Tuesday, October 14, 2025

Janaspandhan News

HomeHealth & FitnessSugar : "ಬೆಳಗ್ಗೆ ಎದ್ದಾಗ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಾಗಿದೆ...
spot_img
spot_img
spot_img

Sugar : “ಬೆಳಗ್ಗೆ ಎದ್ದಾಗ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಾಗಿದೆ ಎಂಬ ಸಂಕೇತ”

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧುಮೇಹ ಅಥವಾ ಸಕ್ಕರೆ (Sugar) ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವ ಹಾಗೂ ಜೀವನಪರ್ಯಂತ ಗಮನ ನೀಡಬೇಕಾದ ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಶೇಕಡಾ 100 ರಷ್ಟು ಗುಣಪಡಿಸಲು ಸಾಧ್ಯವಿಲ್ಲವಾದರೂ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಸಾಧ್ಯ.

ತಜ್ಞರ ಪ್ರಕಾರ, ಮಧುಮೇಹ ರೋಗಿಗಳಲ್ಲಿ ಪದೇಪದೇ ಮೂತ್ರ ವಿಸರ್ಜನೆ, ತೀವ್ರ ದಾಹ, ಹಸಿವು ಏರಿಳಿತ, ಅನಿರೀಕ್ಷಿತವಾಗಿ ಬಳಲಿದಂತೆ ಕಾಣುವುದು, ಬೆವರುವುದು ಮತ್ತು ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

ಈ ರೀತಿಯ ಸೂಚನೆಗಳನ್ನು ನಿರ್ಲಕ್ಷಿಸಿದರೆ ಮಧುಮೇಹವು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಳಗಿನ ಜಾವ ಎದ್ದ ಕೂಡಲೇ,

  • ತುಂಬಾ ದಣಿದಂತೆ ಅನುಭವಿಸುವುದು,
  • ಗಂಟಲು ಒಣಗುವುದು,
  • ಹಸಿವು ಏಕಾಏಕಿ ಹೆಚ್ಚುವುದು ಅಥವಾ ಕಡಿಮೆಯಾಗುವುದು ಇವೇಲ್ಲಾ ಮಧುಮೇಹದ ಪ್ರಮುಖ ಎಚ್ಚರಿಕೆ ಲಕ್ಷಣಗಳಾಗಿವೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಇಂತಹ ಸಂದರ್ಭಗಳಲ್ಲಿ ತಕ್ಷಣವೇ ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಈ ಪರೀಕ್ಷೆಯನ್ನು ಮನೆಯಲ್ಲಿ ಗ್ಲುಕೋಮೀಟರ್ ಮೂಲಕ ಅಥವಾ ಲ್ಯಾಬ್‌ನಲ್ಲಿ ಮಾಡಿಸಿಕೊಳ್ಳಬಹುದು.

ಮಧುಮೇಹ ನಿಯಂತ್ರಣಕ್ಕಾಗಿ ಕೇವಲ ಔಷಧಿ ಮಾತ್ರವಲ್ಲ, ಜೀವನಶೈಲಿಯಲ್ಲಿಯೂ ಬದಲಾವಣೆ ಮಾಡುವುದು ಬಹಳ ಮುಖ್ಯ. ದಿನವೂ ಕನಿಷ್ಠ ಅರ್ಧ ಗಂಟೆ ನಡೆದುಬರುವುದು ಅಥವಾ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ (Sugar) ಮಟ್ಟ ಸಮತೋಲನದಲ್ಲಿರುತ್ತದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಜೊತೆಗೆ ಅತಿಯಾಗಿ ಸಕ್ಕರೆ (Sugar) , ಹಿಟ್ಟು ಹಾಗೂ ಉಪ್ಪಿನ ಸೇವನೆ ತಪ್ಪಿಸುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡುವುದು, ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಕನಿಷ್ಠ ಎಂಟು ಗಂಟೆಗಳ ನಿದ್ರೆ ಪಡೆಯುವುದು ಆರೋಗ್ಯ ಕಾಪಾಡುವ ಪ್ರಮುಖ ಅಂಶಗಳು.

ಅದರ ಜೊತೆಗೆ ಆಹಾರದಲ್ಲಿ ಸಮತೋಲನ ಕಾಪಾಡುವುದು ಬಹಳ ಮುಖ್ಯ. ವಿವಿಧ ಪೌಷ್ಟಿಕಾಂಶಗಳಿರುವ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್‌ಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ತಜ್ಞರ ಸಲಹೆಯಂತೆ, ಬೆಳಗ್ಗೆ ಚುರುಕು ಜೀವನಶೈಲಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ ದೇಹದ ಹಾರ್ಮೋನ್ ಲಯ ಸಹಜವಾಗಿ ನಿಯಂತ್ರಣದಲ್ಲಿರುತ್ತದೆ ಮತ್ತು ಸಕ್ಕರೆ (Sugar) ಮಟ್ಟ ಕೂಡ ಸಮತೋಲನದಲ್ಲಿರುತ್ತದೆ.

