ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಸರಕಾರವು ಗೃಹಲಕ್ಷ್ಮೀ (Gruhalaxmi), ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿ ಮಾಡಿದೆ. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ. ಅಷ್ಟಕ್ಕೂ ಸರಕಾರದ ಹೊಸ ರೂಲ್ಸ್ ಏನಂತ ತಿಳಿಯೋಣ ಬನ್ನಿ.
ಅರ್ಹರಾಗಿದ್ದರೂ ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಪಡಿತರ ಕಾರ್ಡುದಾರರಿಗೆ ಇನ್ಮುಂದೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ. ಸರಕಾರ ಆದಾಯ ತೆರಿಗೆ ಪಾವತಿದಾರರಿಗೆ, ಸರಕಾರಿ ನೌಕರರಿಗೆ (government employees), ನಾಲ್ಕು ಚಕ್ರದ ವಾಹನ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಇದೇ ಮಾನದಂಡವನ್ನೇ ಇದೀಗ ಗೃಹಲಕ್ಷ್ಮೀ ಯೋಜನೆಗೆ ಪ್ರಯೋಗಿಸುತ್ತಿದೆ.
ಇದನ್ನು ಓದಿ : ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಅಫೇರ್ ; ಲವರ್ ಮಾಡಿದ್ದೇನು.?
ಈ ಯೋಜನೆಗಳಿಗೆ ನೀವು ಅನರ್ಹರೇ.?
ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಯಾರ ಹೆಸರು ಅನರ್ಹರ (Ineligible) ಪಟ್ಟಿ ಸೇರ್ಪಡೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ : https://ahara.kar.nic.in/Home/EServices ಭೇಟಿ ನೀಡಿ, ನಂತರ ರೇಷನ್ ಕಾರ್ಡ್ ಎಂದು ಸೂಚಿಸುವ ಟ್ಯಾಬ್ ಓಪನ್ ಮಾಡಬೇಕು.
ರೇಷನ್ ಕಾರ್ಡ್ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆಯೇ ನಿಮಗೆ ಯಾವೆಲ್ಲಾ ಕಾರ್ಡುಗಳನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ದೊರೆಯುವುದು.
ಇದನ್ನು ಓದಿ : ಮತ್ತೆ ಮೂವರಿಗೆ ಭಾರತ ರತ್ನ ಘೋಷಿಸಿದ ನರೇಂದ್ರ ಮೋದಿ.!
ಇನ್ನು ಜಿಲ್ಲೆ, ತಾಲೂಕು, ತಿಂಗಳು ಹಾಗೂ ವರ್ಷವನ್ನು ನಮೂದಿಸಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಇಲ್ಲವೇ ಅನ್ನೋದು ತಿಳಿಯಲಿದೆ. ಗೃಹಲಕ್ಷ್ಮೀ ಅನರ್ಹರ ಪಟ್ಟಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. ಒಂದೊಮ್ಮೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ರೆ ನೀವು ನಿಮಗೆ ಇನ್ಮುಂದೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ (scheme) ಹಣ ಸಿಗೋದಿಲ್ಲ ಕಣ್ರೀ.