ಜನಸ್ಪಂದನ ನ್ಯೂಸ್, ಡೆಸ್ಕ್ : ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕನ ಪುತ್ರ (son) ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ.
ಶಿವಸೇನೆಯ ಯುಬಿಟಿ ನಾಯಕನ ಮಗ ಅಭಿಷೇಕ್ ಘೋಸಲ್ಕರ್ ಅವರೊಂದಿಗೆ ಫೇಸ್‌ಬುಕ್ ಲೈವ್ (Facebook live) ಮಾಡುತ್ತಿದ್ದ ವ್ಯಕ್ತಿಯೇ ಅವರಿಗೆ ಶೂಟ್ ಮಾಡಿ ಹತ್ಯೆಗೈದಿದ್ದಾನೆ. ತಾನು ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಅಫೇರ್ ; ಲವರ್ ಮಾಡಿದ್ದೇನು.?
ಮುಂಬೈನ ದಹಿಸರ್ ಪ್ರದೇಶದ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫೇಸ್‌ಬುಕ್ ಲೈವ್‌ನ ಘಟನೆಯ ದೃಶ್ಯ ಸದ್ಯ ವೈರಲ್ ಆಗಿದೆ.
ಮೃತ ಅಭಿಷೇಕ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾಜಿ ಕೌನ್ಸಿಲರ್ (councillor) ವಿನೋದ್ ಘೋಸಲ್ಕರ್ ಅವರ ಪುತ್ರರಾಗಿದ್ದಾರೆ.
ಕೆಲವು ಭಿನ್ನಾಭಿಪ್ರಾಯಗಳ ನಂತರ ಇಬ್ಬರು ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ವೆಬ್‌ಕಾಸ್ಟ್ ಆಗುತ್ತಿರುವ ಕಾರ್ಯಕ್ರಮಕ್ಕಾಗಿ ಘೋಸಲ್ಕರ್ ಅವರನ್ನು ಅವರ ಕಚೇರಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರ ಮೇಲೆ ಗುಂಡು ಹೊಡೆದು ಹತ್ಯೆ ಮಾಡಲಾಯಿತು.
ಇದನ್ನು ಓದಿ : ಕರಿಮಣಿ ಮಾಲೀಕ ಹಾಡಿಗೆ ಹೊಸ ಟ್ವಿಸ್ಟ್ ಕೊಟ್ಟ ನಾನು ನಂದಿನಿ ಖ್ಯಾತಿಯ ವಿಕಾಸ್ ; Video viral.!
ಮಾರಿಸ್ ಭಾಯ್’ ಎಂದು ಜನಪ್ರಿಯವಾಗಿ ಕರೆಯಲಾಗುವ ಮಾರಿಸ್ ನೊರೊನ್ಹಾ ಅವರ ಕಚೇರಿಗೆ (office) ಅಭಿಷೇಕ್ ಘೋಸಲ್ಕರ್ ಅವರು ಹೋಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
Is underworld back in Mumbai in different form? Earlier BJP MLA opened fire in police station. Now, Shiv Sena (UBT) leader Abhishek Ghosalkar, son of fr Sena MLA Vinod Ghosalkar was shot at Dahisar during Facebook live. Morris who had got past criminal records shot at Ghosalkar pic.twitter.com/5PY964oOn4
— Sudhir Suryawanshi (@ss_suryawanshi) February 8, 2024