HomeViral Videoಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ: ಬಣ್ಣಗಳಲ್ಲಿ ಮಿಂದೆದ್ದ ದೃಶ್ಯ ವೈರಲ್.
spot_img
spot_img

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ: ಬಣ್ಣಗಳಲ್ಲಿ ಮಿಂದೆದ್ದ ದೃಶ್ಯ ವೈರಲ್.

ಜನಸ್ಪಂದನ ನ್ಯೂಸ್, ಡೆಸ್ಕ್ : ಬಣ್ಣಗಳ ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದು ಹೋಳಿ ಹಬ್ಬ. ದೇಶದ ವಿವಿಧ ಭಾಗಗಳಲ್ಲಿ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ಸಿಹಿ ಹಂಚಿಕೊಂಡು, ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

ಇದೇ ಸಂಭ್ರಮದ ಮಧ್ಯೆ ನಡೆದ ಒಂದು ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಹೆಚ್ಚು ಗಮನ ಸೆಳೆಯುತ್ತಿದೆ. ಹೋಳಿ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಜನರ ಜೊತೆಗೂಡಿ ಕೆಲ ಕೋತಿಗಳು ಸಹ ಬಣ್ಣಗಳಲ್ಲಿ ಮಿಂದೆದ್ದಿರುವ ದೃಶ್ಯ ವೈರಲ್ ಆಗಿದೆ.

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟದ ವಿಡಿಯೋ :

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಣ್ಣಗಳನ್ನು ಕೈಯಲ್ಲಿ ಹಿಡಿದು ಎರಚುವಂತೆ ಕಾಣುತ್ತಿರುವ ಕೋತಿಗಳ ವರ್ತನೆ ಅಲ್ಲಿ ಇದ್ದವರ ಗಮನ ಸೆಳೆದಿದೆ.

ಹಬ್ಬದ ವಾತಾವರಣ (ಕೋತಿಗಳ ಓಕುಳಿಯಾಟ) ದಲ್ಲಿ ಮೋಜು ಮಾಡಿದ ಕೋತಿಗಳು :

ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಜನರು ಹೋಳಿ ಆಟದಲ್ಲಿ ತೊಡಗಿಕೊಂಡಿರುವಾಗ ಕೋತಿಗಳು ಕೂಡ ಅಲ್ಲಿಗೆ ಬಂದಿರುವುದು ಕಾಣಿಸುತ್ತದೆ.

ಬಣ್ಣದಿಂದ ನೆನೆದುಹೋದ ಅವುಗಳು ರಸ್ತೆಯಲ್ಲಿದ್ದ ಬಣ್ಣವನ್ನು ಎತ್ತಿ ಎರಚುತ್ತಿರುವಂತೆ ಕಾಣುತ್ತವೆ. ಈ ದೃಶ್ಯವನ್ನು ನೋಡಿ ಅಲ್ಲಿದ್ದ ಕೆಲವರು ನಗುತ್ತಾ ಆ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ಹೋಳಿ ಹಬ್ಬದ ಉತ್ಸಾಹವನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದು, “ಪ್ರಕೃತಿಯೂ ಹಬ್ಬದಲ್ಲಿ ಪಾಲ್ಗೊಂಡಂತೆ” ಎಂಬ ಅಭಿಪ್ರಾಯಗಳು ನೆಟ್ಟಿಗರಿಂದ ವ್ಯಕ್ತವಾಗುತ್ತಿವೆ.

ಕೋತಿಗಳ ಓಕುಳಿಯಾಟ ; ನೆಟ್ಟಿಗರ ಪ್ರತಿಕ್ರಿಯೆ :

ವೈರಲ್ ಆಗಿರುವ ಈ ದೃಶ್ಯಕ್ಕೆ ಹಲವರು ಹಾಸ್ಯಭರಿತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು “ಕೋತಿಗಳಿಗೂ ಹೋಳಿ ಖುಷಿ” ಎಂದು ಕಾಮೆಂಟ್ ಮಾಡಿದ್ದರೆ.

ಇನ್ನೂ ಕೆಲವರು ಈ ರೀತಿಯ ಸಂದರ್ಭಗಳಲ್ಲಿ ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬ ಸಂದೇಶ ನೀಡುತ್ತಿದ್ದಾರೆ.

ಈ ಸುದ್ದಿನು ಓದಿ : ಲಿಫ್ಟ್ ಯಾಂತ್ರಿಕ ದೋಷದಿಂದ ಅಪ್ಪಚ್ಚಿಯಾದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್.

ಹೋಳಿ ಹಬ್ಬವು ಒಗ್ಗಟ್ಟು ಮತ್ತು ಸಂತೋಷದ ಪ್ರತೀಕ. ಆದರೆ ಹಬ್ಬಗಳನ್ನು ಆಚರಿಸುವ ವೇಳೆ ಪರಿಸರ ಹಾಗೂ ಪ್ರಾಣಿಗಳ ಸುರಕ್ಷತೆಗೂ ಆದ್ಯತೆ ನೀಡುವುದು ಅಗತ್ಯ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.


Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ವಿಡಿಯೋ ಮತ್ತು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಷಯಗಳ ಆಧಾರಿತವಾಗಿವೆ. ಇದರ ನಿಖರ ಸ್ಥಳ, ದಿನಾಂಕ ಹಾಗೂ ಸಂದರ್ಭವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.

ವಿಡಿಯೋದಲ್ಲಿನ ದೃಶ್ಯಗಳು ಯಾರನ್ನಾದರೂ ಅಥವಾ ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶದಿಂದ ಪ್ರಕಟಿಸಲಾಗಿಲ್ಲ. ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಪ್ರಾಣಿಗಳು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಜಾಗರೂಕತೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments