Saturday, July 27, 2024
spot_img
spot_img
spot_img
spot_img
spot_img
spot_img

ಮತ್ತೆ ಮೂವರಿಗೆ ಭಾರತ ರತ್ನ ಘೋಷಿಸಿದ ನರೇಂದ್ರ ಮೋದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ಸರ್ಕಾರವು ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್​, ಚೌಧರಿ ಚರಂಣ್ ಸಿಂಗ್​ ಹಾಗೂ ಹಸಿರುವ ಕ್ರಾಂತಿಯ ಪಿತಾಮಹ ಎಂ.ಎಸ್​ ಸ್ವಾಮಿನಾಥನ್​ ಅವರಿಗೆ ಭಾರತ ರತ್ನ ಪುರಸ್ಕಾರಕ್ಕೆ (award) ಆಯ್ಕೆ ಮಾಡಿದೆ.

ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್, ಚರಣ್​ ಸಿಂಗ್ ಚೌಧರಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್​ ಅವರು ಭಾರತಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಅರಿತು ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ (Highest civilian award) ಭಾರತ ರತ್ನ ಪುರಸ್ಕಾರವನ್ನು ನೀಡಲು ತೀರ್ಮಾನಿಸಿದೆ.

ಇದನ್ನು ಓದಿ : ಕರ್ನಾಟಕದ ಹಿರಿಯ IPS ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ.!

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇನ್ನೂ 2023-24ನೇ ಸಾಲಿನಲ್ಲಿ ಬಿಹಾರದ ಖ್ಯಾತ ಸಮಾಜವಾದಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್​ ಅವರಿಗೆ ಮರಣೋತ್ತರವಾಗಿ ಇದೇ ಜ.23 ರಂದು ಭಾರತ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.

ಇದನ್ನು ಓದಿ : ಫೇಸ್‌ಬುಕ್ ಲೈವ್‌ನಲ್ಲಿ ಗುಂಡಿನ ದಾಳಿ ನಡೆಸಿ ರಾಜಕೀಯ ನಾಯಕನ ಹತ್ಯೆ ; ವಿಡಿಯೋ Viral.!

ಬಳಿಕ ದೇಶದ ಮಾಜಿ ಉಪಪ್ರಧಾನಿ (Ex Deputy Prime Minister) ಲಾಲ್ ಕೃಷ್ಣ ಅಡ್ವಾಣಿಯವರಿಗೂ ಭಾರತ ರತ್ನವನ್ನು ಘೋಷಣೆ ಮಾಡಲಾಯಿತು. ಇದೀಗ ಮತ್ತೆ ಮೂವರು ನಾಯಕರಿಗೆ ಭಾರತ ಸರ್ಕಾರ ಭಾರತ ರತ್ನವನ್ನು ಘೋಷಿಸಿದೆ ಎಂದು ತಿಳಿದು ಬಂದಿದೆ.

spot_img
spot_img
- Advertisment -spot_img