ಆದ್ದರಿಂದ, ಮಧುಮೇಹವು ಗಂಭೀರ ಕಾಯಿಲೆ ಎಂಬುದನ್ನು ಮನಗಂಡು, ಆಹಾರ, ವ್ಯಾಯಾಮ ಮತ್ತು ನಿದ್ರೆಯಲ್ಲಿ ಸಮತೋಲನ ಸಾಧಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.


“Canara Bank ನಲ್ಲಿ 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಅರ್ಜಿ ಪ್ರಕ್ರಿಯೆ ಆರಂಭ”.!

Canara

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕೆನರಾ ಬ್ಯಾಂಕ್ (Canara Bank) ಪ್ರಸ್ತುತ ಭಾರತದೆಲ್ಲೆಡೆ ಒಟ್ಟು 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 12, 2025ರೊಳಗೆ ಅಧಿಕೃತ ವೆಬ್‌ಸೈಟ್ canarabank.com ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಮೊದಲು ಅಪ್ರೆಂಟಿಸ್ ಪೋರ್ಟಲ್ (www.nats.education.gov.in) ನಲ್ಲಿ 100% ಸಂಪೂರ್ಣ ಪ್ರೊಫೈಲ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಬೇರೆ ಯಾವುದೇ ಅರ್ಜಿ ವಿಧಾನವನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ.

“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
 Canara Bank ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳು : 3,500.
  • ಹುದ್ದೆಗಳ ಹಂಚಿಕೆ : ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ.
ಅರ್ಹತೆ :
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
  • ಪದವಿ ಜನವರಿ 01, 2022 ಮತ್ತು ಸೆಪ್ಟೆಂಬರ್ 01, 2025ರೊಳಗೆ ಪೂರ್ತಿಯಾಗಿರಬೇಕು.
  • ಸ್ಥಳೀಯ ಭಾಷಾ ಪರೀಕ್ಷೆ ಕಡ್ಡಾಯ (10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಸ್ಥಳೀಯ ಭಾಷೆ ಇಲ್ಲದಿದ್ದರೆ).
  • ಅಭ್ಯರ್ಥಿಗಳು ಕೆನರಾ ಬ್ಯಾಂಕ್ ವೈದ್ಯಕೀಯ ನಿಯಮಾವಳಿಗಳ ಪ್ರಕಾರ ದೈಹಿಕ/ವೈದ್ಯಕೀಯವಾಗಿ ಫಿಟ್ ಆಗಿರಬೇಕು.
ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 
ವಯೋಮಿತಿ :
  • ಕನಿಷ್ಠ: 20 ವರ್ಷ.
  • ಗರಿಷ್ಠ: 28 ವರ್ಷ.
  • ಜನನ ದಿನಾಂಕ: ಸೆಪ್ಟೆಂಬರ್ 01, 1997 ಮತ್ತು ಸೆಪ್ಟೆಂಬರ್ 01, 2005ರ ನಡುವೆ ಇರಬೇಕು.
  • ಎಸ್ಸಿ/ಎಸ್ಟಿ, ಒಬಿಸಿ, ದಿವ್ಯಾಂಗ ಮತ್ತು ಇತರ ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ : ರೂ.500/-
  • ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ.
  • ಪಾವತಿ ವಿಧಾನ : ಆನ್‌ಲೈನ್ ಮೂಲಕ ಮಾತ್ರ.
Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್ canarabank.com ಗೆ ಭೇಟಿ ನೀಡಿ.
  2. Recruitment → Apprentice Application Link ಕ್ಲಿಕ್ ಮಾಡಿ.
  3. ನೋಂದಣಿ ಮಾಡಿ, ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ :
  • ಮೆರಿಟ್ ಪಟ್ಟಿ.
  • ಸ್ಥಳೀಯ ಭಾಷಾ ಪರೀಕ್ಷೆ.
  • ದಾಖಲೆ ಪರಿಶೀಲನೆ.
  • ವೈದ್ಯಕೀಯ ಫಿಟ್ನೆಸ್ ಪರೀಕ್ಷೆ.
Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
ಅಪ್ರೆಂಟಿಸ್ ಅವಧಿ :
  • ಒಟ್ಟು 12 ತಿಂಗಳುಗಳು.

Note : ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪೂರ್ಣ ಅರ್ಹತಾ ನಿಯಮಗಳು, ಅಭ್ಯರ್ಥಿಗಳು ಕೆನರಾ ಬ್ಯಾಂಕ್‌ (Canara Bank) ನ ಅಧಿಕೃತ ಅಧಿಸೂಚನೆ ಓದುವುದು ಕಡ್ಡಾಯ.


- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments