ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿ ನಡುವೆ ಪ್ರೇಮ ಸಂಬಂಧಗಳಿಂದಾಗಿ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಗಂಡನನ್ನು ಬಿಟ್ಟು ಪ್ರೇಮಿ (Lover) ಯೊಂದಿಗೆ ಮಹಿಳೆಯರು ಪರಾರಿಯಾಗುವ ಸುದ್ದಿಗಳು ಸಾಮಾನ್ಯವಾಗಿರುವಾಗ, ಇತ್ತೀಚಿನ ಒಂದು ಘಟನೆ ಹಲವರ ಮನಸ್ಸನ್ನು ತಟ್ಟಿದೆ.
ಕುಟುಂಬದ ಬದಲು ಪ್ರೇಮಿ (Lover) ಯನ್ನೇ ಆಯ್ಕೆ ಮಾಡಿಕೊಂಡ ಮಹಿಳೆ, ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೊರಡುವ ನಿರ್ಧಾರ ಕೈಗೊಂಡಿದ್ದಾಳೆ. ಆ ವೇಳೆ, ತಾಯಿಯನ್ನು ಕಳೆದುಕೊಳ್ಳಬಾರದೆಂದು ಮಕ್ಕಳು ಅಳುತ್ತಾ “ಹೋಗಬೇಡಮ್ಮ, ನೀನು ನಮಗೆ ಬೇಕು, ದಯವಿಟ್ಟು ಇಲ್ಲೇ ಇರು” ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿದೆ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ತಾಯಿಯನ್ನು ತಡೆಯಲು ಅಳುತ್ತಾ ಬೇಡಿಕೊಳ್ಳುತ್ತಿರುವ ಮಕ್ಕಳ ಹತಾಶ ಸ್ಥಿತಿ ಕಂಡುಬರುತ್ತದೆ. ಕೊನೆಯ ಅವಕಾಶಕ್ಕಾಗಿ ಮುದ್ದಾದ ಮಕ್ಕಳ ಧ್ವನಿಯಲ್ಲಿ ಕೇಳಿಬಂದ ಮನವಿ ಕಣ್ಣೀರನ್ನು ತರಿಸುವಂತಿತ್ತು.
ಈ ವಿಡಿಯೋವನ್ನು ಮಿಸ್ ಮೋಹಿನಿ ಎಂಬವರು ಎಕ್ಸ್ (ಹಳೆಯ Twitter) ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಾಯಿಯ ಪ್ರೀತಿ ಎಂದಿಗೂ ಶುದ್ಧ ಮತ್ತು ನಿಷ್ಕಪಟವಾಗಿರುತ್ತದೆ.
Police : ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!
ಆದರೆ ಅದು ಸ್ವಾರ್ಥಕ್ಕೆ ತಿರುಗಿದರೆ, ಮಾನವೀಯತೆ ನಶಿಸುತ್ತಿದೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ” ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಕರ (Lover) ನ ಜೊತೆ ಹೊರಟ ತಾಯಿ ರೂಪದ ಹೆಮ್ಮಾರಿಯ ವಿಡಿಯೋ :
Wife Divorce Husband to Stay With Lover; Kids Beg Her Not to Leave !!
.
.#wifelife #divorce #marriedlife pic.twitter.com/bXULkZ7YO3— MissMohini (@MohiniWealth) August 29, 2025
Courtesy : TV9 Kannada