆ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ, ಗುಲಾಬಿ ಹೂವಿನ ಸುವಾಸನೆ ನಿಮ್ಮ ಮನಸ್ಸನ್ನು ಮುದಗೊಳಿಸುತ್ತದೆ.
ಮೂಲವ್ಯಾಧಿ ಸಮಸ್ಯೆ ಇರುವವರು ಗುಲಾಬಿ ದಳ ಸೇವಿಸುವುದು ಒಳ್ಳೆಯದು.
ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ.
ದೇಹದ ಆಯಾಸ ಮತ್ತು ಒತ್ತಡ, ನಿದ್ರಾಹೀನತೆ (Insomnia) ಮತ್ತು ಸುಸ್ತು ಜೊತೆಗೆ ದೇಹದ ಕಿರಿಕಿರಿಯನ್ನು ಗುಲಾಬಿ ಹೂವಿನ ದಳಗಳು ಕಡಿಮೆ ಮಾಡುತ್ತವೆ.
ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ಗುಲಾಬಿ ದಳಗಳಲ್ಲಿ ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು (metabolism process) ಉತ್ತಮ ಪಡಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ.
ತಾಜಾ ಗುಲಾಬಿ ದಳಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿ (cinnamon) ಪುಡಿ ಹಾಕಿ ಮಿಶ್ರಣ ಮಾಡಬೇಕು. ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಕುಡಿದ್ರೆ ನಿಮ್ಮ ಬೊಜ್ಜು ಕರಗಲು ಸಹಾಯವಾಗುತ್ತೆ.
ಇದನ್ನು ಓದಿ : 5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಕುರಿತು ಹೈಕೋರ್ಟ್ ಮಹತ್ವದ ಆದೇಶ.!
ಗುಲಾಬಿ ಹೂವಿನ ವಾಸನೆಯನ್ನು ಕುಡಿಯುವುದರಿಂದ ಶ್ವಾಸಕೋಶದ ಸಮಸ್ಯೆ ಪರಿಹಾರವಾಗುತ್ತದೆಯಂತೆ.
ವಯಸ್ಸಾಗುವಿಕೆ ಪ್ರಕ್ರಿಯೆಯನ್ನು (aging process) ದೂರವಿರಿಸುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.